ಚುನಾವಣೆ

ಬಂತೆಂದರೆ

ಸಾಕು

ರಾಜಕಾರಣಿಗಳು 

ಹಿಡಿಯುತ್ತಾರೆ

ಜನರ ಕಾಲುಗಳ

ಮತ ಪಡೆದು

ವಿಜಯಿಯಾದರೆ,

ಮತ್ತೆ 

ಮೆರೆಯುತ್ತಾರೆ

ಜನರ

ಮರೆಯುತ್ತಾರೆ !

***

ಭಾರತದ

ಪ್ರಜಾಪ್ರಭುತ್ವದ

ಪ್ರತಿಯೊಂದು

ನಡೆಗಳೂ

ಪೆನ್ನಿನೊಳಗಿನ

ಶಾಯಿಯಂತೆ !

***

ಅಹಮಿಕೆ ಇಲ್ಲದೆಯೆ ಜೀವನದಿ ಒಲವಿರಲಿ

ಅತಿಯಾದ ದ್ವೇಷವನು ಮರೆಯುತ್ತ ಸಾಗಿರಲಿ

ಚಿಂತನೆಯ ಮಾತಿನಲಿ ಗೆಲುವನ್ನು ಸಾದಿಸುತ

ಚಿಂತೆಯನು ಮಾಡದೆಲೆ ಒಳಿತಲ್ಲೆ ಬಾಳಿರಲಿ

***

ದೇಶದ ಐಕ್ಯತೆಯನು

ಉಳಿಸಿ ಬೆಳೆಸುವೆವು

ರಾಜಕೀಯ ಜನರೇ ಹೇಳಿದರು ಅಂದು

ಹೇಳಿದ್ದ ಜನರವರೇ

ಮೂಲಭೂತ ವ್ಯಾಧಿಗಳಾಗಿ

ತಿರುಗುತ್ತಿದ್ದರೆ ನೆಲವು ಚೂರಾಗದೆ  ಇಂದು

***

ಪ್ರಶಸ್ತಿ ಬಂತೆಂದು 

ಹಿಗ್ಗ ಬೇಡಲೋ ಮನುಜ

ಅದರಲ್ಲೂ ಎರಡಿಹುದು ತಿಳಿದಿರಲಿ

ತನ್ನಷ್ಟಕ್ಕೆ ತಾನು 

ಬರುವುದಾದರೆ  ಬರಲಿ

ಹಿಂಬಾಗಿಲಿನಿಂದ ಮಾತ್ರ ಬಾರದಿರಲಿ

***

ವಿಶ್ವದಗಲವು ಇಂದು

ಹಲವು ಜಾತಿಗಳ ತವರೂರು

ಹಾಗಂತ ಹೇಳಿಹರು ನೂರಾರು ಪಂಡಿತರು

ಈಗ ಹೇಳುವಿರೇ ನೀವು

ಜಾತಿ ಭಯೋತ್ಪಾದನೆಗೆ

ನಮ್ಮ ದೇಶವೇ ಏನು ತವರೂರು 

***

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ