ಬನ್ನಿರಿ ಬಾಲರೆ 

ಚಿಣ್ಣರೆ ನೀವು 

ನನ್ನೊಂದಿಗೆ ಇಂದು 

ಆಟದ ಬಯಲಲಿ 

ಆಟವನಾಡಲು 

ಮನಕೆ ಖುಷಿಯಿಂದು 

ಕಬಡ್ಡಿ ಕ್ರಿಕೆಟ್ 

ವಾಲಿಬಾಲು

ಖೋ ಖೋವ ಕಲಿಸುವೆನು

ಚಕ್ರ ಎಸೆತ

ಗುಂಡು ಎಸೆತ 

ಎಸೆವುದ ತಿಳಿಸುವೆನು 

ಓಡುತ ಹಾರುತ 

ಶಕ್ತಿಯ ಪಡೆಯುತ 

ಶರೀರ ಸದೃಢ ಆಗುವುದು 

ನೀತಿಯ ಬೋಧನೆ 

ಜೊತೆಗೆ ಇಹುದು 

ಬುದ್ದಿಯು ಬೆಳೆಯುವುದು

ಹಾರುತ ಕುಣಿಯುತ 

ನಲಿಯಿರಿ ಜಾಣರೆ 

ಮನಸ್ಸಿಗೆ ತುಂಬಾ ಆನಂದ 

ಬಾಳಲಿ ಸೋಲು 

ಬಾರದು ಎಂದಿಗು

ಬದುಕೇ ಸವಿಸವಿ ಚೆಂದ

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ