'ರೈತರ ನೆಚ್ಚು ಮೆಚ್ಚಿನ ಮರಗಳು' - ರೈತರು ಓದಲೇಬೇಕಾದ ಪುಸ್ತಕ!

ಒಮ್ಮೆ, ಐಮಂಗಲದ ಅಭಿಲಾಷ್ ಪಂಡರಹಳ್ಳಿ ಅವರು ಕಾರ್ಯಕ್ರಮವೊಂದಕ್ಕೆಂದು ಹಿರಿಯೂರಿನ ಬಬ್ಬೂರು ಫಾರ್ಮ್‌ಗೆ ಹೋದಾಗ, ಅವರ ಕಣ್ಣಿಗೆ ಬಿದ್ದ ಒಂದು ಪುಸ್ತಕದ ಬಗ್ಗೆ ನನಗೆ ತಿಳಿಸಿದ್ದರು. ಅದಾದ ನಂತರ ಆ ಪುಸ್ತಕವನ್ನು ಅವರು ಮತ್ತು ನಿಶಾಂತ್ ಪ್ರಧಾನಿಯವರು ಓದಲು ಎರವಲು ಪಡೆದುಕೊಂಡಿದ್ದರಂತೆ. ಆಗ ನನಗೂ ಈ ಪುಸ್ತಕವನ್ನು ಓದಲು ಅವಕಾಶ ಸಿಕ್ಕಿತ್ತು.

ರೈತರ ನೆಚ್ಚುಮೆಚ್ಚಿನ ಮರಗಳು, ರೈತರಿಗೆ ಬೇಕೇ ಬೇಕಾದ ಹಲವು ಮರಗಳ ಜೊತೆಗೆ, ರೈತರು ಬೆಳೆಸಿದರೆ ಅವರಿಗೆ ಎಲ್ಲೆಡೆಯಿಂದ ಏಳಿಗೆ ಆಗುವಂತಹ ಕೆಲವು ಮರಗಳ ಬಗ್ಗೆಯೂ ಈ ಪುಸ್ತಕ ತಿಳಿಸುತ್ತದೆ. ಹಾಗಾಗಿ, ಇದು ಪ್ರತಿಯೊಬ್ಬ ರೈತರ ಮನೆಯಲ್ಲೂ ಇರಲೇಬೇಕಾದ ಪುಸ್ತಕ.

ಪುಸ್ತಕದ ತಿರುಳು — ಸರಳ ಮಾತಿನಲ್ಲಿ

ಈ ಪುಸ್ತಕ ರೈತರಿಗಾಗಿ ಬರೆದದ್ದು. "ಮರಗಳೂ ಒಂದು ಬೆಳೆ; ರೈತರಿಗೆ ಆಪ್ತ ಮಿತ್ರರು" ಎಂಬ ಸರಳ ಸಂದೇಶವನ್ನು ಪುಸ್ತಕ ಪುಟ ಪುಟದಲ್ಲೂ ಸಾರುತ್ತದೆ. ಕಾಳು-ಕಡ್ಡಿ ಬೆಳೆಗಳಿಗೆ ತಿಂಗಳುಗಳಲ್ಲಿ ಫಲ ಸಿಗುತ್ತದೆ; ಮರಗಳು ಬೆಳೆದು ದೊಡ್ಡದಾಗಲು ವರ್ಷಗಳೇ ಬೇಕು. ಆದರೆ ಮನೆ, ಮಂಚ, ನೇಗಿಲು, ಕಾಗದ, ಹಾಲು, ಹಣ್ಣು, ಸೌದೆ, ಗಾಡಿ — ಎಲ್ಲವೂ ಮರಗಳಿಂದಲೇ ಬರುತ್ತವೆ ಎಂಬುದನ್ನು ಲೇಖಕರು ಎಚ್ಚರಿಸುತ್ತಾರೆ.

ಭಾಷೆ ಬಹಳ ಸರಳ, ಗದ್ಯ ಸುಗಮ. ಗಾದೆಗಳು, ಉದಾಹರಣೆಗಳು, ರೈತರ ದಿನನಿತ್ಯದ ಅನುಭವಗಳಿಂದ ತುಂಬಿರುವ ಬರವಣಿಗೆ. ಗಿಡಮರಗಳ ಬಗ್ಗೆ ರೈತರಲ್ಲಿರುವ ತಪ್ಪು ಕಲ್ಪನೆಗಳಿಗೆ — "ಮರಗಳ ನೆರಳಿನಿಂದ ಬೆಳೆ ಕೆಡುತ್ತದೆ", "ಹಕ್ಕಿಗಳು ಕಾಳು ಕುಕ್ಕುತ್ತವೆ", "ಮರಗಳಿಗೆ ಜಮೀನು ಎಲ್ಲಿದೆ?", "ಮರ ಬೆಳೆಯಲು ತುಂಬಾ ವರ್ಷ ಬೇಕು" ಎಂಬುದಕ್ಕೆಲ್ಲಾ — ಶಾಸ್ತ್ರೀಯ ಆಧಾರದೊಂದಿಗೆ ಪರಿಹಾರ ನೀಡುತ್ತಾರೆ. ಒಳಗೆ ರೇಖಾಚಿತ್ರಗಳಿವೆ (ಚಿತ್ರಕಾರರು — ಶ್ರೀ ಎಚ್‌. ಎಸ್‌. ರಾಜಾರಾಂ).

ಒಟ್ಟಿನಲ್ಲಿ — ೧೯೭೩ರಷ್ಟು ಹಳೆಯ ಪುಸ್ತಕವಾದರೂ, ಇಂದಿನ ಪರಿಸರ ಸಮಸ್ಯೆಗಳಿಗೆ ಇನ್ನೂ ಪ್ರಸ್ತುತ. ರೈತರು, ವಿದ್ಯಾರ್ಥಿಗಳು, ಪರಿಸರಪ್ರಿಯರು — ಎಲ್ಲರೂ ಓದಬೇಕಾದ ಸಣ್ಣ, ಆದರೆ ತೂಕವುಳ್ಳ ಕೃತಿ.

ರೈತರು ಮರಗಳನ್ನು ಏಕೆ ಬೆಳೆಸಬೇಕು? ವನವೃಕ್ಷಗಳನ್ನು ಕಡಿಯುವುದರಿಂದ ಆಗುವ ಪರಿಣಾಮಗಳೇನು? ರೈತರು ಮರಗಳನ್ನು ಬೆಳೆಸುವುದು ಹೇಗೆ? ಯಾವ ಉದ್ದೇಶಕ್ಕೆ ಯಾವ ಗಿಡ ಮರಗಳು? ಇವೆಲ್ಲ ಪ್ರಶ್ನೆಗಳಿಗೆ ಸವಿವರವಾದ ಉತ್ತರಗಳನ್ನು ನೀಡುತ್ತ ಬಗೆ ಬಗೆಯ ಮರಗಳ ಬಗ್ಗೆ ನರಸಿಂಹ ಅಯ್ಯಂಗಾರ್ ರೈತರ ಮನಸ್ಸಿನಿಂದಲೇ ಬರೆಯುತ್ತಾರೆ. ಪ್ರತಿಯೊಂದು ಮರದ ಬಗ್ಗೆಯೂ ವಿವರಣೆ ಇದೆ. ಮರಗಳ ಬಗ್ಗೆ ನನಗೆ ಇರುವ ಪ್ರೀತಿ ನನ್ನನ್ನು ನಿಮಗಾಗಿ ಈ ಪುಸ್ತಕವನ್ನು ಹೆಕ್ಕಿ ಇಲ್ಲಿ ಪ್ರಸ್ತಾಪಿಸಿರುವ ಎಲ್ಲ ಮರಗಳ ಪಟ್ಟಿಯೊಂದನ್ನು ಮಾಡಿ ಹಂಚಿಕೊಳ್ಳುವಂತೆ ಮಾಡಿತು.

ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಮರಗಳ ಪಟ್ಟಿ

(ಅಧ್ಯಾಯ V ("ಬಗೆ ಬಗೆಯ ಮರಗಳು") ಒಂದರಲ್ಲೇ ೭೩ ಮುಖ್ಯ ಪ್ರವೇಶಗಳಿವೆ; ಜೊತೆಗೆ ಅನೇಕ ಉಪಜಾತಿಗಳಿವೆ.)

ಮುಖ್ಯ ಮರಗಳು

  1. ಬೆಟ್ಟದ ಕಣಗಲು

  2. ಕಲ್ತೇಗ

  3. ಸಂಪಿಗೆ

  4. ಪುತ್ರಜೀವಿ

  5. ಹೆಸ್ಸರೆ (ಹೆಸ್ಸಾರಿ)

  6. ಸುರಗಿ

  7. ಸುರಹೊನ್ನೆ

  8. ನಾಗಸಂಪಿಗೆ

  9. ಕಿರಲ್‌ ಬೋಗಿ

  10. ಬೂರುಗ

  11. ಬಿಳೀ ಬೂರುಗ

  12. ಹೂವರಸಿ

  13. ರುದ್ರಾಕ್ಷಿ

  14. ತಡಸಾಲು

  15. ಕರಿಬೇವು

  16. ದೊಡ್ಡಮರ

  17. ಧೂಪದ ಮರ

  18. ಬೇವು

  19. ಹುಚ್ಚುಬೇವು

  20. ಗಿಡಾಲು

  21. ಸ್ವಾಮಿಮರ

  22. ಕೆಂಪು ಗಂಧಗರಿ

  23. ಹುರಗಲು ಮರ

  24. ಕೆಂದಾಳೆ

  25. ಅಂಟುವಾಳ

  26. ಬಂದರಿಕೆ

  27. ಉಡಿಮರ

  28. ನುಗ್ಗೆ

  29. ಅಗಸೆ

  30. ಹಾಲಿವಾಣ

  31. ಮುತ್ತುಗ

  32. ಬಿಂದಿ (ಬಿಂಡಿಮರ)

  33. ಬೀಟೆ

  34. ಹೊನ್ನೆ

  35. ಗ್ಲಿರಿಸೀಡಿಯ

  36. ಹೊಂಗೆ

  37. ಬೆಹೆರಸಿ

  38. ತಂಗಡಿ ಕುಟುಂಬದ ಮರಗಳು

    • i) ಕಕ್ಕೆ

    • ii) ಒಳ್ಳೆ ತಂಗಡಿ

    • iii) ಅಲಂಕಾರದ ತಂಗಡಿ — ಅ) ಕ್ಯಾಷಿಯ ನೋಡೋಸ ಆ) ಕ್ಯಾಷಿಯ ಜವಾನಿಕ ಇ) ಕ್ಯಾಷಿಯ ರೇನಿಜಿರ ಈ) ಕ್ಯಾಷಿಯ ಮಾರ್ಜಿನೇಟ ಉ) ಕ್ಯಾಷಿಯ ಗ್ರ್ಯಾಂಡಿಸ್‌

    • iv) ಸೀಮೆ ತಂಗಡಿ

  39. ಕಾರಾಚಿ

  40. ಹುಣಿಸೆ

  41. ಕಂಚುವಾಳದ ಕುಟುಂಬದ ಮರಗಳು

    • i) ಕಂಚುವಾಳ

    • ii) ಉಳಿಪೆ

  42. ಜಂಬೆ

  43. ಉಣ್ಣೆ

  44. ಪ್ರೊಸೋಪಿಸ್‌

  45. ಜಾಲಿ ಕುಟುಂಬದ ಮರಗಳು

    • i) ಜಾಲಿ — ಅ) ಗೋಡಿ ಆ) ವೇದಿ ಇ) ರೆಂಕಂಟ

    • ii) ಬಿಳಿಜಾಲಿ

    • iii) ಕಗ್ಗಲಿ

    • iv) ಬುಡ್ಡೆಜಾಲಿ

    • v) ಮುಗಳಿ

    • vi) ಬನ್ನಿ

  46. ಬಾಗೆ ಮರಗಳು

    • i) ಬಾಗೆ

    • ii) ಬಿಲ್ವಾರ

    • iii) ಹೊಟ್ಟೆ ಬಾಗೆ

    • iv) ಚುಗ್ಗಲು

  47. ಸೀಮೆ ಹುಣಿಸೆ

  48. ಮಳೆ ಮರ

  49. ಮತ್ತಿ ಕುಟುಂಬದ ಮರಗಳು

    • i) ಮತ್ತಿ

    • ii) ಬಿಳಿ ಮತ್ತಿ

    • iii) ತಾರೆ

    • iv) ಹುಲ್ವಿ

    • v) ನಾಡು ಬಾದಾಮಿ

    • vi) ಅಳಲೆ

  50. ಡಿಂಡಿಗ

  51. ಕರ್ಪೂರದ ಮರ

  52. ಗೋರಂಟಿ

  53. ಹೊಳೆ ದಾಸವಾಳ

  54. ನಂದಿ

  55. ಚನ್ನಂಗಿ

  56. ಅಂಕೋಲೆ

  57. ಕದಂಬ

  58. ಹೆತ್ತೇಗ

  59. ಇಪ್ಪೆ ಮರಗಳು

    • i) ಇಪ್ಪೆ

    • ii) ಕಾಡು ಇಪ್ಪೆ

  60. ಜಗಳಗಂಟಿ ಮರಗಳು

    • i) ಜಗಳಗಂಟಿ ಮರ

    • ii) ಮಲ್ಲಾಳಿ

  61. ಬೆಪ್ಪಾಲೆ

  62. ಸೊಲ್ಲೆ

  63. ಕೂಲಿ

  64. ಸಿಲ್ವರ್‌ ಓಕ್‌

  65. ಗೊಬ್ರನೇರಳೆ

  66. ಕಾಟ್‌ಕುಂಬಳ

  67. ಬೆಂಡುಮರ

  68. ತಪಸಿ

  69. ಕ್ಯಾಸರಿಕೆ

  70. ನೀರಂಜಿ

  71. ಕಲ್‌ಹೊನ್ನೆ

  72. ಕಿರಿ ಬಿದುರು

  73. ಗೊರವಿ

ಜೊತೆಗೆ ಪುಸ್ತಕದ ಪೀಠಿಕೆಯಲ್ಲಿಯೇ ಹುಣಿಸೆ, ನೇರಳೆ, ಬೇವು, ಹಿಪ್ಪೆ, ಹೊಂಗೆ, ಮಾವು, ಹಲಸು, ತೆಂಗು ಮುಂತಾದ "ಊರಿನ ಮರಗಳು" ಬಂದು ಹೋಗುತ್ತವೆ.

ಶೀರ್ಷಿಕೆ: ರೈತರ ನೆಚ್ಚು ಮೆಚ್ಚಿನ ಮರಗಳು

  • ಪ್ರಕಾಶಕರು: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

  • ಮುದ್ರಕರು: ರಾಷ್ಟ್ರೋತ್ಥಾನ ಮುದ್ರಣಾಲಯ, ಕೆಂಪೇಗೌಡ ನಗರ, ಬೆಂಗಳೂರು-19

  • ಮೊದಲ ಮುದ್ರಣ: 1973

  • ಮುನ್ನುಡಿ: ಡಾ. ಸಿ. ನಾಯಕ್‌ (ಅಂದಿನ ಉಪಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು)

  • ಸಮರ್ಪಣೆ: ಮೈಸೂರು ವ್ಯವಸಾಯ ಇಲಾಖೆಯ ನಿವೃತ್ತ ನಿರ್ದೇಶಕರಾದ ಶ್ರೀ ಕೆ. ಎಚ್‌. ಶ್ರೀನಿವಾಸನ್‌ ಅವರಿಗೆ

  • ಬರಹಗಾರರು: ಮ. ಲ. ನರಸಿಂಹ ಅಯ್ಯಂಗಾರ್