ಪುಟ್ಟ ಪುಟ್ಟ ಹೆಜ್ಜೆ ಇಟ್ಟು 

ಕುಣಿದ ದಿನದ ನೆನಪಿದೆ

ನೋವ ಮರೆತು ನಲಿದೆನಿಂದು

ನಮ್ಮ ಹಾಲುಮಜಲಲೆ


ನಡುವೆ ಮನೆಯು ಸುತ್ತಲು ತೋಟ

ಹಸಿರು ಗಿಡದ ನಡುವೆಯೆ 

ತೆಂಗು ಕಂಗು ಬಾಳೆ ಹಲಸು

ಇರುವ ಪರಿಸರ ನಡುವಲೆ


ಹತ್ತು ಹಲವು ಪಕ್ಷಿಯ ವದನ 

ಸುತ್ತಲೆಲ್ಲ ಅದರ ಧ್ವನಿಯು

ಜೀರುಂಡೆಯ ನಾದ ಜೊತೆಗೆ 

ವಟರ್ ಗುಟ್ಟುವ ಕಪ್ಪೆಯು


ಹಾದಿಯೊಳಗೆ ಕಾಡು ಆನೆ

ಸುತ್ತಲೆಲ್ಲ ತೊರೆಯು ಶ್ಯಾನೆ 

ಮಣ್ಣ ಮಾರ್ಗ ಹೊಂಡ ಗುಂಡಿ

ನಡೆಯುತಿರಲು ಚೆಂದವು


ತಂದೆ ತಾಯು ನೆಲೆಯ ನಿಂತ

ನೆಲದ ಮೇಲೆ ಹೆಜ್ಜೆ ಇಡಲು 

ಕನಸು ಕರಗೆ ನನಸ ಕ್ಷಣವು

ಮನಸ್ಸ ತುಂಬಾ ಪ್ರೀತಿಯು


ಹೀಗೆ ಇರಲಿ ಹುಟ್ಟಿದ ನೆಲದ

ಪ್ರೀತಿಯು ಶಾಶ್ವತ ನಮ್ಮಲಿ 

ಒಂದೇ ತಾಯ ಮಕ್ಕಳು ನಾವು 

ಒಂದುಗೂಡುತ ಬಾಳಲಿ

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ