ಜೋನುಡಿ
ಮುರಕಲು ಗುಡಿಸಿಲ ಮಂದದ ಬೆಳಕಲಿ ಬೆಂದಿಹ ಜೀವದ ಭಂಗದ ಬದುಕಿನ ಹರುಕಲು ಸೀರೆಯ ಸೇರಿಸಿ ಕಟ್ಟಿದ ಜೋಲಿಯ ಜೂಕಲಿ ಅಳುತಿಹ ಕಂದನ ಎದೆಯನು ಮೀಟುವ ತಾಯಿಯ ಕರುಳಿನ ತುಡಿತದಿ ತೂಗುವ ತಾನದ ಜೋಗುಳ ನಾಭಿಯ ನಾಳದ ಬಂಧದ ಬದುಕಿನ ಕನಸನು ಕೊನರಿಸಿ ಮನಸನು ಅರಳಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
jayaprakash M.G
ಮುರಕಲು ಗುಡಿಸಿಲ ಮಂದದ ಬೆಳಕಲಿ ಬೆಂದಿಹ ಜೀವದ ಭಂಗದ ಬದುಕಿನ ಹರುಕಲು ಸೀರೆಯ ಸೇರಿಸಿ ಕಟ್ಟಿದ ಜೋಲಿಯ ಜೂಕಲಿ ಅಳುತಿಹ ಕಂದನ ಎದೆಯನು ಮೀಟುವ ತಾಯಿಯ ಕರುಳಿನ ತುಡಿತದಿ ತೂಗುವ ತಾನದ ಜೋಗುಳ ನಾಭಿಯ ನಾಳದ ಬಂಧದ ಬದುಕಿನ ಕನಸನು ಕೊನರಿಸಿ ಮನಸನು ಅರಳಿ...
ಅಡಿಗಡಿಗಡರುವಕಡುಬಿಸಿಲಸುಡುತಾಪವನಡಗಿಸುತಲುಡುಗಿಸುವಧುಡುಧುಡುಧುಮ್ಮಿಡುವಭಂಡನರಸಿಯಭಂಗದಲಿಬೇಡುತಲಿನಿಡುಜಡೆಯಫಡಫಡನೊಡೆಯುತಲಿಗಂಗೆಯೊಡಲಲಿಮಿಂದುನಲಿಯುತಲಿಹನೀನಾಗಾನಂದಂ ಚಿತ್ರ ಕೃಪೆ ಪದ್ಯಪಾನ
ಲಂಕಾನಗರಂ ನಯನ ಮನೋಹರಂ ವಿಹಂಗಮ ದೃಶ್ಯದಿ ತಲ್ಲೀನ ಹನುಮ ಅಭೇದ್ಯ ಲಂಕೆಯ ಅಜೇಯ ರಾವಣ ಸಿರಿಯಲಿ ತೇಲುವ ಸುವರ್ಣ ನಗರಿ ಉತ್ಕಟ ರಕ್ಷಿತ ನವ ದಿಕ್ತಟ ಲಂಕೆ ಅಷ್ಟ ಪ್ರಹರದ ಪಹರೆಯ ಪ್ರಹರಿ ಲಂಕಿಣಿ ಜಾಣ್ಮೆಯ ಲಂಕೆಯ ರಕ್ಷಣೆ ನವನವ ರಕ್ಷಣ ತಂತ್ರ ಪರೀಕ್ಷ...
ಹಗಲುಗನಸಿನ ಹಾಲು ಗಲ್ಲದ ಹುಡುಗು ಚೇಷ್ಟೆಯ ದುಡುಕು ಬುದ್ಧಿಯ ಕುಣಿವ ಚಿಣ್ಣರ ದಣಿವ ಮರೆಸುವ ಬಣ್ಣದ ಲೋಕದ ಇಂದ್ರಜಾಲದ ಮಂತ್ರ ಶಕ್ತಿಯ ತಂತ್ರ ಯುಕ್ತಿಯ ಅಭೇದ್ಯ ಕೋಟೆಯ ಅಜೇಯ ರಾಜನ ಕೀಲು ಕುದುರೆಯ ಮಂತ್ರ ಕೋಲಿನ ಅಡುಗೋಲಜ್ಜಿಯ ಜನಪದ ಕಥೆಗಳ ಆಗರ ಕ...
ನೂರೆಂಟು ಆಸೆಗಳ ಬೀಜವ ಬಿತ್ತಿದೆನು ಸಾವಿರದೆಂಟು ಕನಸುಗಳ ಬೆಳೆಯಲು ಮೊಳಕೆಯೊಡೆಯುವ ಮೊದಲೆಮೇಲೆದ್ದವು ಚಿಂತೆಯ ಕಂತೆಕಂತೆ ಕಳೆಗಳು ಬೊಂತೆ ಬೊಂತೆಯಾಗಿ || ಧುತ್ತೆಂದು ಬೆಳೆದು ತಿದಿಯನೊತ್ತುವ ತುದಿಮೊದಲಿಲ್ಲದ ತೀರದ ತೀಟೆಗಳು ಬಯಕೆಯ ಪುಷ್ಪಗಳು ಕನ...
ವಾಲ್ಮೀಕಿ ಋಷಿಯ ಜಯಂತಿ ನೆನೆಪಲಿ ಹರಿದಾಸ ಅದ್ಭುತ ಕೀರ್ತನ ಸುಧೆಯಲಿ ಹುದುಗಿದ ಹುಡುಗರು ಬಾಯನು ತೆರೆದು ಆಲಿಸೊ ಪರಿಯನು ನೋಡಿದ ದಾಸರು ಬಾಲಸೂರ್ಯನೆ ಹಣ್ಣೆಂದು ತಿಳಿಯುವ ಬಾಲಕ ಹನುಮನ ಸಾಹಸ ಕಥೆಯನು ಉಕ್ಕಿದ ಉತ್ಸಾಹದಿ ಹೇಳಿದ ಪರಿಯು ಹೊಕ್ಕಿತು ಪ...
ಬಲಿಯನು ಬಲದಲಿ ಸಹಿಸದ ಇಂದ್ರನು | ಮೊರೆಯಲು ಮುರಹರಿ ಯೋಜಿತ ಯಾಚನೆ | ವಾಮನ ತ್ರಿಪದದ ಒಗಟಿನ ಭಿಕ್ಷೆಗೆ | ದಾನವ ಗುರುವಿನ ದಾನದ ಅಡ್ಡಿಗೆ | ಶುಕ್ರನ ಅಕ್ಷಿಗೆ ಧರ್ಭೆಯ ಮೋಕ್ಷ || 1 || ಧೀರನ ಧಾರೆಯ ದಾನ ಪ್ರದಾನ | ವಾಮನ ಪದದಲಿ ಬಾನುವು ಭುವನ |...
ಸೃಷ್ಟಿಯ ಆದಿಯ ಪೃಥ್ವಿಯ ಸ್ಥಿತಿಯಲಿ | ಜೀವಿಯ ಉಗಮಕೆ ಜಲಧಿಯೆ ಮೂಲ | ಜೀವಿಯ ವಿಕಾಸದ ವಿಧಿ ವಿಧಾನದಿ | ಧರಣಿಯ ಗರ್ಭದ ಅಗ್ನಿಯ ಸಿಡಿತದಿ | ಜಲಧಿಯ ಮೇಲೆಯೆ ಉರಿಯುವ ನೆಲವು ಆರಿದ ನೆಲದಲಿ ಮನುವಿನ ಆಳ್ವಿಕೆ || 1 || ಜಲಪ್ರಳಯದಿ ಭೂಮಿಯ ಮುಳುಗಡೆ...
ಸರಿಗಮ ಸಂಗಮ ತಾಳದ ಥಳುಕಿಗೆ ಇಂದ್ರನ ಸಭೆಯಲಿ ದಣಿವೆಯೆ ಇಲ್ಲದ ಬಳುಕುತ ಕುಣಿಯುವ ಯಾಂತ್ರಿಕ ಬಂಧನ ಅರಸಿಕ ಅಮರರ ನೀರಸ ಸರಸದಿ ರೋಸಿದ ಮೇನಕೆ ಮೌನದಿ ನವೆದಿರೆ || 1 || ನಾರದ ನರರನು ಸಭೆಯಲಿ ಹೊಗಳುತ ವಿಶ್ವಾಮಿತ್ರನ ತಪಸಿನ ತಾಪವು ಭೂಮಿಯ ಮೀರುತ ಇ...
ಹುರಿಮೀಸೆ ಸೆಟೆದುದಟದಲಿ ಹುರಿಯಾದುದತಿ ರುಧಿರ ಸಿಂಚನಕೆ | ಧಗಧಗಿಸುವ ಕಣ್ಣಾಲಿಗಳ್ ಕೆಂಪಡರಿ ಕ್ರೋಧಾಧಿಕ್ಯದಿಂದುರಿದುರಿದುದತಿ | ಕೋಪಾಟೋಪದೊಳ್ ಕೆಂಜಡೆ ಹೊಯ್ದಾಡಿದುದುಘಟಸರ್ಪದೋಲ್ | ಫೂತ್ಕರಿಸಿದನು ರಣಕಲಿ ಗಂಡುಗಲಿ ಕುಮಾರರಾಮ ತರಿಯುತರಿತಲೆಗಳ...
ಮಹಿಯಲಿ ಹಿಮಮಣಿ ಕಡಲಲಿ ಜಲಮಣಿ | ಬಿಸಿಲಿಗೆ ಏರುವ ನೀರಿನ ಪಸೆಮಣಿ | ಬಾನಲಿ ತೇಲುವ ಮೇಘದ ಮಳೆಹನಿ | ಹನಿಗಳ ಹೊನಲಲಿ ಸಲಿಲದ ಹರುಷ | ವರ್ಷದ ಧಾರೆಗೆ ಧರೆಯಲಿ ನದಿಗಳು | ಬಿಸಿಲಿಗೆ ಕರಗುವ ಮಂಜಿನ ಜಿನುಗಲಿ | ಧರಣಿಗೆ ಹಸಿರಿನ ಹೊದಿಕೆಯ ಹೊದಿಸಿ |...
ವಾತ ನಿರ್ವಾತದ ಸೂಕ್ಷ್ಮದ ಸುಳಿವು | ನಿರ್ವಾತದಿ ಅನಿಲನ ಸೆಳೆತದ ಸೆಳವು | ವಾಯುಪ್ರಕೋಪದ ಭೀತಿಯ ಭೂತದ | ಸುಂಟರ ಗಾಳಿಯ ಹೊಡೆತವ ತಡೆಯುವ | ಅನಲನ ಅನಿಲನ ಸ್ನೇಹದ ತಿಳಿವಿನ | ಹವನದ ಧೂಮ್ರದ ಕಣಗಳ ಪ್ರಸರಣ | ಪವನನ ಭ್ರಮಣದ ಬಲದಲಿ ಗ್ರಹಣ | ಧರಣಿಯ...