ಮುಸ್ಸಂಜೆ ಹೊತ್ತಿನಲಿ

ಮತ್ತೆ ಮೌನಕೆ ಜಾರಿ

ಚೆಲುವು ತುಂಬಿದ ಕಲೆಗೆ ಗೆಲುವತಾರೆ

ಕನಸುಗಳ ಮಾತಿನಲಿ

ನನಸು ಕರಗುತ ಸಾಗಿ

ಮುಗಿಲಿನೊಳಗಿನ  ಬಗೆಗೆ ಬಲವತಾರೆ

ಮಾದಕದ ರೂಪದೊಳು 

ಹೊಳಪು ಚಿಮ್ಮತಲಿರಲು

ಮೋಹ ಕಾಂತಿಯ ನಗೆಗೆ ಚೆಲುವತಾರೆ 

ತಲೆಯೆತ್ತಿ ನೋಡಲದು 

ಸಿಂಗಾರ ಸಮಯದೊಳು

ಮಿಂಚು ಹೊಳಪಿನ ಬೆಸುಗೆ ಸವಿಯತಾರೆ

ಮತ್ತೆ ಹುಟ್ಟದು ಜೀವ

ಬಯಕೆ ತೀರಿದ ಭಾವ

ಚೈತ್ರಗಳ ಸುಳಿ ಒಳಗೆ  ನಲಿವತಾರೆ 

ಕಾಮನೆಯು ತೀರದವ

ಸುಳಿಯುತಲೆ ಬರುತಿರುವ 

ಹೊನ್ನ ಮಂಚದ ಸವಿಗೆ ಒಲವತಾರೆ

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ