ಮುನಿಸು ತೊರೆಯದಿರಲು ಚೆಲುವೆ
ಮನಸು ಹಗುರವಾದಿತೆ
ಮನದ ಪ್ರೇಮ ಬರಲು ಸವಿಗೆ
ಮನೆಗೆ ಹರುಷ ಬಂದಿತೆ
ಮೌನದೊಳಗೆ ಮತ್ತೆ ಸಿಡುಕು
ಮೌನಿಯಾಯ್ತು ಹೂ ಬನ
ಮೀನ ಮೇಷದೊಳಗೆ ಬದುಕು
ಮಿನುಗದಾಯ್ತು ಮೈ ಮನ
ಮೇನೆಯೊಳಗೆ ಕುಳಿತುಕೊಳದೆ
ಮನಕೆ ಇಹುದೆ ಸ್ಪಂಧನ
ಮನಸಿನೊಳಗೆ ದೇಹ ಬಾದೆ
ಮನದೊಳಿರಲಿ ಕಂಪನ
ಮುನಿಯ ಬೇಡ ಚೆಲುವ ತೋರು
ಮನದ ಒಲುಮೆ ಸುಂದರಿ
ಮನಸಿನಾಟ ಒಡಲ ಚಿಗುರು
ಮನೆಲಿ ಸವಿಯ ಬಾನ್ಸೂರಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!