ಮುಖಪುಟ / ಪುಸ್ತಕ ಸಂಪದ / ಕಂದಮೂಲ
ಕಂದಮೂಲ

ಕಂದಮೂಲ

ಲೇಖಕರು: ವಿವಿಧ ಲೇಖಕರು

₹150.00 ಲಭ್ಯವಿದೆ

ಪುಸ್ತಕದ ಬಗ್ಗೆ

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ (ರಿ.) 4 - 5 ಜನವರಿ 2025 ರಂದು ಎರಡು ದಿನಗಳ ಗೆಡ್ಡೆಗೆಣಸು ಮತ್ತು ಸೊಪ್ಪು ಮೇಳವನ್ನು ಆಯೋಜಿಸಿತ್ತು. ಪುರಾತನ ಕಾಲದಿಂದಲೂ ಭಾರತೀಯರ ಆಹಾರದಲ್ಲಿ ವಿವಿಧ ಗೆಡ್ಡೆಗೆಣಸು ಮತ್ತು ಸೊಪ್ಪುಗಳಿಗೆ ಪ್ರಮುಖ ಸ್ಥಾನವಿದೆ. ಕರಾವಳಿ ಕರ್ನಾಟಕದ ಜನರ ಆಹಾರದಲ್ಲಿಯೂ ಇವುಗಳಿಗೆ ವಿಶೇಷ ಸ್ಥಾನ ಸಿಗುವಂತಾಗಬೇಕೆಂಬ ಉದ್ದೇಶದಿಂದ ಈ ಮೇಳವನ್ನು ಸಂಘಟಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರಕಟಿಸಲಾದ ಮಾಹಿತಿ ಪುಸ್ತಕ “ಕಂದಮೂಲ”. 108 ಪುಟಗಳ ಈ ಪುಸ್ತಕದಲ್ಲಿದೆ ಗೆಡ್ಡೆಗೆಣಸು ಮತ್ತು ಸೊಪ್ಪುಗಳ ಕಿರು ಪರಿಚಯ - ವಿವಿಧ ಲೇಖಕರು ಬರೆದ 22 ಮಾಹಿತಿಭರಿತ ಬರಹಗಳಲ್ಲಿ. ಪ್ರತಿ ಪುಟದಲ್ಲಿಯೂ ವರ್ಣ ಚಿತ್ರಗಳು ಇರುವುದರಿಂದ ಈ ಮಾಹಿತಿಯನ್ನು ತಿಳಿಯಲು ಸಹಾಯ. “ಆಯುರ್ವೇದದಲ್ಲಿ ಗೆಡ್ಡೆಗೆಣಸು ಮತ್ತು ಸೊಪ್ಪುಗಳು” ಎಂಬ ಮೊದಲ ಲೇಖನದಲ್ಲಿ (8 ಪುಟ) ಪ್ರಾಚೀನ ಸಂಸ್ಕೃತ ಪಠ್ಯಗಳ ಆಧಾರದಿಂದ ಇವುಗಳ ಮಾಹಿತಿ ನೀಡಲಾಗಿದೆ: ಕಾಯಿಪಲ್ಲೆಗಳು, ಪಾಲಕ್ ಪಲ್ಲೆ, ಕಳಂಬಾಡಿ ಸೊಪ್ಪು, ಹರಿವೆ, ಮಾವು ಸೊಪ್ಪು, ಕರಿಬೇವು, ಎಳೆಬಿದಿರು, ಪತ್ತೂರ ಸೊಪ್ಪು, ಕುಸುಬೆ ಸೊಪ್ಪು, ಮೂಲಂಗಿ, ಈರುಳ್ಳಿ, ಸುರಣ ಗೆಡ್ಡೆ ಇತ್ಯಾದಿ. “ಬುಡಕಟ್ಟು ಜನಾಂಗದ ಆಹಾರ ಸಂಸ್ಕೃತಿ” ಎಂಬ 2ನೇ ಲೇಖನದಲ್ಲಿ 34 ಗೆಡ್ಡೆಗೆಣಸುಗಳ ಉಪಯುಕ್ತ ಮಾಹಿತಿಯಿದೆ. ಮುಂದಿನ ಮೂರು ಲೇಖನಗಳಲ್ಲಿ ಮರಕೆಸು, ಪರ್ಪಲ್ ಯಾಮ್ ಮತ್ತು ಕಾಡು ಅರಿಶಿನಗಳ ಆರೋಗ್ಯ ಹಾಗೂ ಔಷಧೀಯ ಗುಣಗಳನ್ನು ವಿವರಿಸಲಾಗಿದೆ. ಅನಂತರದ ಬರಹದಲ್ಲಿ (8 ಪುಟ) ಆಲೂಗಡ್ಡೆ, ಗೆಣಸು, ಮರಗೆಣಸು, ಮುಂಡಿ, ಮಾವುಶುಂಠಿ, ಕೆಸುವಿನ ಗೆಡ್ಡೆ - ಈ ಗೆಡ್ಡೆಗೆಣಸುಗಳಿಂದ ಹಲವಾರು ಅಡುಗೆ, ತಿನಿಸು ಹಾಗೂ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ಸರಳವಾಗಿ ವಿವರಿಸಲಾಗಿದೆ. ಕೊನೆಯ (ಇಂಗ್ಲಿಷ್) ದೀರ್ಘ ಲೇಖನ: The Healing Power of Herbal Leaves. ಇದರಲ್ಲಿದೆ 33 ಸೊಪ್ಪುಗಳ ಔಷಧೀಯ ಗುಣಗಳ ವಿವರವಾದ ಮಾಹಿತಿ: ನುಗ್ಗೆಸೊಪ್ಪು, ಹರಿವೆಸೊಪ್ಪುಗಳಿಂದ ಶುರು ಮಾಡಿ ಕರಿಬೇವು,ವೀಳ್ಯದೆಲೆ, ಅಮೃತಬಳ್ಳಿ, ಲೋಳೆಸರ ವರೆಗೆ. ಪ್ರತಿ ಮನೆಯಲ್ಲಿಯೂ ಇರಬೇಕಾದ ಈ ಪುಸ್ತಕದಲ್ಲಿ ನಾವು ಅಲಕ್ಷಿಸಿದ ವಿವಿಧ ಗೆಡ್ಡೆಗೆಣಸು ಮತ್ತು ಸೊಪ್ಪುಗಳಲ್ಲಿರುವ ಪೋಷಕಾಂಶಗಳ ಮಾಹಿತಿ ತುಂಬಿದೆ. ಮಾತ್ರವಲ್ಲ, ಎಲ್ಲರಿಗೂ ಇಷ್ಟವಾಗುವ ಅಡುಗೆ, ತಿನಿಸು ಹಾಗೂ ಖಾದ್ಯಗಳನ್ನು ಇವುಗಳಿಂದ ಹೇಗೆ ತಯಾರಿಸಬಹುದು ಎಂಬ ಮಾಹಿತಿಯೂ ಲಭ್ಯ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹150.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?