ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

← ಲೇಖಕರು
ಗಿರಿಮನೆ ಶ್ಯಾಮರಾವ್
ಲೇಖಕರು

ಗಿರಿಮನೆ ಶ್ಯಾಮರಾವ್

Girimane Shyamarav

೪೪೬ ವೀಕ್ಷಣೆಗಳು

ಲೇಖಕರ ಪರಿಚಯ

ಗಿರಿಮನೆ ಶ್ಯಾಮರಾವ್ ಅವರು ಆಧುನಿಕ ಕನ್ನಡ ಸಾಹಿತ್ಯ ಲೋಕದ ಜನಪ್ರಿಯ ಲೇಖಕ ಹಾಗೂ ಅಂಕಣಕಾರರಾಗಿದ್ದಾರೆ. ಇವರ ಹುಟ್ಟೂರು ಹಾಸನ ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರದ ಗಾಣದಹೊಳೆ. ಕೃಷಿಕರಾಗಿ ಸುಮಾರು 35 ವರ್ಷಗಳ ಕಾಲ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಪ್ರಕೃತಿಯ…

ಗಿರಿಮನೆ ಶ್ಯಾಮರಾವ್ ಅವರು ಆಧುನಿಕ ಕನ್ನಡ ಸಾಹಿತ್ಯ ಲೋಕದ ಜನಪ್ರಿಯ ಲೇಖಕ ಹಾಗೂ ಅಂಕಣಕಾರರಾಗಿದ್ದಾರೆ. ಇವರ ಹುಟ್ಟೂರು ಹಾಸನ ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರದ ಗಾಣದಹೊಳೆ. ಕೃಷಿಕರಾಗಿ ಸುಮಾರು 35 ವರ್ಷಗಳ ಕಾಲ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಪ್ರಕೃತಿಯ ಒಡನಾಟದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. ಜೊತೆಗೆ ಔಷಧಿ ಅಂಗಡಿ (ಮೆಡಿಕಲ್ ಶಾಪ್) ಹಾಗೂ ಮಕ್ಕಳೊಂದಿಗಿನ ಒಡನಾಟದ ಅನುಭವಗಳು ಇವರ ಸಾಹಿತ್ಯಕ್ಕೆ ಮುಖ್ಯ ಪ್ರೇರಣೆಯಾಗಿವೆ. ಇವರ ಪ್ರಮುಖ ಕೃತಿಗಳಲ್ಲಿ ವಿಶೇಷವಾಗಿ ಮಲೆನಾಡಿನ ರೋಚಕ ಕಥೆಗಳು, ಪಶ್ಚಿಮ ಘಟ್ಟದ ಕಾಡಿನ ಅನುಭವಗಳು, ವ್ಯಕ್ತಿತ್ವ ವಿಕಸನ, ಮಕ್ಕಳ ಸಾಹಿತ್ಯ ಹಾಗೂ ದಾಂಪತ್ಯ ವಿಚಾರಗಳ ಕುರಿತು ಸರಳ ಮತ್ತು ಸ್ವಾರಸ್ಯಕರ ಶೈಲಿಯಲ್ಲಿ ಬರೆಯುವುದು ಇವರ ವೈಶಿಷ್ಟ್ಯ. ಇವರ ಹಲವಾರು ಅಂಕಣಗಳು ಹಾಗೂ ಕಥೆಗಳು ಕೃತಿರೂಪ ಪಡೆದುಕೊಂಡಿದ್ದು, ಆಡಿಯೋ ಪುಸ್ತಕಗಳಾಗಿಯೂ ಲಭ್ಯವಿವೆ. ಮಲೆನಾಡಿನ ರೋಚಕ ಸರಣಿ ಕೃತಿಗಳು: ಅರಮನೆ ಗುಡ್ಡದ ಕರಾಳ ರಾತ್ರಿಗಳು, ಜೇನುಕಲ್ಲಿನ ರಹಸ್ಯ ಕಣಿವೆ, ಒಂದು ಆನೆಯ ಸುತ್ತ, ಮುಂಗಾರಿನ ಕರೆ, ಗಿರಿಕಂದರ ಎಸ್ಟೇಟ್, ಬಲ್ಲಾಳ ದುರ್ಗದ ಭೀಕರ ಕಮರಿ ಇತ್ಯಾದಿ. ಇತರ ಪ್ರಮುಖ ಬರಹಗಳು: ಕಾಡು ತಿಳಿಸಿದ ಸತ್ಯಗಳು, ಮಕ್ಕಳ ಮನೋಲೋಕ ಸರಣಿ, ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು, ಮಧುರವಾಗಲಿ ದಾಂಪತ್ಯ, ಮಾತು ಹೇಗಿದ್ದರೆ ಚೆನ್ನ. ಪತ್ರಿಕಾ ಅಂಕಣಕಾರರಾಗಿ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಇವರು, ತಮ್ಮ ಜೀವಂತಿಕೆಯ ಬರಹಗಳಿಂದ ಕನ್ನಡ ಓದುಗರ ಮನ ಗೆದ್ದಿದ್ದಾರೆ.

ಇವರ ಪುಸ್ತಕಗಳು (೩೧)

ತಲ್ಲಣ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೦೬
10% ರಿಯಾಯಿತಿ ₹220.00
ಈಗ ಖರೀದಿಸಿ
ಸಂಪದ ವಿಶೇಷ

ಈ ಲೇಖನಗಳನ್ನೂ ಓದಿ

ಎಲ್ಲವೂ →