ನಾನು ವೇದಾಂತಿ,

ಎಂದೂ ಹೇಳಿಕೊಳ್ಳುವವರು 

ತಮ್ಮ ಮಾತನ್ನೇ

ಸಮರ್ಥಿಸಿಕೊಳ್ಳುತ್ತಾರೆ!

ಬಾಲ ಡೊಂಕಾದರೂ

ದೊಡ್ಡವರು ನಾವೆಂಬ 

ಅಹಂನಲ್ಲಿ ಕತ್ತೆಗಾದಷ್ಟು

ಪ್ರಾಯವಾದರೂ ಸಹ ?

ಊಟವಾಯ್ತೇಯೆಂದು ಕೇಳಿದರೆ

ಮುಂಡಾಸು ಮೂವತ್ತು

ಮಳ ಎನ್ನುವ ಪ್ರಕಾಶಕರು !

ಅಪ್ಪ ನೆಟ್ಟಿರುವ ಆಲದ ಮರಕ್ಕೇ

ಸುತ್ತು ಹೊಡೆಯುವ ಮಗನಂತೆ ,

ಕೊನೆಗೆ ಮಂಗನಂತೆ ಹಳೆಯಕಾಲದ 

ಗೆಲ್ಲನ್ನೇ ಹಿಡಿದು

ಜೋಕಾಲಿ ಹೊಡೆಯುತ್ತೇವೆ

ಎನ್ನುವ ಹಳೆ ಕಬ್ಬಿಣ 

ತಾಮ್ರಗಳಿಗೆ ಏನೆನ್ನೋಣ ?

ಬದಲಾವಣೆಗೆ 

ತಮ್ಮನ್ನು ತೆರೆದುಕೊಳ್ಳದವರನ್ನು ಯಾವುದೇ 

ಮೇನೆಯಲ್ಲಿ ಕೂರಿಸಿದರೂ ನೆಲದಲ್ಲೇ 

ಎಲ್ಲವನ್ನೂ ಮಾಡುವುದ ಬಿಡುವುದೂ ಇಲ್ಲ !

ಈ ಕಂಪ್ಯೂಟರ್ ಯುಗದಲ್ಲಿ 

ಲಾಟಾನುಗಳಂತಿರುವ 

ಉಪದೇಶ ಯಾರಿಗೆ ಬೇಕಯ್ಯಾ

ಸೃಜನಶೀಲತೆ ಇಲ್ಲದ 

ಬರಹಗಳ ಓದುಗರೆಲ್ಲಿಂದ ಮೂಸಿಯಾರು ? 

ಅದಕ್ಕೆಂದು ತೋರುತ್ತದೆ 

ಬರೆದ ಸಾಹಿತ್ಯಗಳೆಲ್ಲ ರಾಶಿ ರಾಶಿ 

ಪುಸ್ತಕದ ರೂಪದಲ್ಲಿ 

ಮನೆಯಲ್ಲೇ ಕೊಳೆಯುತ್ತಾ ಬಿದ್ದಿದೆ !

ದ್ವೇಷ ಭಾವನೆಯಿರುವ ಜನ

ಕವಿಗಳಾಗಲು ಸಾಧ್ಯವೇ? 

ಕವಿಗಳ ಜೊತೆಗೇ ಹೊಂದಾಣಿಕೆಯಿಲ್ಲದವರಿಗೆ

ಇನ್ನೇನೆಂದು ಹೇಳಲಿ?

ಮರುಜನ್ಮದಲ್ಲಾದರೂ 

ಸತ್ಯ, ನಿಷ್ಠೆ ,ಪ್ರಮಾಣಿಕತೆ ಹೊಂದಿರುವ 

ಗುಣಗಳ ಹೊಂದಿದ 

ನಿಜ ಜನುಮ ಇರಲಿ ಎನುತ,

ಹಾಯ್ ಟಾಟಾ ಬೈ ಬೈ ವಂದನೆ !

-ಹಾ ಮ ಸತೀಶ ಬೆಂಗಳೂರು