ಕಲೆಯ ಹಸಿವದುಯೇನು

ತಿಳಿಯದಿರುವಾ ಮಂದಿ

ಮಾಧ್ಯಮದೊಳಿರಲು ಪ್ರಯೋಜನವೇನು 

ಬಡ ಸಾಹಿತಿಯೊಬ್ಬ

ಪ್ರಚಾರದಿಂದಲೆ ಬದುಕ

ಎನುವ ಸತ್ಯವು ಅವರಿಗೆ ಬೇಕಿಲ್ಲವೇನು

***

ಸಾಹಿತ್ಯ ಬೆಳವಣಿಗೆಯ 

ಹಿತ ದೃಷ್ಟಿಯಿಂದ

ಸಮಾನವಾದವಿರಲಿ ತಿಳಿಯೋಣವೆಲ್ಲವು

ವಾದಕ್ಕಾಗಿಯೇ ವಾದ

ವ್ಯಾಧಿಗಳ ತವರೂರು

ಬೇಡವೇ ಬೇಡವೋ ಶಾಂತ ತಿಳಿವು

***

ಅಸಹನೆ ಎಲ್ಲರಿಗೂ

ಗೊತ್ತಿರುವ ವಿಷಯ

ಯಾಕಾಗಿ ಎನ್ನುವುದು ಯಾರಿಗೂ ತಿಳಿದಿಲ್ಲ

ಜೊತೆಯಿರುವಾ ಮಂದಿ

ತಾಳ್ಮೆಯಿಂದಿದ್ದರೆ

ಕ್ಷಮೆಯೊಳಗು ಇಹುದಿಲ್ಲಿ ಸವಿ ಜೇನು ಬೆಲ್ಲ

***

ಹಿಂದೆಗಿಂತಲು ಜೋರಾಗಿ

ಹೋರಾಟ ನಡೆಯುತ್ತಿದೆ

ಭಾವನಾತ್ಮಕವೆಂಬ ನಾಟಕದ ಒಳಗೆ

ಆದರ್ಶ ಮಾತುಗಳು

ಶಬ್ಧ ಮಾಲಿನ್ಯವೇಯೆಲ್ಲ

ಬದುಕಲ್ಲಿ ಹೇಸಿಗೆಯ ತುಳಿದಂತ ನಡೆಗೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ