ಅಹಂ
ಇಷ್ಟೊಂದು
ಇರ
ಬಾರದಯ್ಯಾ !
ತಾನೂ
ಬಾಲವಾಡಿಯಿಂದಲೇ
ಕಲಿತು
ಬಂದವನೆಂಬುವುದು
ಇರಲಯ್ಯಾ !!
***
ಬಲಿರೇನಯ್ಯ
ನಾ
ಇರುವಂತಹ
ಸ್ಥಳ
ಅಂದವನಿಂದು
ಬಾಲ ಇಲ್ಲದೆ
ಮರದಲ್ಲಿಹನು !
ಅದೇ
ಜೊತೆಯಲ್ಲಿ
ಇರುವವ
ಪಾಪ
ಬಾಲವಾಡಿಯಲ್ಲಿಹನು !
***
ಈಗೀಗ
ಮನುಷ್ಯರು ಕಲಿತಂತೆ
ಬಲಿತಂತೇ
ಸಮಾಜದಲ್ಲಿ
ಕುಬ್ಜರಾಗುತ್ತಿದ್ದಾರೆ !
***
ಬದುಕಿಗಾಗಿ
ಕಲಿತಿರುವ
ಜನ
ಸಾವಿಗಾಗಿ
ಹೋರಾಡುತಿದ್ದಾರೆ !
***
ವಾತಾವರಣವೇ
ವಿಷಮಯ
ಆಗಿರುವಾಗ
ಜನರ
ಹೃದಯಕ್ಕೆ
ಅಘಾತವಾಗದೆ
ಇದ್ದೀತೆ !
ಇಂದಿನ ರಾಜಕೀಯ
ಅಂತೇ
ಅಧಿಕಾರಿಗಳು
ಬರೆಹಗಾರರು
ಕೆಲಸಗಾರರು
ಜನರ ಬದುಕು
ಇದುವೇ ಜೀವನ !
***
ಇಂದಿನ
ಅವ್ಯವಸ್ಥೆಯ
ಗಮನಿಸಿದರೆ
ಸತ್ತವರೇ
ಪುಣ್ಯವಂತರು!
***
ಸೌಮ್ಯ
ಸ್ವಭಾವದ
ಮನುಷ್ಯ
ಯಾವತ್ತೂ
ಪರೋಪಕಾರಿಯೇ !
ಜೊತೆಗೆ
ಯಾರೊಬ್ಬರಿಗೂ
ಉಪದ್ರವವನ್ನು
ಮಾಡುವುದಿಲ್ಲ !
-ಹಾ.ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!