ಮುಗಿಲು ಕರಗಿ
ಮಳೆಯು ಬಂತು
ಅದರ ರೀತಿ ಚೆಲುವೆಯೆ
ಹೊಸಿಲು ದಾಟಿ
ಒಳಗೆ ಬಾರೆ
ನನ್ನ ಜೊತೆಗೆ ಬಂದಿಯೆ
ನಗುವಿನೊಳಗೆ
ಮೋಹ ನೆಗೆಯೆ
ಮಧುರ ರೂಪ ಮೋಹಿನಿ
ಕನಸು ಇಲ್ಲ
ನನಸೆ ಎಲ್ಲ
ನೀನೆ ಎನ್ನ ಭಾಮಿನಿ
ಹುಟ್ಟ ಜೊತೆಗೆ
ಸಾವು ಇಹುದು
ನಡುವೆ ನಮ್ಮ ಮಿಲನವು
ಮಗುವ ನಗುವು
ಸುತ್ತ ಹರಡೆ
ನಮಗೆ ಮುಕ್ತಿ ಪಯಣವು
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!