ಸುಮವು ಬಿರಿದು ಪರಿಮಳಿಸೆ
ದುಂಬಿ ಮಧುವ ಹೀರಿತು
ನನ್ನ ನಲ್ಲೆ ಸನಿಹ ಬರಲು
ಮನದಿ ಖುಷಿಯು ಅರಳಿತು
ಸುತ್ತ ಮುತ್ತ ಸಿಡಿಲ ಧ್ವನಿಗೆ
ನನ್ನ ತಬ್ಬಿ ಬೆವರಲು
ನನ್ನೊಳಗಿನ ಮೋಹ ನಲಿದು
ಬೆಸುಗೆಯೊಳಗೆ ಮೆರೆಯಲು
ಕನಸು ಕಳೆದು ನನಸು ಬರಲು
ಮಧುರ ಭಾವ ಸುತ್ತಲೂ
ನಗುವು ಮುಖದಿ ಉಕ್ಕಿ ಹರಿಯೆ
ಪ್ರೀತಿ ಮನಸ ಮುತ್ತಲು
ಒಲವು ಬಾಗೆ ಚೆಲುವು ಬೀಗೆ
ನನ್ನ ನಿನ್ನ ನಡುವಲಿ
ವರುಷವೊಂದು ಕಳೆಯಲೀಗ
ಮುದ್ದು ಕಂದ ಮಡಿಲಲಿ
-ಹಾ. ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!