ಆಂಧೀ ಚಿತ್ರದ ' ತೇರೆ ಬಿನಾ ಜಿಂದಗೀ ಸೆ ಕೋಯಿ' (ಇದು ನಾನು 95 ನೇ ಸಂಖ್ಯೆ ಕೊಟ್ಟು ಅನುವಾದಿಸಿದ ಹಾಡು ) ಹಾಡಿನ ಪೂರ್ತಿ ಅನುವಾದ ಇಲ್ಲಿದೆ ನೋಡಿ.

ನಿನ್ನ ಹೊರತು ಲೋಕದೊಡನೆ

ನನ್ನ ತಕರಾರಿಲ್ಲ

ನಿನ್ನ ಬಿಟ್ಟು ಲೋಕ ಕೂಡ ನನಗೆ

ಬೇಕಾಗೇ ಇಲ್ಲ

ಬೇಕಾಗಿಲ್ಲ

ಬೇಕಾಗಿಲ್ಲ ||

ನನ್ನ ಬೇಡಿಕೆಯು ನಿನ್ನ ಹೆಜ್ಜೆಗಳ

ಚುಂಬಿಸಿ ಮಜಲುಗಳು

ಮುಂದೆ ಸಾಗಲಿ

ನೀನು ಜತೆಯಿರಲು

ಅವುಗಳ ಕೊರತೆ ನನಗೆಲ್ಲಿ

ನಿನ್ನ ಹೊರತು ಲೋಕದೊಡನೆ

ನನ್ನ ತಕರಾರಿಲ್ಲ||

ಬಯಕೆ ಮೂಡುವುದು

ನಿನ್ನ ಮಡಿಲಲ್ಲಿ

ತಲೆಯ ನಾ ಇರಿಸಿ

ಅಳುತ ಇರಬೇಕು

ನಿನ್ನ ಕಣ್ಣೂ / ಕಂಗಳೂ ಹನಿಗೂಡಿ /ಹನಿಸಿ ....

ಒದ್ದೆ ಆಗಿಹವು||

ನೀನು ಹೇಳಿದರೆ ಇಂದಿನಾ ಇರುಳು

ಚಂದ್ರ ತಾ ಮುಳುಗ

ರಾತ್ರಿಯ ತಡೆವೆಯ

ರಾತ್ರಿಯ ಮಾತಿರಲಿ

ಬಾಳು ಕೂಡ ಹೆಚ್ಚು ಉಳಿದಿಲ್ಲ

ನಿನ್ನ ಹೊರತು ಲೋಕದೊಡನೆ

ನನ್ನ ತಕರಾರಿಲ್ಲ ||