ಸಾಲು ಮರದ ತಿಮ್ಮಕ್ಕ
ನೀ ನೆಟ್ಟಾ ಮರ ಇಲ್ಲೇ
ಸಾಲುಸಾಲು ಮರಗಳನು
ಮಕ್ಕಳಂತೆ ನೀ ಸಲಹಿದೆ
ಮಕ್ಕಳಿಲ್ಲದಿರೇನಂತೆ
ಮರವೇ ಮಕ್ಕಳು ನಿನಗೆ !! ಸಾಲು!!
ಹಾಲು ಅನ್ನ ಉಣಿಸಿಲ್ಲ
ನೀರೂಣಿಸಿಯೇ ನೀ ಬೆಳೆಸಿದೆ
ಮರಗಳೆಂಬ ನಿನ್ನ ಮಕ್ಕಳು
ಜಗಕೆ ತಂಪಾದರಿಲ್ಲೇ !! ಸಾಲು!!
ಪ್ರತಿಫಲ ನೀ ಬಯಸಿಲ್ಲ
ನಿನ್ನತನ ಮರೆತಿಲ್ಲ
ಜಗವೇ ನಿನ್ನನು ಕಂಡು
ಶರಣೆಂದಿತು ಕೈ ಮುಗಿದಿಂದು !! ಸಾಲು!!
ರಚನೆ- ಉಮೇಶ ಮುಂಡಳ್ಳಿ ಭಟ್ಕಳ
ಹಾಡು ಕೇಳಲು ಕೆಳಗಿನ ಲಿಂಕ ಬಳಸಿ
https://youtu.be/HlcUJ0TXIv0?si=3YJ7MrDxX1OFq7iW
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!