ಮೌನ ಕಡಲೊಳು ತೇಲುತಲೆ ಸಾಗಿಹೆನು

ಗುರಿ ಮುಟ್ಟವ ಕನಸು ನನಲಿಲ್ಲ 

ಕಲಿತಿರುವ ವಿದ್ಯೆಗಳು ದಾರಿಯಲೆ ಕುಳಿತಿಹವು

ಬರುವುದೆನ್ನುವ  ನನಸು ಕಾಣುತಿಲ್ಲ

ಮಂದಿರದ ಬಾಗಿಲದು ಮುಚ್ಚಿಹುದು ನನಗಿಂದು

ಒಳಗೆ ಹೋಗುವ ದಾರಿ ತಿಳಿಯುತಿಲ್ಲ

ಮಾತನಾಡುವ ಬಯಕೆ ಮನದೊಳಗೆ ಹೂತಿರಲು

ಮನದೆನ್ನೆ ದರುಶನವ ಕೊಡಲೆಯಿಲ್ಲ

ಬೆಲೆಯನರಿಯದ ಮಂದಿ ಕುಹಕದಲಿ ಹೇಳಿಹರು

ಚಿಪ್ಪು ಕಾಸಲು ಗತಿಯು ಇವನಲಿಲ್ಲ

ಸಂತೆಯೊಳಗಿನ ಗೌಜಿ ಮನೆ ಮಂದಿಯೊಳಗಿರಲು

ಆಸರೆಯ ತೀರದೊಳು ಸುಖವುಯಿಲ್ಲ

 

ಸ್ವಾರ್ಥ ಕೆಲಸದ ಬಗೆಗೆ ಅನುದಿನವು ಬಳಸಿದರು

ಮುಗಿದಾಗ ನನಗಿಂದು ಕೈಕೊಟ್ಟರಲ್ಲ

ಹೊಟ್ಟೆ ಹಸಿವಿನ ನೋವು ತಿಳಿದಿಲ್ಲ ಅವರಿಗದು

ಮರದಡಿಯೆ ಮಲಗಿಹೆನು ರಾತ್ರಿಯೆಲ್ಲ

ಜೀವಿತದ ಜೊತೆ ಜೊತೆಗೆ ಹೀಗೆ ಸಾಗುವೆನೆಂದು

ತಪ್ಪು ಯಾರದು ಇಲ್ಲ ನನ್ನದೆಲ್ಲ

ಜಗದ ನೋವಿನ ನಡುವೆ ನಾ ಮುದುಡಿ ಕುಳಿತಿರಲು

ಒಡಲೊಳಗೆ ಕಹಿಬೇವು ಒಗರುಯೆಲ್ಲ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ