ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಮುತ್ತಿನಂಥ ಮಾತು’ ಎನ್ನುವ ಗೀತೆಯನ್ನು ಆರಿಸಿ ಪ್ರಕಟಿಸಿದ್ದೇವೆ.
ಮುತ್ತಿನಂಥ ಮಾತು
ಮುತ್ತಿನಂಥ ಮಾತು ಹೇಳತೀನಿ ತಂಗಿ
ನೀತಿವಂತಳಾಗಿ ಬಾಳಬೇಕು ತಂಗಿ ॥ಪ॥
ಮಾತು ಹೇಳತೀನಿ ಅಂತ ಬೈದು ಬುದ್ಧಿ ಹೇಳಿ
ದಾರಿ ತೋರಿಸೋ ಮಾತು ಕೇಳಿ ಸಿಟ್ಟಾಗಿ ಬದಲು
ನುಡಿಯ ಬೇಡಾ ಕೆಟ್ಟದ್ದೆಲ್ಲ ಸುಟ್ಟು ಹಾಕು ದಿಟ್ಟತನದಿ ಬಾಳಬೇಕು,
ಕೆಟ್ಟ ಜನರ ಸಹವಾಸ ಮಾಡಬೇಡ ॥೧॥
ಚಾಡಿ ಮಾತು ಕೇಳಿ ನೀನು ಜಾರಿ ಬೀಳಬೇಡ
ಬಿದ್ದ ಮೇಲೆ ಮಾನ ಉಳಿಯೋದಿಲ್ಲ
ಶೀಲ ಹೋದರೆ ಸತ್ತಂಗ ಗಡಿ ಒಡಿದರೆ ಬಾರದಂಗ
ಹೆಣ್ಣಾಗಿ ಇದ್ದೂ ನೀನು ಇಲ್ಲದಂಗ ॥೨॥
ಪುಂಡಿಪಲ್ಲೇ ಚಟ್ನಿ ರೊಟ್ಟಿ ತಿಂದರ್ಯಾಕ ಇರವಲ್ಲಿ
ತುಪ್ಪ ತಿನ್ನೋ ತುಡಗ ಹೆಂಗಸು ನೀನು ನಂಬಬೇಡ
ತಿನಸಿನ ಗೆಳೆತನ ಮಾಡಬೇಡ ಮನಸ್ಸು ಸಡಿಲ ಬಿಡಬೇಡ
ಹೆಂಡಾ ಕುಡಿದು ಮಂಗ್ಯಾನಂಗ ಆಗಬೇಡಾ ॥೩॥
ತಾಳಿ ಕಟ್ಟಿದ ಮ್ಯಾಲೆ ನೀ ತಮಾಷೆ ಮರೆತಂತೆ
ಗಂಡನ ಮನೆ ದೇವರ ಗುಡಿಯಂತೆ ನಂಬಬೇಕು
ನಿನ್ನ ದೇವರ ನೀ ನಂಬಿ ಪಾದ ಪೂಜೆ ಮಾಡಬೇಕು
ಸಿದ್ಧಲಿಂಗೇಶ್ವರನ ಪದಾ ನೀ ತಿಳಿಯಬೇಕು ॥೪॥
(‘ಜಾನಪದ ಗೀತೆಗಳು’ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!