ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಏಪ್ರಿಲ್ ೨೫

ಬಾಳ ಪಥ

ಚೈತ್ರನಾಗಮನದ ಸುಳಿವು ತೋರುತಿರೆ ತರು-ಲತಾದಿಗಳು ಮೈ-ಪುಳಕಗೊಂಡಿವೆ ಗೆಲುವು ತೋರಿವೆ ಸಿಂಗರಿಸಿ ಕೊಂಡಿವೆ ಮುಗುಳು ನಕ್ಕಿವೆ ನಸು-ಬಾಗಿ ತುಸು-ಓರೆಯಾಗಿವೆ.. ಹುದುಗಿದೆದೆಯ-ಭಾವವು ಸೂರೆಗೊಂಡಿದೆ-ಗಾನವು ಆಹಾ! ಚೆಲವು ಪರಿಸರವು... ಹೇಳಲಾಗದ ಆಹ್ಲಾದ...

Sarojini Angadi · ೫೬೩ ವೀಕ್ಷಣೆಗಳು
ಓದಿ
ಏಪ್ರಿಲ್ ೨೫

ನೀ ಬಾಲಕೃಷ್ಣ

ಹೊನ್ನ ಕಿರಣದಿ ಮಿಂದು ತಂಪಾದ ಗಾಳಿಯನು ಸವಿದು ನೆನಹು ಮನದಾಗ ಅರಳಿ ಪ್ರೀತಿ ಎದೆಯಾಗ ತುಂಬಿ ನೀ ನಡೆವಾಗ ನುಡಿವಾಗ ನಗುವಾಗ ಅಳುವಾಗ ಜೇನು ಹನಿ ತೊಟ್ಟಿಕ್ಕಿ ಬಾಳ ಕೊಡ ತುಂಬಿ ಉಕ್ಕಿ.. ಕಂದ ನೀ ಬಂದೆ ಬಾಳಲ್ಲಿ ಮುಂಜಾನೆ ರವಿಕಿರಣದಂತೆ!!

Sarojini Angadi · ೫೩೬ ವೀಕ್ಷಣೆಗಳು
ಏಪ್ರಿಲ್ ೨೫

ಜಗದಿ ನನಗಾಗಿ..

ಮನೆ ಖಾಲಿಯಾಗಿ ಮನ ಬರಿದಾಗಿ ನಾ ಕುಳಿತಾಗ ಗಳಿಗೆ ಎಣಿಸಿ ಪವನ ವಾಹನವೇರಿ ನೀ ಬಂದೆ ನೆನಪಾಗಿ ಅರಿದೆ ಆಸರೆಯಾಗಿ ಕತ್ತಲಲಿ ಬೆಳಕಾಗಿ ಬೆಂದವಗೆ ನೆಳಲಾಗಿ ಹೃದಯ ತುಂಬುತ ಬಂದೆ ದಾರಿ ತೋರುತ ನಿಂದೆ ದೂರ ವಿನಿತಿಂದು ದಾಹ ಅರಿತಿಂತು ಬಳಿಯೆ ಬಂದಿರುವೆ ನ...

Sarojini Angadi · ೫೪೫ ವೀಕ್ಷಣೆಗಳು
ಮೂಢ ಉವಾಚ - 349
ಏಪ್ರಿಲ್ ೨೨

ಮೂಢ ಉವಾಚ - 349

ನಂಬಿಕೆಯ ಮಿತ್ರರಲಿ ಮತ್ಸರವು ಒಳನುಸುಳೆ ಗೆಳೆತನವ ಕೊಳೆಸುವ ಅರ್ಬುದವು ಕಾಡುವುದು| ಚಣಚಣಕೆ ನೋವಿನಲಿ ನರಳುವ ಪಾಡೇಕೆ ಚಿಗುರಿನಲೆ ಚಿವುಟಿಬಿಡು ಮಚ್ಚರವ ಮೂಢ|| -ಕ.ವೆಂ.ನಾ.

kavinagaraj · ೩೮೩ ವೀಕ್ಷಣೆಗಳು
ಮೂಢ ಉವಾಚ - 348
ಏಪ್ರಿಲ್ ೨೨

ಮೂಢ ಉವಾಚ - 348

ನಂಬಿದರೆ ಸತಿ-ಪತಿಯು ನಂಬಿರಲು ಸುತೆ-ಸುತರು ಬಂಧು-ಮಿತ್ರರ ಬಳಗ ನಂಬಿದರೆ ಮಾತ್ರ| ಬಾಳಿನಾ ಪಯಣದಲಿ ನಂಬಿಕೆಯೆ ಆಸರೆಯು ನಂಬಿಕೆಗೆ ನೆರಳಾಗಿ ಬಾಳು ನೀ ಮೂಢ|| -ಕ.ವೆಂ.ನಾ.

kavinagaraj · ೩೭೯ ವೀಕ್ಷಣೆಗಳು
ಮೂಢ ಉವಾಚ - 333
ಏಪ್ರಿಲ್ ೧೭

ಮೂಢ ಉವಾಚ - 333

ನಂಬಿಕೆಯೆ ಕುಸಿದಲ್ಲಿ ಪ್ರೀತಿ ವಿಶ್ವಾಸವದೆಲ್ಲಿ ನಂಬಿದರೆ ಬಾಳು ನಂಬದಿರೆ ಗೋಳು| ಹಿತ್ತಾಳೆ ಕಿವಿಯಿರಲು ಕಾಮಾಲೆ ಕಣ್ಣಿರಲು ನಂಬಿಕೆಗೆ ಎಡೆಯೆಲ್ಲಿ ಹೇಳು ಮೂಢ||

kavinagaraj · ೪೧೨ ವೀಕ್ಷಣೆಗಳು
ಮೂಢ ಉವಾಚ - 332
ಏಪ್ರಿಲ್ ೧೬

ಮೂಢ ಉವಾಚ - 332

ನಿನ್ನ ನೀ ನಂಬಿರಲು ಚಾರಿತ್ರ್ಯ ಸರಿಯಿರಲು ಅವರಿವರನೊಪ್ಪಿಸುವ ಹಂಬಲವು ನಿನಗೇಕೆ?| ನಿನ್ನಾತ್ಮ ಒಪ್ಪಿರಲು ಪರಮಾತ್ಮನೊಪ್ಪನೆ ಟೀಕೆ ಟಿಪ್ಪಣಿ ಸಹಜ ಅಳುಕದಿರು ಮೂಢ||

kavinagaraj · ೬೩೨ ವೀಕ್ಷಣೆಗಳು
ಮೂಢ ಉವಾಚ - 331
ಏಪ್ರಿಲ್ ೧೫

ಮೂಢ ಉವಾಚ - 331

ಹೊಗಳುವವನಲ್ಲ ಶಪಿಸುವವನಲ್ಲವೇ ಅಲ್ಲ ಬಿಟ್ಟಿ ಉಪದೇಶಿಗನಲ್ಲ ತುಟಿಮಾತಿಗನಲ್ಲ| ನೋವನನುಭವಿಸಿ ಸಂತಯಿಸಿ ಜೊತೆಜೊತೆಗೆ ನಿಲುವವನೆ ಗೆಳೆಯ ಮೂಢ||

kavinagaraj · ೩೪೪ ವೀಕ್ಷಣೆಗಳು
ಮೂಢ ಉವಾಚ - 330
ಏಪ್ರಿಲ್ ೧೩

ಮೂಢ ಉವಾಚ - 330

ಹಣಕಾಗಿ ಪರದಾಡಿ ಹಣಕಾಗಿ ಹೆಣಗಾಡಿ ಹಣದೊಡೆಯನಾದೊಡೆ ಬೀಗದಿರು ಜಾಣ| ಕುಣಿಕುಣಿವ ಕಾಂಚಾಣ ತುಳಿದೀತು ಜೋಪಾನ ಹಣಕೆ ದಾಸನವ ಕಡುಬಡವ ಮೂಢ|| -ಕ.ವೆಂ.ನಾ.

kavinagaraj · ೨೯೧ ವೀಕ್ಷಣೆಗಳು
ಮೂಢ ಉವಾಚ - 329
ಏಪ್ರಿಲ್ ೧೨

ಮೂಢ ಉವಾಚ - 329

ಅದು ಏಕೆ ಹೇಗೆಂದು ಭೂತಕಾಲವ ಕೇಳಿ ಸರಿಯಿಲ್ಲವೆಂದು ವರ್ತಮಾನವ ದೂರಿ| ಭವಿಷ್ಯವನು ನೆನೆದು ಭಯಪಡುವ ಪರಿಯ ನರರಿಗಿತ್ತಿಹನವನು ಹಿರಿದಚ್ಚರಿಯ ಮೂಢ||

kavinagaraj · ೨೯೬ ವೀಕ್ಷಣೆಗಳು
ಮೂಢ ಉವಾಚ - 328
ಏಪ್ರಿಲ್ ೧೧

ಮೂಢ ಉವಾಚ - 328

ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು| ಕಳೆಯಿತೆಂದರೆ ಮತ್ತೆ ಸಿಕ್ಕದದು ಜಾಣ ಕಾಲದ ಮಹತಿಯಿದು ಕಾಣು ಮೂಢ||

kavinagaraj · ೩೦೩ ವೀಕ್ಷಣೆಗಳು
ಸೌಪರ್ಣಿಕಾ
ಮಾರ್ಚ್ ೨೬

ಸೌಪರ್ಣಿಕಾ

ಬಯಸಿದಾತ! ಎಲ್ಲರಂತೆ ತಂಪು ನೆರಳ ಕೊಡುವ ಚಪ್ಪರ ಹಗಲಿರುಳು ಬೆಂಬತ್ತಿದ ಕನಸಿಗೆ ತನ್ನ ತಾ ಅಡವಿಟ್ಟಿದ್ದ ಸವಿಭಾವಗಳಿಗೆ ಲಯ ಬದ್ದದಿ ಜೊತೆಗೂಡಿ ಹೆಜ್ಜೆಹಾಕಿದಳು ಅವನೊಡತಿ ಅಳಿಲು ಸೇವೆ ತಮ್ಮದು ಇರಲೆಂದು ನೀರೆರೆದು ತಂಪು ಮಾಡಿದ ಹುಡುಗಾಟದ ಆ ಕನಸಿ...

ಶೃತಿ ಬಿ.ಎಸ್ · ೫೬೯ ವೀಕ್ಷಣೆಗಳು