ಮುಖಪುಟ / ಪುಸ್ತಕ ಸಂಪದ / ಆಹಾ! ಇಸ್ರೇಲಿ ಕೃಷಿ
ಆಹಾ! ಇಸ್ರೇಲಿ ಕೃಷಿ

ಆಹಾ! ಇಸ್ರೇಲಿ ಕೃಷಿ

ಲೇಖಕರು: ಆನಂದತೀರ್ಥ ಪ್ಯಾಟಿ

ಪ್ರಕಾಶಕರು: Bhoomi Pustaka

₹250.00 ಲಭ್ಯವಿದೆ

ಪುಸ್ತಕದ ಬಗ್ಗೆ

ಇಸ್ರೇಲ್‌ನಲ್ಲಿ ಕೃಷಿ ಅಚ್ಚರಿಗಳಿಗೆ ಕೊನೆ ಮೊದಲಿಲ್ಲ. ಕರ್ನಾಟಕದ ಶೇಕಡಾ 10ರಷ್ಟು ವಿಸ್ತೀರ್ಣದ, ಶೇಕಡಾ 10ಕ್ಕಿಂತ ಕಡಿಮೆ ಮಳೆ ಪಡೆಯುವ ಈ ದೇಶ ಇಡೀ ಜಗತ್ತಿಗೆ ಹೈಟೆಕ್ ಕೃಷಿ ಪಾಠಗಳನ್ನು ಹೇಳುತ್ತಿದೆ. ವರ್ಷಕ್ಕೆ ಹೆಚ್ಚೆಂದರೆ 80 ಸೆಂಟಿಮೀಟರ್ ಮಳೆಯಾಗುವ ಇಲ್ಲಿ ಕಳೆದ ಮೂರು ದಶಕಗಳಲ್ಲಿ ಕೃಷಿ ಉತ್ಪಾದನೆ ಏಳು ಪಟ್ಟು ಹೆಚ್ಚಾಗಿದೆ. ಕೃಷಿಗೆ ಬಳಸುವ ಶೇ. 80ರಷ್ಟು ನೀರಿನ ಮೂಲ ಯಾವುದು ಗೊತ್ತೆ? ನಗರವಾಸಿಗಳು ಬಳಸಿ ಚೆಲ್ಲಿದ್ದು! ನೆಲದಾಳದ ಅಣೆಕಟ್ಟು ಅನ್ನಿ, ಹೂ-ಹಣ್ಣು, ತರಕಾರಿ, ಗಡ್ಡೆಗೆಣಸು ಉತ್ಪಾದನೆ ಅನ್ನಿ, ಸಾವಯವ ಕೃಷಿ ಅನ್ನಿ, ಹೈಡೋಪೊನಿಕ್ಸ್, ಏರೊಪೊನಿಕ್ಸ್ ಅನ್ನಿ, ಮೀನುಗಾರಿಕೆ ಅಥವಾ ಡೇರಿ ಅನ್ನಿ ನಾವಿಲ್ಲಿ ಕಲಿಯಬೇಕಾದ ಅನೇಕ ಸಂಗತಿಗಳಿವೆ. ಹಾಲಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನ ಇದರದ್ದು. ವರ್ಷ ಕಳೆದಂತೆಲ್ಲ ಇಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ, ನೀರಿನ ಬಳಕೆ ಕಡಿಮೆಯಾಗುತ್ತಿದೆ. ಆದರೆ ಕೃಷಿ ಉತ್ಪನ್ನ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ! ಕುಲಾಂತರಿ ಬೆಳೆಗಳ ಹೇಳ ಹೆಸರಿಲ್ಲ ಇಲ್ಲಿ. ಅಂಥ ಚಮತ್ಕಾರವನ್ನು ಕಣ್ಣಾರೆ ನೋಡಿ ಬಂದ ಆಪ್ತ ವರದಿ ಇಲ್ಲಿದೆ. ನಾಳಿನ ಗ್ರಾಮಭಾರತದ ಬಗ್ಗೆ ಆಸಕ್ತರಿರುವ ರೈತರಿಗೆ, ಕೃಷಿ ಅಧಿಕಾರಿಗಳಿಗೆ, ವಿದ್ಯಾರ್ಥಿಗಳಿಗೆ ಒಂದು ಸೂಚಿಪಟ ಇಲ್ಲಿದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹250.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?