ಸ್ರಾವಣ ಮಾಸ ಬಂತೂ... ಸರಿ ಮನೆವ್ರುನ್ನ ಎಲ್ಲಾ ಕರ್ಕಂಡ್ ಮನ್ ದೇವ್ರು ದರ್ಶನಕ್ಕೆ ಹೋಗವ ಅಂಥ ಭಾನುವಾರ ಬೆಳ್ ಬೆಳಿಗ್ಗೆಯಾ ಸ್ನಾನ ಗೀನಾ ಮಾಡೀ ಎಲ್ಲಾರನ್ನು ಎಬ್ಸಿ ರೆಡಿ ಆಗ್ರಿ ಅಂಥ ಯೋಳಿ ಮಗನ್ ಕರ್ಕಂಡ್ ಕ್ಯಾರೆನ್ಸ್ ಕಿಯಾ ಗೇ ಪೆಟ್ರೋಲ್ ತುಂಬ್ಸಕಬರವ ಅಂಥ ಹೊಂಟೆ...
ಇನ್ನೂ ಜಸ್ಟ್ ಮಾರ್ನಿಂಗ್ 6.30 ಅಷ್ಟೇ, ರಸ್ತೆ ಎಲ್ಲಾ ಖಾಲಿ ಇತ್ತು..
ಆಟ್ ರಾಗೆ ಲೆಫ್ಟ್ ಸೈಡ್ನಿಂದಾ ಒಂದ್ ಹಳೇ ಲಗೇಜ್ ಆಟೋ ಭರ್ ಅಂಥಾ ನನ್ ಕ್ಯಾರೆನ್ಸ್ ಕಿಯಾ ನಾ ಓವರ್ಟೆಕ್ ಮಾಡ್ತಾ...
ನೋಡಿದ್ರೆ ಫಾರಂ ಕೋಳಿಗುಳ್ನಾ ಮೆಶ್ ಡಬ್ಬಾದಾಗ್ ಇಟ್ಗಂಡ್ ಓಯ್ತಾ ಇತ್ತಾ ...
ಮೇಲಿಂದ್ರಾಗಿಂದ ಒಂದ್ ಮೆಶ್ ಡಬ್ಬಾ ಸ್ವಲ್ಪ್ ಓಪನ್ ಆಗಿತ್ತಾ ಅದ್ರಿಂದ ಒಂದ್ ಫಾರಂ ಕೋಳಿ ಅಂಗೇ ತೇವುಕೊಳುತ್ತಾ ಹೋರಾಗ್ ಬರಾಕ್ ಟ್ರೈ ಮಾಡ್ತಾ ಇತ್ತ ಅದ್ನ ನೋಡೀ ಮಗ ಅಂದ "ಏನಪ್ಪಾ ಕೋಳಿ ಒರಾಗ್ ಬತ್ತಾ ಇದೇ"...
ನಾ ಅಂದೇ "ಇಲ್ಲಾ ಕಣ್ ಸುಮ್ಕೀರಾ ಆದ್ರುವು ಕಾಲ್ ಕಟ್ಟಿರ್ತಾರೆ..." ಅನ್ನೋ ಅಷ್ಟ್ರಾಗೆ... ಆ ಕೋಳಿ ಪುತುಕ್ ಅಂಥಾ ಜಂಪ್ ಮಾಡ್ತು ಮಾಡಿದ್ ರಭಸಕ್ಕೆ ಆ ಲಗೇಜ್ ಆಟೋ ಇಂದ ಸೀದಾ ರೋಡ್ ಮಧ್ಯಕ್ಕೆ ಅಂದ್ರೆ ನನ್ ಕ್ಯಾರೆನ್ಸ್ ಕಿಯಾ ಮುಂದೇನೆ ಬಿತ್ತು....!!
ನಾನ್ ಹಂಗೇ ರಿಫ್ಲೆಕ್ಸ್ ನಲ್ ಬ್ರೇಕ್ ಹೊಡೆದು ಜೋರಾಗ್ ಹಾರ್ನ್ ಮಾಡ್ದೇ ...
ಆ ಆಟೋ ಡ್ರೈವರ್ ಏನಾನ ತಿರುಗ್ ನೋಡ್ತಾನೆನೋ ನೋಡೀ ಇದ್ನ ಎತ್ಕಂಡ್ ಓಯ್ತಾನೇನೋ ಅಂಥ ಆದ್ರೇ ಅವ್ನು ಅಂಗೇ ಭರ್... ಅಂಥಾ ಓಗೆಬಿಟ್ಟ..
ನಾನೂ ನನ್ ಮಗ ಇಬ್ರೂ ಒಬ್ರುನೋಬ್ರೂ ನೋಡ್ಕಂಡ್ವಿ ಆ ಕೋಳಿ ಕಾರ್ ಒಳಗೇ ಇರೋ ನಮ್ಮನ್ನೇ ನೋಡ್ತಾ "ಅನಾಥ ಮಗುವಾದೆ ನಾನು.. ಅಪ್ಪನೋ..ಅಮ್ಮನೋ.. " ಅಂಥಾ ಹಾಡ್ ಹೇಳ್ದಂಗ್ ಆಯ್ತು...
ನಾನೂ ಒಸಿ ಜೋರಾಗೆ "ನೀನೂ ಅಲ್ಲೇ ಇದ್ದಿದ್ರು ಹೋಗ್ತಾ ಇದ್ದಿದ್ದು ಶಿವನ್ ಪಾದಕ್ಕೆ ಅನಾಥವಾಗಿ" ಅಂಥಾ ಹೇಳನ ಅನ್ ಕಣೋ ಅಷ್ಟರಲ್ಲಿ ನನ್ ಮಡ್ ತಲೆ ನನ್ ತಲೆ ಮೇಲೆ ಮಟುಕಿ ಹೇಳ್ತು "is this how you react..!? You are neither helping nor consoling that poor soul"
ಎಲಾ ಮಡ್ ತಲೇಲಿ ಇಸ್ಟೊಂದು ಸಿಂಪಥಿ , ಎಂಪಥಿ ಸೀತಾಪತಿ ಎಲ್ಲಾ ಇದೇ ಅಂಥ ಆಶ್ಚರ್ಯ ಆಯ್ತು ಹಂಗೇ ಅಯ್ಯೋ ಇದೇನಪ್ಪ ಶಿವನೇ ನಿನ್ ಪರೀಕ್ಷೆ!..
ಸ್ನಾನ ಗೀನಾ ಮಾಡೀ ಮನೆ ದೇವ್ರು ದರ್ಶನಕ್ಕೆ ಅಂತ ಹೊರಟ್ರೆ ಈ ಥರಾ ಚಿಚ್ವೇಸನ್ ತಂದ್ ಇಟ್ಬುಟ್ಟೆ, ಯಾವತ್ತೂ ಒಂದೂ (neither ನಾಟಿ nor ಫಾರ್ಮ್ both) ಕೋಳಿ ಮುಟ್ದವ್ನು ತಿನ್ದವ್ನಲ್ಲ ನಾನು ಅಂಥಾ ...
ಅಷ್ಟರಲ್ ಅಲ್ಲೇ ಇದ್ದ ICICI ATM ದೂ ಸೆಕ್ಯೂರಿಟಿ ಗಾರ್ಡ್ ಇದ್ನ ಓಡೋಡಿ ಬಂದ, ಬಂದ್ ಅಂದ "ಓಹೋಹೋ ಕೋಳಿ ಬಿದೋಯ್ತು" ಅಂತ...
ಅವ್ನ್ ನೋಡೀ ನಾನು "ಓ ಕೃಷ್ಣ ಪರಮಾತ್ಮ ಏನ್ ನಿನ್ ಲೀಲೆ ಯಾರೋ ಪುಣಾತ್ಮನಾ ಕಂಡ್ ಹಿಡಿದು ಅವ್ನ ರೂಪ್ದಲ್ ನೀನೇ ಬಂದ್ಯಾ ಈ ಕೋಳಿನಾ ಕಾಪಾಡೋಕೆ" ಅಂಥಾ ಅನ್ ಕೊತ ಅವನಿಗೊಂದು ನೂರ್ ರೂಪಾಯಿ ಕೊಟ್ಟು ಈ ಕೋಳಿಗೆ ಏನಾನ ಒಂದ್ ವ್ಯವಸ್ಥೆ ಮಾಡಪ್ಪ ಅಂಥ ಹೇಳೋಣ ಆನ್ ಕೊತ ಆ ಕೋಳಿ ಕಡೇ ತಿರುಗಿ ಹೇಳ್ದೇ "ನೋಡು ಹೆಲ್ಪ್ ಹ್ಯಾಸ್ ಆರ್ರೈವ್ಡ್ " ಅಂದೇ ... ಆದ್ರೆ ಕೋಳಿ ಕಣ್ಣಲ್ ರಕ್ತ ಕಣ್ಣೀರು ಹಾಕ್ತಾ ಹೇಳ್ತಾ ಇತ್ತು..
"ಕರುಣೆ ಇಲ್ಲದ ಧರಣಿಯ ಕಂಡೇ... ಕೆಂಡವ ಕಾರುವ ಗಗನವ ಕಂಡೇ.. ದ್ರೋಹದ ಹೊಸ ಮುಖವಾಡ ಕಂಡೆ.. ಜೀವನದುದ್ದಕ್ಕೂ ನೋವನೆ ಕಂಡೇ.. ಆದರೂ ಪ್ರೀತಿಯು ಕಾಣಲಿಲ್ಲ.."
ನಾನ್ ಗಾಬ್ರಿ ಆಗೀ ಇದೇನಪ್ಪ ಅಂಥ ಆ ಸೆಕ್ಯೂರಿಟಿ ಗಾರ್ಡ್ ಕಡೇ ನೋಡುದ್ರೆ... ಅವ್ನ್ ಕಣ್ಣಲ್ "ಚಿಕನ್ ಕೂರ್ಮ, ತಂದೂರಿ ಚಿಕನ್" ಎಲ್ಲಾ ಕಾಮ್ತಾ ಇದೇ... ಅಯ್ಯೋ ಇದೇನಪ್ಪ ಶಿವನೇ ನಿನ್ ಪರೀಕ್ಷೆ...
ಅಷ್ಟ್ರಾಗೆ ಆ ಗಾರ್ಡ್ ಅಂದ "ಒಂದೇ ನಿಮ್ಸ ಸಾ ಆ ಕೋಳಿ ತಗ ಬಿಡ್ತೀನಿ" ಅಂಥ ನಾನ್ ಕೋಪ್ ದಿಂದಾ "ಅಲ್ಲಯ್ಯ ಆ ಕೋಳಿಗೆ ಏನಾದ್ರೂ ಒಳ್ಳೇ ವ್ಯವಸ್ಥೆ ಮಾಡ್ತೀಯ ಅಂದ್ರೆ ನೀನೂ..."
ಅಷ್ಟರಲ್ಲೇ ಮಡ್ ತಲೆ ಮತ್ತೇ ಮಟಕ್ತೂ ನಾನೂ ಸಿಟ್ಟಿಂದ "ಏನಾ ನಿಂದು..!!" ಅಂದೇ ಅದ್ಕೇ ಅದೂ "ಅಲ್ಲಾ ನೀನ್ ಅವ್ನ ಕೈಯಿಂದ ಇದುನ್ ಕಾಪಾಡಿ ಎಲ್ಲಿಗ್ ಕರ್ಕ ಹೋಗ್ತೀಯ ಯೋಳು " ಅಂತು...
ನಾನ್ ಒಂದ್ ಶಣ ಅಂಗೇ ಮೂಖಸ್ತಬ್ಧ ಆಗೋದೇ... ಹಿಂದೆ ಯಾರ್ದೋ ಕಾರು ಹಾರ್ನ್ ಮಾಡ್ತು.. ನಾನ್ ಕ್ಯಾರೆನ್ಸ್ ಕಿಯಾ ನಾ ಮೂವ್ ಮಾಡ್ದೇ .... ಸೆಕ್ಯೂರಿಟಿ ಗಾರ್ಡ್ ಕೋಳಿನಾ ಆಗ್ಲೇ ಎತ್ಕ ಹೋಗಿದ್ದ,
ಇದ್ಕಿದ್ದಂಗೆ ಕೋಳಿ ಎಪಿಸೋಡ್ ಅಬ್ರುಪ್ಟ್ ಎಂಡಿಂಗ್ ಆದಂಗ್ ಆತು...
ಕ್ಯಾರೆನ್ಸ್ ಕಿಯಾನಲ್ ನೀರವ ಮೌನ... ಪೆಟ್ರೋಲ್ ಬಂಕ್ ಕಡಿಗೆ ಗಾಡಿ ಓಡುಸ್ತಾ ಇನ್ನೂ ಅದೇ ಯೋಚ್ನೆಲೀ ಮುಳುಗಿದ್ದ ನಂಗೇ ನನ್ಮಗಾ ಕೇಳ್ದಾ
"ಆ ಕೋಳಿನಾ ನಾವು ಉಳುಸ್ ಬೋದಿತ್ತ ಅಪ್ಪಾ...?!" ಅಂಥ..
ನಾನ್ ಹಂಗೇ ಒಂದ್ 30 ಸೆಕೆಂಡ್ ಅಂಗೇ ಸುಮ್ಕೆ ಇದ್ದೂ.. ಒಂದ್ಸಲ ನನ್ ಮಡ್ ತಲೆ ಕೇರ್ಕೋತ ಅಂದೇ "ನಂಗ್ ಗೊತ್ತಿಲ್ಲಪ್ಪ!"
ಅವ್ನ್ ಒಂದ್ ಕಿತಾ ನನ್ನೇ ಒಂದ್ ಥರಾ ನೋಡೀ ಆಮೇಲೆ ಕಾರಿನ ಗ್ಲಾಸ್ ಇಳಿಸಿ ಹೊರಗ ನೋಡಕ್ ಸುರು ಮಾಡ್ದಾ...
ಏನೋ ಒಂಥರಾ ಖಾಲಿ ಖಾಲಿ ಅನ್ಸೀ ಜಲ್ದಿ ಹೋಗಿ ಮನ್ ದೇವ್ರಿಗೆ ಕೈ ಮುಗಿಯಾವ ಅಂಥಾ ಕ್ಯಾರೆನ್ಸ್ ಕಿಯಾದು ಆಕ್ಸಿಲರೇಟರ್ ಒತ್ತುದೆ...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!