ಈ ಹಾಡಿನ ಒಂದೆರಡು ಸಾಲು ಅನುವಾದ ಮಾಡಿ 47 ನೇ ಸಂಖ್ಯೆ ಅಡಿ ನಿಮ್ಮೊಂದಿಗೆ ಬಹುಶಃ ಹಂಚಿಕೊಂಡಿದ್ದೆ . ಎಂದಿನಂತೆ ಮೂಲ ಹಾಡಿನ ಧಾಟಿಯಲ್ಲಿಯೇ ಈಗ ಅದರ ಪೂರ್ತಿ ಅನುವಾದವನ್ನು ಇಲ್ಲಿ ಕೊಡುತ್ತಿದ್ದೇನೆ.
ತಿಳಿ ಹೇಳುವೆ ನನ್ನ ಹೃದಯಕ್ಕೆ ನಾನು
ಆದರೂ ಬಾಯಿಗೆ ಬರುವುದು ನಿನ್ನ ಹೆಸರು
ಎಲ್ಲಿ ಗುಟ್ಟನ್ನು ಇಟ್ಟುಕೊಳ್ಳೆನೋ
ಬದುಕಲ್ಲಿ ಅಂತಹ ದಿನ ಬಂದಿದೆ
ನಿನ್ನನ್ನು ಮಾಡ್ಕೊಂಡೆ ನಾನು ನನ್ನಯ ಗೆಳತಿ
ಇರಬೇಕು ಹೇಗೆ ಎಚ್ಚರ ನನ್ನಲ್ಲಿ
ನಿನ್ನಯ ಕಣ್ಣು ನೇರಳೆ ಹಣ್ಣು
ಒಳ್ಳೆಯ ರಸದೌತಣ ನನಗೀಗ ತಾನೇ
ನಿನ್ನ ದಟ್ಟ ಕೇಶ ರಾಶಿ
ನೀ ಹರಡಿದೆ ನನ್ನ ಮೇಲೆ
ನಾ ತಿಳಿದೆ ನಮ್ಮ ಎದೆ ಬಡಿತ ತಾನು
ಆಯ್ತು ಈಗ ಒಂದೇನೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!