ಉದಯಿಸಿದನು ಭಾಸ್ಕರನು
ಮೂಡಣದ ಬಾಂದಣದಿ
ಶಶಿರೇಖೆಯ ಜೊತೆಗೆ ಸರಸವಾಡುತ
ಭೂದೇವಿಯ ಮನ
ಉಲ್ಲಾಸದೊಳು ಮಿಂಚಿರಲು
ಸವಿಯೆನಿಪ ಒಲುಮೆಯೊಳು ತೇಲಾಡುತ
***
ಮನ ಮನದ ಬೆಸುಗೆಯೊಳು
ಹೊಸ ವರುಷ ಹರುಷದಲಿ
ಸುಖವಾಗಿ ಸವಿಯಾಗಿ ಬರುತಿಹುದು ಇಂದು
ಹೊಸತನದ ಸಂಭ್ರಮದಿ
ಹಳೆಯದೆಲ್ಲವ ಮರೆತು
ಪ್ರಿಯ ಮಧುರ ನೆನಪಲ್ಲಿ ಸಾಗೋಣವೆಂದು
***
ಬಂಧುಗಳ ಕಟು ಮಾತೊಳು
ಬೆಳೆಯ ಬೇಕೂ ಮನುಜ
ದೇಹ ಮನಸ್ಸುಗಳೆರಡು ಶುಚಿಯಾಗುತ
ಗೆಳೆತನವ ದೂರದಿರು
ಸಿರಿತನಕೆ ಸೇರದಿರು
ಬಡತನದ ಭಾಗ್ಯದೊಳು ಮೆರೆದಾಡುತ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!