‘ಬದುಕಿನ ಕನ್ನಡಿಯಲ್ಲಿ’ ಕೃತಿ ಲೇಖಕಿ ಮೇದಿನಿ ಕೆಸವಿನಮನೆ ಇವರ ಮೂರನೇ ಪ್ರಕಟಿತ ಪುಸ್ತಕ. ಅಪ್ಪನ ಬಗ್ಗೆ ಆತ್ಮೀಯತೆಯಿಂದ ಬರೆಯುವ ಮೇದಿನಿಯವರು ಈ ಕೃತಿಯು ಅಪ್ಪನದೇ ಪ್ರತಿಬಿಂಬ ಎನ್ನುತ್ತಾರೆ. ಅವರು ಈ ಕೃತಿಗೆ ಬರೆದ ಮನದಾಳದ ಮಾತುಗಳು ಬರಹದಿಂದ ಆಯ್ದ ಭಾಗ ನಿಮ್ಮ ಓದಿಗಾಗಿ…
“ಮಿಸ್ಸಿನ ಡೈರಿಗಿಂತ ಮೊದಲು ಬರೆಯಲು ಆರಂಭಿಸಿದ್ದು ಇದನ್ನೇ. ಇದಕ್ಕೊಂದು ನಿಗದಿತ ಸಮಯವಿಲ್ಲ, ನೆನಪಾದಾಗ, ಬರೆಯಲೇ ಬೇಕು ಎನಿಸಿದಾಗ, ಯಾವುದೋ ಪತ್ರಿಕೆಯವರು ಕೇಳಿದಾಗ, ಅಥವಾ ಯಾವುದೋ ಒತ್ತಡವನ್ನು ಹೊರಹಾಕುವ ಸಲುವಾಗಿ ಬರೆದದ್ದು ಇವು. ಹಾಗಾಗಿ ಓದಿದಾಗ ಏಕತಾನತೆ ಕಾಡಬಹುದು. ಇಷ್ಟೇನಾ ಎಂದೂ ಅನಿಸಬಹುದು, ಗೊತ್ತಿಲ್ಲ, ಆದರೆ ಬರೆಯುವಾಗ ಸಂಪೂರ್ಣ ತಲ್ಲೀನಳಾಗಿ, ಬರೆದ ಮೇಲೆ ಸಮಾಧಾನ ಪಡೆದು, ಓದುಗರಿಂದ ಮೆಚ್ಚುಗೆ ಪಡೆದವು ಇವುಗಳು. ಒಟ್ಟಿಗೇ ಇವುಗಳನ್ನು ಓದಿದಾಗ ಯಾವ ಭಾವ ಉದಯಿಸುತ್ತದೆಯೋ, ಕಾಡುತ್ತದೆಯೋ ಎಂಬ ಕುತೂಹಲವಿದೆ. ಇಲ್ಲಿನ ಬಹುತೇಕ ಬರೆಹ ನನ್ನ ಬಾಲ್ಯಕ್ಕೆ ಸಂಬಂಧಿಸಿದ್ದು, ಜೊತೆಗೆ ವರ್ತಮಾನವನ್ನು ಸಮೀಕರಿಸಿದ್ದು. ಇಲ್ಲಿ ಹೀರೋಯಿನ್ ನಾನೇ. ಅಥವಾ ಓದುಗರಿಗೆ ತಾವೂ ಪಾತ್ರವಾಗಿ ಅನಿಸಬಹುದು. ಯಾಕೆಂದರೆ ನಮ್ಮ ನಮ್ಮ ಬದುಕಿಗೆ ನಾವೇ ನಾಯಕಿಯರಾಗಬೇಕು ಎಂಬುದು ನನ್ನ ಅಭಿಮತ.
ಇಲ್ಲಿನ ಬರೆಹಗಳಿಗೆ ಒಂದು ನಿರಂತರತೆ ಇಲ್ಲ. ಒಂದಕ್ಕೊಂದು ಪೂರಕವಾಗಿಯೂ ಇವುಗಳಿಲ್ಲ. ಶುದ್ಧ ಲಲಿತಪ್ರಬಂಧದ ಪ್ರಕಾರದಲ್ಲಿಯೂ ಇವು ಇದ್ದಂತಿಲ್ಲ. ಚದುರಿದ ಚಿತ್ರಗಳು, ಕಲೆಸಿಹೋದ ಬಣ್ಣಗಳಾಗಿ ಇವು ಇವೆ. ಬಿಡಿ ಲೇಖನವಾಗಿ ಓದಿ ಮೆಚ್ಚಿದಾಕ್ಷಣ ಈಗ ಪುಸ್ತಕ ರೂಪದಲ್ಲಿ ಒಟ್ಟಿಗೇ ಬಂದಾಗ ಓದಿ ಮೆಚ್ಚುತ್ತಾರೆ ಎಂಬ ಅಹಂಕಾರ ಖಂಡಿತಾ ನನಗಿಲ್ಲ. ಇಲ್ಲಿ ಖುಷಿ ಇದೆ. ನೋವಿದೆ. ಬೇಸರವಿದೆ, ಬಗೆಹರಿಯದ ಸಮಸ್ಯೆಗಳು, ಜಗಳಗಳು ಇವೆ. ನನ್ನ ದಶಾವತಾರದ ಬಹುತೇಕ ಮುಖಗಳು ಇಲ್ಲಿ ಇವೆ. ಈ ಎಲ್ಲ ಮುಖಗಳನ್ನು ಕನ್ನಡಿಯಲ್ಲಿ ನೋಡಿದಾಗ ಕಾಣುವ ಪ್ರತಿಬಿಂಬ ಮಾತ್ರ ಅಪ್ಪನದೇ. ಓದಿದವರಿಗೆ ಇದನ್ನು ಪುಸ್ತಕ ಮಾಡುವ ಅಗತ್ಯವಿತ್ತಾ? ಎಂಬ ಪ್ರಶ್ನೆ ಕಾಡಿದರೂ ನನಗೆ ಏನೂ ಅನ್ನಿಸುವುದಿಲ್ಲ. ಪುಸ್ತಕ ಮಾಡಬಾರದು ಎಂಬ ನನ್ನ ಆಲೋಚನೆಯ ನಡುವೆಯೇ, ಇದನ್ನು ಪುಸ್ತಕವಾಗಿಸಬೇಕು ಎಂಬ ತೀರ್ಮಾನಕ್ಕೆ ಬಂದವಳು ನಾನು ಬೇಡ ಬೇಡ ಎನ್ನುತ್ತಲೇ ಹೊಟ್ಟೆತುಂಬಾ ಉಣ್ಣುವವರ ಸಾಲಿಗೆ ಸೇರಿದ್ದು ಇದು.
ಬದುಕಿನ ಕನ್ನಡಿಯಲ್ಲಿ ಎಂದು ಹೆಸರಿಡಲೂ ಒಂದು ಕಾರಣವಿದೆ. ಇದು "ಬದುಕಿನ ಕನ್ನಡಿಯಲ್ಲಿ" ಎಂದಷ್ಟೇ ಅಲ್ಲ. ಬದುಕಿನ ಕನ್ನಡಿಯಲ್ಲಿ ಅಪ್ಪನದೇ ಪ್ರತಿಬಿಂಬ. ನನ್ನ ಬದುಕಿನ ಪ್ರತೀ ಸನ್ನಿವೇಶದಲ್ಲೂ ಅಪ್ಪನೇ ಎದುರಾಗುವುದು. ನನ್ನ ಬದುಕಿನ ಕನ್ನಡಿಯಲ್ಲಿ ಕಾಣುವುದು ಅಪ್ಪನದೇ ಬಿಂಬ. ಎಲ್ಲ ಹೆಣ್ಣು ಮಕ್ಕಳ ಬದುಕಿಗೂ ಅಪ್ಪನೇ ಹೀರೋ. ಹಾಗೆಯೇ ನನಗೂ, ಆದರೆ ಹೀರೋ ಅಲ್ಲಿಗೇ ನಿಲ್ಲುವುದಿಲ್ಲ. ಗೆಳೆಯನಾಗಿ, ಮಾರ್ಗದರ್ಶಿಯಾಗಿ, ಎಲ್ಲವನ್ನೂ ತಾಳ್ಮೆಯಿಂದ
ಆಲಿಸಿ ಸಮಾಧಾನಿಸುವ ಬಹು ಆಪ್ತನಾಗಿದ್ದವರು. ಮಗಳಿಗೆ ತಂದೆಯ ಬಗ್ಗೆ ಇರಬಹುದಾದ ಭಯ, ಒಂದು ಸಣ್ಣ ಅಂತರ ಇತ್ಯಾದಿಗಳು ನನಗಿಲ್ಲ. ಭಗವಂತನೊಡನೆ ನಡೆಸುವ ಅನುಸಂಧಾನದಷ್ಟೇ ಸಹಜವಾಗಿ ಅಪ್ಪನೊಡನೆ ನನ್ನ ಸಂವಾದ. ಇಲ್ಲಿನ ಅನೇಕ ಲೇಖನಗಳಲ್ಲಿ ಅಪ್ಪ ಇದ್ದಾರೆ, ಆತನೇ ನಾಯಕನಾಗಿ ಅಥವಾ ಲೇಖನಕ್ಕೆ ಪೂರಕವಾಗಿ ಇಲ್ಲಿನ ಬರೆಹಗಳನ್ನು ಓದಿದಾಗ, ನಮ್ಮ ಬಾಲ್ಯವೂ ಹೀಗೆಯೇ ಇತ್ತಲ್ಲ, ನಾವೂ ಹೀಗೆಯೇ ಬದುಕಿದ್ದೆವಲ್ಲ ಅಥವಾ ನಾವು ಹೀಗೆ ಇರಲೇ ಪುಸ್ತಕ ಮಾಡಬಾರದು ಎಂಬ ನನ್ನ ಆಲೋಚನೆಯ ನಡುವೆಯೇ, ಇದನ್ನು ಪುಸ್ತಕವಾಗಿಸಬೇಕು ಎಂಬ ತೀರ್ಮಾನಕ್ಕೆ ಬಂದವಳು ನಾನು. ಬೇಡ ಬೇಡ ಎನ್ನುತ್ತಲೇ ಹೊಟ್ಟೆತುಂಬಾ ಉಣ್ಣುವವರ ಸಾಲಿಗೆ ಸೇರಿದ್ದು ಇದು.
ಬದುಕಿನ ಕನ್ನಡಿಯಲ್ಲಿ ಎಂದು ಹೆಸರಿಡಲೂ ಒಂದು ಕಾರಣವಿದೆ. ಇದು "ಬದುಕಿನ ಕನ್ನಡಿಯಲ್ಲಿ" ಎಂದಷ್ಟೇ ಅಲ್ಲ. ಬದುಕಿನ ಕನ್ನಡಿಯಲ್ಲಿ ಅಪ್ಪನದೇ ಪ್ರತಿಬಿಂಬ. ನನ್ನ ಬದುಕಿನ ಪ್ರತೀ ಸನ್ನಿವೇಶದಲ್ಲೂ ಅಪ್ಪನೇ ಎದುರಾಗುವುದು. ನನ್ನ ಬದುಕಿನ ಕನ್ನಡಿಯಲ್ಲಿ ಕಾಣುವುದು ಅಪ್ಪನದೇ ಬಿಂಬ. ಎಲ್ಲ ಹೆಣ್ಣು ಮಕ್ಕಳ ಬದುಕಿಗೂ ಅಪ್ಪನೇ ಹೀರೋ. ಹಾಗೆಯೇ ನನಗೂ, ಆದರೆ ಹೀರೋ ಅಲ್ಲಿಗೇ ನಿಲ್ಲುವುದಿಲ್ಲ. ಗೆಳೆಯನಾಗಿ, ಮಾರ್ಗದರ್ಶಿಯಾಗಿ, ಎಲ್ಲವನ್ನೂ ತಾಳ್ಮೆಯಿಂದ ಆಲಿಸಿ ಸಮಾಧಾನಿಸುವ ಬಹು ಆಪ್ತನಾಗಿದ್ದವರು. ಮಗಳಿಗೆ ತಂದೆಯ ಬಗ್ಗೆ ಇರಬಹುದಾದ ಭಯ, ಒಂದು ಸಣ್ಣ ಅಂತರ ಇತ್ಯಾದಿಗಳು ನನಗಿಲ್ಲ. ಭಗವಂತನೊಡನೆ ನಡೆಸುವ ಅನುಸಂಧಾನದಷ್ಟೇ ಸಹಜವಾಗಿ ಅಪ್ಪನೊಡನೆ ನನ್ನ ಸಂವಾದ. ಇಲ್ಲಿನ ಅನೇಕ ಲೇಖನಗಳಲ್ಲಿ ಅಪ್ಪ ಇದ್ದಾರೆ. ಆತನೇ ನಾಯಕನಾಗಿ ಅಥವಾ ಲೇಖನಕ್ಕೆ ಪೂರಕವಾಗಿ ಇಲ್ಲಿನ ಬರೆಹಗಳನ್ನು ಓದಿದಾಗ, ನಮ್ಮ ಬಾಲ್ಯವೂ ಹೀಗೆಯೇ ಇತ್ತಲ್ಲ, ನಾವೂ ಹೀಗೆಯೇ ಬದುಕಿದ್ದೆವಲ್ಲ ಅಥವಾ ನಾವು ಹೀಗೆ ಇರಲೇ ಇಲ್ಲ ಎಂದು ಅನಿಸಿದರೆ ಈ ಪುಸ್ತಕ ಸಾರ್ಥಕವಾಗುತ್ತದೆ. ಏಕೆಂದರೆ ನಾವು ಇಂದು ಏನಾಗಿದ್ದೇವೋ ಅದಕ್ಕೆ ಬಹುಮುಖ್ಯ ಕಾರಣ ನಮ್ಮ ಬಾಲ್ಯ ಮತ್ತು ನಾವು ಬೆಳೆದ ವಾತಾವರಣ.
"ಬದುಕು ಹಕ್ಕಲ್ಲ; ಕೃತಜ್ಞತೆ" ಎಂದು ಅಂತರಂಗಕ್ಕೆ ಆಪ್ತರಾದವರು ಷರಾ ಬರೆದಿದ್ದಾರೆ. ನಾನದನ್ನು ಮೀರಲಾರೆ. ಈ ಬದುಕು ಭಗವಂತನ ಕರುಣೆ. ಹಾಗಾಗಿ ಅವನಿಗೆ ಚಿರಕಾಲವೂ ಋಣಿ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!