ಬನ್ನಿ ಯಾರಾದರೂ
ಎತ್ತಿಕೊಳ್ಳಿ,
ಶಿಲ್ಪವಾಗಿಸಿ ನನ್ನ.
ಕಪ್ಪು ಕಲ್ಲಿನಂತೆ ನಾನು
ಗರ್ಭಗುಡಿಯ ಸೇರಬೇಕು,
ಶಿಲ್ಪವಾಗಬೇಕು.

ದೂಪ-ದೀಪ,
ನೈವೇದ್ಯ, ಹೂವು
ಎಲ್ಲದರಿಂದ ನಾನೂ
ಸಿಂಗಾರಗೊಳ್ಳಬೇಕು.

ಮಂತ್ರ-ಘೋಷ, ಗಂಟೆ,
ವಾದ್ಯ ವೃಂದದ ನಡುವೆ
ಪ್ರಸನ್ನಳಾಗಬೇಕು.
ಆಕಾರಕೊಡಿ ನನಗೆ
ನಾನೂ ಶಿಲ್ಪವಾಗಬೇಕು.

ಮಣ್ಣೊಳಗೆ ಮಣ್ಣಾಗಿ
ಸೇರಲಾರೆ ನಾನು.
ಸೂರಿಗೆ ಹೊರೆಯಾಗಿ
ಬದುಕಲಾರೆ ನಾನು.

ಆಕಾರಕೊಡಿ ನನಗೆ
ನಾನೂ ಶಿಲ್ಪವಾಗಬೇಕು
ಗರ್ಭಗುಡಿಯ ಸೇರಬೇಕು.

..ಉಮೇಶ ಮುಂಡಳ್ಳಿ ಭಟ್ಕಳ