ಕವಿತೆ ಮತ್ತು ನಾನು

ಕಲಿಯುಗದ ಕರ್ಣರು 


ಬಹಳಷ್ಟು ಜನ 

ವೈವಿಧ್ಯಮಯವಾಗಿ

ತೆಗಳಿ ಹೊಗಳುವುದರಲ್ಲಿ

ನಿಸ್ಸೀಮರು, ಇದರ ನಡುವೆ 

ಲೋಪವಿದ್ದರೂ ತಮ್ಮ ಲಾಭಕ್ಕೆ 

ಬಕೇಟೆಂಬ ವಶೀಕರಣಕ್ಕೆ 

ಹಲ ಕೆಲವರನ್ನು ಒಳಪಡಿಸಿ 

ತಾವು, ಕವಿಕುಲ ತಿಲಕರೆಂಬಂತೆ,

ಬಿರುದಾಂಕಿತರಾಗುವವರ

ನಡುವೆ ಇರುತ ಸಾಗುವೆ 

ಯಾಕೆಂದರೆ 

ಕವಿತೆ ಮತ್ತು ನಾನು 

ಕಲಿಯುಗದ ಕರ್ಣರು !


ನೋವುಗಳ ನಡುವೆಯೇ 

ಬೆಳೆದ ನನಗೆ ಮತ್ತೆ

ನೋವು ತಿನ್ನುವಂತಹ 

ಪಾಠ, ಬೇಕೇನು ?

ವಯಸ್ಸು ಮಾಗಿದಂತೆ

ಮನಸ್ಸು ಪ್ರಬುದ್ಧವಾಗಿದೆ 

ತಾಕಲಾಟ ಚೇಷ್ಟೆಗಳ ಕಾಲ 

ಇದಲ್ಲವೋ ತಿಳಿಯಿರಿ 

ತಲೆಗೆ ಏರಿದ್ದು ಕಾಲಿಗೆ 

ಇಳಿಯಲೇ ಬೇಕು 

ಆ ಸಮಯಕ್ಕಾಗಿ 

ಕಾಯುತ್ತಿರುವೆ 

ಪ್ರಭುವೇ,

ಯಾಕೆಂದರೆ 

ಕವಿತೆ ಮತ್ತು ನಾನು 

ಕಲಿಯುಗದ ಕರ್ಣರು !


ನಾನು, ಏನು.... ?

ತಿಳಿದವರು 

ನನ್ನ ಜೊತೆಗಾರರಾಗಿ 

ಯಾರನ್ನೂ ವೈಯಕ್ತಿಕ ತೆಗಳಿ

ನಿಂದನೆ ಮಾಡಲು ನಾನಾರು..?

ನನ್ನ ಪೂರ್ವಾಪರ ವಿಚಾರ 

ತಿಳಿಯದೇ, ಯಾರೋ 

ಆ ಸಮಯಕ್ಕೆ ಜಲಸಿಗಳಾಗಿ 

ಹೇಳಿದ ಮಾತಿಗೆ 

ಕೃತಿಕಾರರಾಗಬೇಡಿ 

ಮನವ

ನೋಯಿಸಬೇಡಿ 

ಯಾಕೆಂದರೆ

ಕವಿತೆ ಮತ್ತು ನಾನು 

ಕಲಿಯುಗದ ಕರ್ಣರು !


ಗೊತ್ತಿದ್ದರೂ ಗೊತ್ತಿಲ್ಲ 

ಎನ್ನುತ್ತಿರಬೇಕು 

ಹಲವರ ಬಂಡವಾಳ 

ಹೊರ ಬರಲು,

ಒಳ್ಳೆಯವರೆಂದು ತಿಳಿದವರೇ 

ಸಾಮೂಹಿಕವಾಗಿ ಬೆನ್ನಿಗೆ 

ಗೊತ್ತಾಗದ ರೀತಿಯಲ್ಲಿ 

ಗುದ್ದುವವರು,ಕಾಲು ಕೊಟ್ಟು 

ಕೆಳಗೆ ಬೀಳಿಸುವವರು

ಯಾಕೆಂದರೆ 

ಕವಿತೆ ಮತ್ತು ನಾನು 

ಕಲಿಯುಗದ ಕರ್ಣರು !


ಪ್ರೀತಿ ಪ್ರೇಮಗಳ ನಡುವೆ 

ಗೊಂದಲಗಳ ಸೃಷ್ಟಿಸುವರು 

ಇರುವಾಗ, ತಟಸ್ಥ ನಿಲುವಿಗೆ 

ನಾ ಸಾಗುವೆ ! ಮತ್ತದುವೆ 

ಹೊಸ ಬಾಟಲಿಯಲ್ಲಿ 

ಹಳೆಯ ಮದ್ಯವೇ ದೊರಕಿದೆ

ಸುಮ್ಮನಿದ್ದು ಬಿಡುವೆ 

ಕಾರಣ 

ಕವಿತೆ ಮತ್ತು ನಾನು 

ಕಲಿಯುಗದ ಕರ್ಣರು !


-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ