ಅತ್ಯಂತ ಸುಂದರವಾದ ಹೂವಿನೊಳಗೂ
ಅಪಾಯಕಾರಿ ವಿಷವೊಂದು ಅಡಗಿರಬಹುದು…
ಅದೇ ರೀತಿ,
ಕೆಲವು ಮನುಷ್ಯರ ನಗುವಿನ ಹಿಂದೆಯೂ
ವಿಷದಂಥ ಮನಸ್ಸು ಅಡಗಿರಬಹುದು…
ರೂಪ ಕಣ್ಣಿಗೆ ಕಾಣುತ್ತದೆ,
ಗುಣ ಅನುಭವಕ್ಕೆ ಬರುತ್ತದೆ…
ಸೌಂದರ್ಯ ಮನಸ್ಸನ್ನು ಸೆಳೆಯುತ್ತದೆ,
ಆದರೆ ನಿಜವಾದ ಸ್ವರೂಪ
ಕಾಲ ಕಳೆದಂತೆ ಅನಾವರಣಗೊಳ್ಳುತ್ತದೆ…
ಏಕೆಂದರೆ,
ಪ್ರತಿಯೊಂದು ಸುಂದರ ಹೂವೂ ಸುಗಂಧವಲ್ಲ…
ಪ್ರತಿಯೊಂದು ಸುಂದರ ಮುಖವೂ ನಿರ್ಮಲ ಮನಸ್ಸಲ್ಲ…!
-ಬಿ. ಕ. ಗೌ