ರಾಜಕಾರಿಣಿಗಳೆಂದರೆ
ಬಿಳಿ ಆನೆಗಳು
ಎಂದೆಲ್ಲ ಹೇಳುವರು ಮಾಧ್ಯಮದವರು
ಆದರೂ ಇವರಲ್ಲಿ
ಕೆಲವರಿದ್ದಾರೆ ಸ್ವಾಮೀ
ದೇಶ ಲೂಟಿಯ ಮಾಡಿ ಜೈಲು ಸೇರಿದವರು
***
ಕನ್ನಡಕ್ಕಾಗಿ
ಕೈಯೆತ್ತು ನೀನೆಂದೂ,
ಕುವೆಂಪು ಹೇಳಿದ್ದರು ಕೈಯೆತ್ತಿ ಅಂದೇ
ಏನು ಹೇಳಲಿ ಸ್ವಾಮಿ
ರಾಜ್ಯದ ಒಡಲಿಂದು
ಇಂಗ್ಲೀಷ್ ಮಯವಾಗಿ ಮಲಗಿ ನಿದ್ರಿಸಿದೆ
***
ಬುದ್ಧಿ ಜೀವಿಗಳ ಮಾತು
ನಾವೆಲ್ಲ ಒಂದು
ಎಂದವರ ಒಡಲೇ ವಿಷವಾಯ್ತು ಇಂದು
ಚಿಮಿಣಿ ದೀಪದ ಸುತ್ತ
ಬೆಳಕಿದ್ದರೂ ಗೆಳೆಯ
ತಳಹದಿಯ ಬದಿಯಲ್ಲಿ ಕತ್ತಲಿಹುದು
***
ಭಾರತೀಯರು ಎಂದೂ
ಸತ್ಯತೆಯ ಅರಿತವರು
ಸುಳ್ಳನ್ನೆ ನಿಜವೆಂದು ನಂಬಿ ಬದುಕುವರು
ಗಾಂಧೀ ತತ್ತ್ವದ ಅಡಿಯೆ
ಸುಳ್ಳು ತತ್ತ್ವವ ಚೆಲ್ಲುತಲಿ
ಬೀಗುವರು ಆಳುವ ಜನ ಮಾನಸ ನಾಯಕರು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!