ಹೊಲಸೇ ನೀ ಹೇಳುತಾ
ಹೇಸಿಗೆಯೊಳಗೆ ಒದ್ದಾಡುತಿರುವೆ || ಪ ||
ಯಾವುದು ಸತ್ಯ ಯಾವುದು ಮಿಥ್ಯ
ಅರಿಯದೆ ನೀ ಹೋದೆ
ಕಣ್ಣಿನ ನೇರಕೆ ಎಲ್ಲವ ಹೇಳುತಾ
ಆತ್ಮವ ನೀ ಮರೆತೆ || ೧||
ಜೀವನ ಪ್ರೀತಿಗೆ ದ್ವೇಷವ ಕೊಡುತ
ಕ್ರೋಧವ ನೀ ಸೆಳೆದೆ
ಮಾತಿನ ಸವಿಯನು ಕೊಡದೇ ಸಾಗುತ
ಮನವನು ನೀ ಮರೆತೆ || ೨ ||
ತನುವಲಿ ಸೇರಿಹ ಉರಿಯನು ಹಂಚುತ
ಸ್ವಾರ್ಥಿಯು ನೀ ಆದೆ
ಬಾಳಿನ ಸೋಲಿಗೆ ಬೆನ್ನುಡಿ ಬರೆಯುತ
ಜ್ಞಾನವ ನೀ ಮರೆತೆ || ೩ ||
ಬಾರದ ಲೋಕವು ಇರುವುದ ನೋಡದೆ
ಕಾಡುತ ನೀ ಬಂದೆ
ಜೀವನ ಯಾತ್ರೆಯು ಮೆಲ್ಲನೆ ಮುಗಿಯುತ
ಮಸಣವ ನೀ ಮರೆತೆ || ೪ ||
ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!