ಯಾವುದೋ ಸಮಯದಿ ಪ್ರೀತಿಯ 

ಕೂಡಿಸಿ,ಗುಣಿಸುತ ಭಾಗಿಸಿ ಮುನ್ನಡೆದೆ 

ಅರ್ಥವು ಆಗುವ ಕಾಲಕೆ ಇಂದು 

ಕಳೆಯುತ ಜೀವನ ಸಾಗಿಸಿದೆ 


ಬೇಸರ ನುಡಿಯಲಿ ಬಸಿರದು ನೊಂದಿದೆ 

ದ್ವೇಷದ ಅಮಲಿಗೆ ಗೋಳಿಡುತ 

ಸ್ನೇಹದ ಸುಂದರ ಬಲೆಯದು ಹರಿದಿದೆ 

ತಾಳ್ಮೆಯು ಇಲ್ಲದೆ ಅನವರತ

ಮಾತಿಗೆ ಮಾತದು ವೇದನೆ ಮನದೊಳು 

ಇರುವುದೇ ಒಡಲಿಗೆ ಸವಿಕಡಲು 

ಬದುಕ ಕತೆಯೊಳು ವ್ಯಥೆಯ ಹೂರಣ 

ಮತಿಗೆ ನಿಲುಕದ ತನುವೊಲೂ 


ಕನಸೂ ಕಾಣದೆ ನನಸದು ಸೊರಗಲು 

ಮಬ್ಬು ಕತ್ತಲೆಯೇ ಕಾಣುತಿದೆ 

ವರುಷ ಕಳೆಯುತ ದೇಹ ಬಾಗಲು 

ಆತ್ಮವು ದೂರಕೆ ಸಾಗುತಿದೆ 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ