ಭಯದಿ ತತ್ತರಿಸಿ ನಡುಗಿದೆ ಜೀವ

ಏನಾಗಬಾರದೆಂದು ಅಂದುಕೊಂಡೆನೋ

ಅದೇ ಆಗುತಿಹುದು ಇಂದು

ಎನ್ನಲೇನು ಕಂಡೆನೀ

ಎದೆಬಡಿತವಡು ಏರುತಿಹುದು

ದಿಕ್ಕು ತೋಚದೆ ಮನಸ್ಸು

ಹುಚ್ಚು ಕುದುರೆಯಂತೆ ಚಿಂತಿಸುತಿಹುದು

ಎನ್ನ ಕಣ್ಣಗಳು ಪಟಪಟಿಸಿ

ಎದೆನಡುಗಿ ಮಾತು ಬಾರದೆ

ಅಪ್ಪ ಅಮ್ಮನ ದೂರದಿ ಬಿಟ್ಟು

ನಾ ದಿಕ್ಕು ತಪ್ಪಿಹ ಕೋಳಿಮರಿಯಂತಾಗಿಹೆನು

ನಾ ಕಾಲು ಜಾರಿ ಬಿದ್ದರೆ

ಅಮ್ಮ ಅವಳು ಮರುಗುವಳು

ನಂಗಿಲ್ಲಿ ನೋವೆಂದರೆ

ಅಪ್ಪ ಅವನು ಒಳಗೆ ಕೊರಗುವನು

ನಾ ಯಾರಿಗೆಲ್ಲ ನೋಯಿಸುವೆನೋ

ಬೇಕೆನಗೆ ಎಲ್ಲರೂ.........

ಓ ದೇವರೇ ಎನ್ನ ಪ್ರಾರ್ಥನೆಯ ನೀ ಕೇಳೆಯಾ