ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿವಾಸಿ
ಅ

ಅನಿವಾಸಿ

anivaasi

೧೯೨ ಲೇಖನಗಳು ೩,೦೧,೪೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೈದಾಸ

ಏಪ್ರಿಲ್ ೦೬ ಬ್ಲಾಗ್ ೧,೦೪೭ ವೀಕ್ಷಣೆ

ಕಬ್ಬಿಣ, ಚಿನ್ನ, ಪೆಟ್ರೋಲು ಗಣಿಯಾಳದಲ್ಲಿ ಅದಿರು ಆಸೆಯ ಹೊಳೆ ಕೈಯಲ್ಲಿ ಮಣ್ಣು ತಾಕಿರದ ಗುದ್ದಲಿ ದೂರದಲ್ಲಿ ಗನ್ನು ಹಿಡಿದ ಯೋಧನ ಹೆಜ್ಜೆ ಸದ್ದು

ನೀಲು

ಮಾರ್ಚ್ ೦೭ ಬ್ಲಾಗ್ ೧,೨೮೨ ವೀಕ್ಷಣೆ

ಮಾತಿಗೆ ಸಿಕ್ಕ ಒಂದು ಮಧ್ಯಾಹ್ನ “ಗುಂಡಿಲ್ಲದೆ ಎಕ್ಸೈಟ್‌ಮೆಂಟ್ ಸಿಗೋದಾದರೆ ಕುಡೀಬೇಡಿ” ಎಂದು ಹೇಳಿಕೊಂಡು ತನಗೊಬ್ಬಳಿಗೇ ವಿಸ್ಕಿ ಸುರಿದುಕೊಳ್ಳುತ್ತಾ ತುಂಟ ನಗೆಯಲ್ಲಿ ಮಗ್ನಳಾದಳು (ಲಂಕೇಶ್ ಹುಟ್ಟು ಹಬ್ಬ-ನೆನಪು ಮತ್ತು ಮಹಿಳಾ ದಿನಾಚರಣೆ!) ~

ಬೆಳವಣಿಗೆ

ಫೆಬ್ರ ೨೦ ಬ್ಲಾಗ್ ೧,೩೪೬ ವೀಕ್ಷಣೆ

ಹದಿನಾರರ ಈಚೆ ಖುಷಿಯೂ ಅಳಲೂ ತಟ್ಟತಟ್ಟನೆ ದಟ್ಟ. ಹದಿನಾರರ ಆಚೆ ಖುಷಿ ಮತ್ತು ಅಳಲು ಯಾವುದರೊಳಗೆ ಯಾವುದು ಹುಡುಕಿಕೊಳ್ಳುವುದೇ ದೊಡ್ಡ ಪಾಠ.

ಮುರಿಯುವ ಮಳೆ ಹಾಗು ಮೀರುವ ಮನಸ್ಸು

ಫೆಬ್ರ ೧೩ ಬ್ಲಾಗ್ ೧,೮೮೭ ವೀಕ್ಷಣೆ

ಎರಡು ವಾರದಿಂದ ಎಡೆಬಿಡದ ಮಳೆ. ಆಸ್ಟ್ರೇಲಿಯಾದ ಮೂಡಲ ಕಡಲತಡಿಯುದ್ದಕ್ಕೂ ಹೊಡೆದಿದ್ದೇ ಹೊಡೆದಿದ್ದು. ಬರಗಾಲ ಕೊನೆಗೊಳಿಸಲು ಹಟತೊಟ್ಟಂತೆ. ಇದು ಯಾವ ನಕ್ಷತ್ರದ ಮಳೆಯೋ ಎಂದುಕೊಳ್ಳುತ್ತೇನೆ. ಹೊಳೆ, ನದಿ, ಕೆರೆ, ಕೊಳ್ಳ ಎಲ್ಲ ತುಂಬಿ ಉಕ್ಕಿ ಹರಿದ ಸ...

ಸತ್ಯಕ್ಕೆ ಲಿಂಕ್

ಫೆಬ್ರ ೧೦ ಬ್ಲಾಗ್ ೧,೪೩೨ ವೀಕ್ಷಣೆ

ಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನೋಡು. ಸುಳ್ಳಿನ್ನ ತಲೇ ಮ...

ಕಾದಾಟ

ಫೆಬ್ರ ೦೭ ಬ್ಲಾಗ್ ೧,೨೬೯ ವೀಕ್ಷಣೆ

ಎಷ್ಟು ಜಗ್ಗಾಡಿದರೂ ಕಾವ್ಯವಾಗದ ಪದದ ಸಾಲಿಗೆ ಗಿಲೀಟು ಮಾಡುವುದು ಬರೇ ಪೋಲು. ಹೊರಟಲ್ಲಿಗೇ ಬಂದು ನಿಂತು "ನೀನೂ ಒಬ್ಬ ಕವಿಯೆ?" ಎನ್ನುತ್ತಾ ಭುಜ ಕುಣಿಸಿ ನಗುತ್ತದೆ.

ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು

ಫೆಬ್ರ ೦೪ ಬ್ಲಾಗ್ ೨,೦೭೪ ವೀಕ್ಷಣೆ

ಪ್ರಚಾರಕ್ಕೆ ಹಲವು ದಾರಿಗಳನ್ನು ಬಹುಪಾಲು ಎಲ್ಲ ಧರ್ಮಗಳೂ ಕಂಡುಕೊಂಡಿದೆ. ಇದು ಹರಡುತ್ತಿರುವ ಧರ್ಮಕ್ಕೆ ಮಾತ್ರವಲ್ಲ ಬೇರು ಬಿಟ್ಟ ಧರ್ಮಗಳಿಗೂ ಅನ್ವಯಿಸುವ ಮಾತು. ಏಕೆಂದರೆ ಧರ್ಮ ಪ್ರಚಾರ ಅನ್ನುವುದು ನಿರಂತರ ನಡೆಯಬೇಕಾದ ಕೆಲಸ. ಬಾಲ್ಯ, ಕೌಮಾರ್ಯ...

ಬೆನ್ನ ಮೇಲಿನ ಕೂದಲು

ಜನ ೨೭ ಬ್ಲಾಗ್ ೯೮೮ ವೀಕ್ಷಣೆ

ನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ? ಕಾಣಬೇಕೆಂದರೆ ಎರಡೆರಡು ಕನ್ನಡಿ, ಹಿಂದಕ್ಕೊಂದು ಮುಂದಕ್ಕೊಂದು ಇಲ್ಲದಿದ್ದರೆ ಸಲ್ಲ, ಅಷ್ಟೇ ಅಲ್ಲ, ಎಡಕ್ಕೆ ಕ...

ನೀರು ತಬ್ಬುವ ಬಂಡೆ

ಜನ ೨೨ ಬ್ಲಾಗ್ ೧,೯೨೫ ವೀಕ್ಷಣೆ

ಈ ಆಕ್ರಮಣದ ಯುಗದಲ್ಲಿ ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ ಕನಸು ಗುತ್ತಿಗೆ ಹಿಡಿದ ಮಾರ್ಕೆಟ್ಟಿನ ಮೂಲಭೂತವಾದಿ ಕಲೆಯ ಗುತ್ತಿಗೆ ಹಿಡಿದ ಜನಪ್ರಿಯತೆಯ ಮೂಲಭೂತವಾದಿ ಇದ್ದಿದ್ದಲ್ಲೇ ಅವತರ...

ಸುಲಭ

ಜನ ೨೧ ಬ್ಲಾಗ್ ೮೮೨ ವೀಕ್ಷಣೆ

ಅರೆಬಿರಿದ ನನ್ನ ತುಟಿಗಳ ಮಾದಕತೆ ನಲ್ಲನಿಗೆ ಮತ್ತೇರಿಸುವುದು ಅದರ ಹಿಂದಿನ ನನ್ನ ಅನುಮಾನದ ಇರವು ಹಾಗು ಅಗತ್ಯ ಕಾಣಿಸದೆ ಅವನಿಗೆಲ್ಲ ನಿಚ್ಚಳ ಅನಿಸದಾಗ.

ದೂರ ಕಾಲ

ಜನ ೧೫ ಬ್ಲಾಗ್ ೧,೧೬೯ ವೀಕ್ಷಣೆ

ಕೆಲಸದಲ್ಲಿ ಮೊನ್ನೆ ಹೊಸ ಸಾಫ್ಟ್‌ವೇರ್‍ ಬಗ್ಗೆ ಒಂದಿಬ್ಬರು ಗೊಣಗಿಕೊಳ್ಳುತ್ತಿದ್ದರು. ನಾನು ತಲೆ ತಗ್ಗಿಸಿ ನನ್ನ ಪಾಡಿಗೆ ಕಾಫಿ ಮಾಡಿಕೊಳ್ತಾ ಇದ್ದೆ. ಗೊಣಗಾಟದ ನಡುವಲ್ಲಿ ಒಬ್ಬಳು ಹೇಳಿದ್ದು "ಸ್ಕ್ರೀನಿನ ಒಂದು ಮೂಲೆಯಲ್ಲಿರುವ ಲಿಸ್ಟ್‌ನಿಂದ ಆಯ...

ರುಚಿ

ಜನ ೦೯ ಬ್ಲಾಗ್ ೧,೦೫೧ ವೀಕ್ಷಣೆ

ತೊಡೆ ಸೊಂಟ ಮತ್ತು ಮೊಲೆಯನ್ನು ಗಂಡಸರು ಚಪ್ಪರಿಸುವಂತಾದಾಗ ಚಂದದ ಕುಣಿತವೂ ತನ್ನ ಪ್ರಶ್ನೆಯ ಮೊನಚು ಕಳಕೊಂಡು ಅರೆಭಾವಕ್ಕೆ ಉತ್ತರದಂತೆ.