ನಿನ್ನ ಜೀವವನೇ ನಿರಂತರ ಪಣಕಿಟ್ಟು

ನಿನ್ನುದರದಲಿ ನನ್ನನು ಕಾಪಿಟ್ಟು

ನವ ಮಾಸ ನನ್ನ ನೀ ಹೊತ್ತು

ಅತೀ ಸಹನೆಯಿಂದ ನನ ಹೆತ್ತು

ಈ ಧರೆಗೆ ನನ ತಂದ ದೇವತೆ ನೀನು

ಆ ಋಣವ  ಹೇಗೆ   

ತೀರಿಸಲಿ ನಾನು?

ನೀ ಹಸಿದರೂ ನನ ಹೊಟ್ಟೆ ತುಂಬಿದೆ

ಅದೆಷ್ಟೋ ರಾತ್ರಿಗಳ ನಿದಿರೆಯಿಲ್ಲದೆ ನೀ ಕಳೆದೆ

ನಾ ಅತ್ತಾಗ ನೀ ರಮಿಸಿದೆ  

ನಾ ನಕ್ಕಾಗ  ನೀನು ನಲಿದೆ 

ಆಟೋಟ ಪಾಠಗಳ ನೀ ಕಲಿಸಿದೆ

ಸಂಸ್ಕಾರವ ನನಗೆ ನೀ ನೀಡಿದೆ

ಮಮತೆ ವಾತ್ಸಲ್ಯಗಳ ಭಂಡಾರವೇ ನೀನು  

ಪ್ರೀತಿಯ ವಿಶಾಲ ಕಡಲು ನೀನು

ನನ್ನ ಉಪಸ್ಥಿತಿಗೆ ಕಾರಣಳು ನೀನು

ನಿನ್ನಂತ ದೇವತೆಯ ನನಗೆ ನೀಡಿದನು ಆ ದೇವನು

ನಿನ ಮಗನಾಗಿ ನಾನಾದೆ ನಿಜಕೂ ಧನ್ಯನು

~ಸಂಪಿಗೆ ವಾಸು ಬಳ್ಳಾರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ