ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

← ಲೇಖಕರು
ಎನ್. ನರಸಿಂಹಯ್ಯ
ಲೇಖಕರು

ಎನ್. ನರಸಿಂಹಯ್ಯ

En. Narasinhayya

೧೯೨೫ – ೨೦೧೧

೪೪೯ ವೀಕ್ಷಣೆಗಳು

ಲೇಖಕರ ಪರಿಚಯ

ಎನ್. ನರಸಿಂಹಯ್ಯ ಅವರು ಕನ್ನಡದ ಅತ್ಯಂತ ಜನಪ್ರಿಯ ಪತ್ತೇದಾರಿ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದಾರೆ. ಇವರು ಜನಿಸಿದ್ದು 18 ಸೆಪ್ಟೆಂಬರ್ 1925ರಂದು ಬೆಂಗಳೂರಿನಲ್ಲಿ. ಇವರ ತಂದೆ ಸಿ ನಂಜಪ್ಪ ಮತ್ತು ತಾಯಿ ಯಲ್ಲಮ್ಮ. ಇವರ ತಂದೆ ಜಾನಪದ ಕವಿಯಾಗಿದ್ದರು. ನಾಲ್ಕನೇ…

ಎನ್. ನರಸಿಂಹಯ್ಯ ಅವರು ಕನ್ನಡದ ಅತ್ಯಂತ ಜನಪ್ರಿಯ ಪತ್ತೇದಾರಿ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದಾರೆ. ಇವರು ಜನಿಸಿದ್ದು 18 ಸೆಪ್ಟೆಂಬರ್ 1925ರಂದು ಬೆಂಗಳೂರಿನಲ್ಲಿ. ಇವರ ತಂದೆ ಸಿ ನಂಜಪ್ಪ ಮತ್ತು ತಾಯಿ ಯಲ್ಲಮ್ಮ. ಇವರ ತಂದೆ ಜಾನಪದ ಕವಿಯಾಗಿದ್ದರು. ನಾಲ್ಕನೇ ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ಇವರ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿತು. ಜೀವನ ನಿರ್ವಹಣೆಗಾಗಿ ಕಾಫಿ ತೋಟದ ಕಾರ್ಮಿಕರಾಗಿ, ಬಸ್ ಕ್ಲೀನರ್ ಹಾಗೂ ಕಂಡಕ್ಟರ್ ಆಗಿ, ಮುದ್ರಣಾಲಯಗಳಲ್ಲಿ ಕೆಲಸ ಮಾಡಿದರು. ಬಾಲ್ಯದಿಂದಲೂ ಓದಿನ ಹವ್ಯಾಸ ಹೊಂದಿದ್ದ ಇವರು ಕಂಡಕ್ಟರ್ ಹಾಗೂ ಪ್ರಿಂಟಿಂಗ್ ಪ್ರೆಸ್‌ನಲ್ಲಿದ್ದಾಗ ಈ ಹವ್ಯಾಸವನ್ನು ಬೆಳೆಸಿಕೊಂಡು, ಬಾಡಿಗೆ ವಾಚನಾಲಯವನ್ನೂ ಪ್ರಾರಂಭಿಸಿದ್ದರು. 1952ರಲ್ಲಿ ಇವರ ಮೊದಲ ಪತ್ತೇದಾರಿ ಕಾದಂಬರಿ 'ಪುರುಷೋತ್ತಮನ ಸಾಹಸ' ಪ್ರಕಟವಾಯಿತು. ನಂತರದ ದಿನಗಳಲ್ಲಿ 'ಭಯಂಕರ ಬೈರಾಗಿ', 'ವಿಚಿತ್ರವಿಲಾಸಿನಿ', 'ಜಾದೂಗಾರ ಜಗದೀಶ', 'ಮಾಟಗಾತಿಯ ಮಗಳು', 'ಅವಳಿ ಜವಳಿ', 'ನೀಲಿಬಣ್ಣದ ಕೋಟು' ಇತ್ಯಾದಿ ಪತ್ತೇದಾರಿ ಕಾದಂಬರಿಗಳನ್ನು ಬರೆದರು. ಇವರು ಬರೆದ 'ಮುತ್ತುಗದ ಹೂ', 'ಹಾದಿ ತಪ್ಪಿದ ಹೆಣ್ಣು', 'ಜೀವನ ಸಂಗಾತಿ' ಮುಂತಾದವು ಇವರ ಪ್ರಮುಖ ಸಾಮಾಜಿಕ ಕಾದಂಬರಿಗಳು. ಖ್ಯಾತ ಪತ್ತೇದಾರಿ ಪಾತ್ರವಾದ ಶೆರ್ಲಾಕ್ ಹೋಮ್ಸ್ ನಂತೆ ಪತ್ತೇದಾರ ಪುರುಷೋತ್ತಮ, ಮಧುಸೂದನ, ಅರಿಂಜಯ ಹಾಗೂ ಗಾಳಿರಾಯ ಎಂಬ ಪ್ರಸಿದ್ಧ ಪತ್ತೇದಾರಿ ಪಾತ್ರಗಳನ್ನು ಕನ್ನಡದಲ್ಲಿ ಸೃಷ್ಟಿಸಿ ಸಾಹಿತ್ಯ ರಚಿಸಿದರು. 500ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದ ಹೆಗ್ಗಳಿಕೆ ಇವರದ್ದಾಗಿದ್ದು, 1950-70ರ ದಶಕಗಳಲ್ಲಿ ಕನ್ನಡದ ಯುವಜನತೆಯಲ್ಲಿ ಓದಿನ ಹವ್ಯಾಸವನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಇವರಿಗೆ 1992ರ ದಾವಣಗೆರೆಯಲ್ಲಿ ನಡೆದ 61ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, 1997ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2006ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳು ದೊರೆತಿವೆ. ಎನ್. ನರಸಿಂಹಯ್ಯನವರು 2011ರ ಡಿಸೆಂಬರ್ 25ರಂದು ನಿಧನರಾದರು.

ಇವರ ಪುಸ್ತಕಗಳು (೯)

ಲಕೋಟೆಯ ರಹಸ್ಯ

ಎನ್. ನರಸಿಂಹಯ್ಯ

ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರ್-೫೬೦೦೦೯

೧೫೯

ಹುಣಸೆ ಮರದ ದೆವ್ವ

ಎನ್. ನರಸಿಂಹಯ್ಯ

ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು

೧೫೮

ಸ್ಮಶಾನ ಭೈರಾಗಿ

ಎನ್. ನರಸಿಂಹಯ್ಯ

ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು

೧೫೭

ಕುಟಿಲೆಯ ಕುತಂತ್ರ

ಎನ್. ನರಸಿಂಹಯ್ಯ

ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು

೧೪೯

ಹುಚ್ಚಾಟದ ಹುಲಿ

ಎನ್. ನರಸಿಂಹಯ್ಯ

ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು

೧೪೬

ಮೂರು ಕೊಲೆಗಳ ಮರ್ಮ

ಎನ್. ನರಸಿಂಹಯ್ಯ

ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು

೧೩೨

ನರರಾಕ್ಷಸ

ಎನ್. ನರಸಿಂಹಯ್ಯ

ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು

೧೨೭
ಸಂಪದ ವಿಶೇಷ

ಈ ಲೇಖನಗಳನ್ನೂ ಓದಿ

ಎಲ್ಲವೂ →