ರಾಜಕೀಯ ಹೇಸಿಗೆಯು
ಮೆತ್ತಿಕೊಂಡಿದೆ ನೆಲದಿ
ತೊಳೆದು ಶುಚಿಯನು ಮಾಡಲಾರಿಹರು ಇಲ್ಲಿ
ಯಾವ ಘನ ಸಂಘಗಳು
ಹತ್ತಿರಕ್ಕೂ ಬಾರವು
ಇದರಡಿಯೆ ಅವರಿರುವ ಜಗವು ಇಲ್ಲಿ
***
ಹಸಿದ ಹೊಟ್ಟೆಯ ಪಾಡ
ಕೇಳುವವರೇ ಇಲ್ಲ
ತಮ್ಮ ಹೊಟ್ಟೆಯ ಹೊರೆವ ಜನ ನಾಯಕರು
ಇವರಿರುವ ನೆಲದಲ್ಲಿ
ಹಿಂದೆ ರಾಮನೂ ಇದ್ದ
ಈಗೆಲ್ಲ ಇರುವವರು ಹಣದಾಹದಸುರರು
***
ಪ್ರಾಯ ನಲುವತ್ತಾಯಿತು
ಮದುವೆಯಾಗಿಲ್ಲ ಇನ್ನೂ
ಕಾರಣವ ಹೇಳಿದರೆ ಹುಡುಗಿ ಸಿಗುವುದಿಲ್ಲ
ಹಲವಾರು ಡಿಗ್ರಿಗಳ ಪಾಸು
ಮಾಡಿದರೂ ಚೆಲುವ
ಸರಕಾರಿ ನೌಕರಿ ಸಿಗದೆ ಮನೆಲೆ ಕುಳಿತಿಹನಲ್ಲ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!