ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಗೆಳೆಯರ ಗುಂಪು
ಆಗಸ್ಟ್ ೨೬

ಗೆಳೆಯರ ಗುಂಪು

ಹಗಲಿರುಳೆನ್ನದೆ ಸುರಿದಿಹ ಮಳೆಯದು ಈದಿನ ಏತಕೊ ಸುರಿದಿಲ್ಲ ಆಡುವ ವಯಸ್ಸಿನ ಚಿಣ್ಣರ ಮನದಲಿ ಆಡುವ ಆಸೆಗೆ ಕೊನೆಯಿಲ್ಲ ವಾರದ ನಂತರ ಒಟ್ಟಿಗೆ ಸೇರಿತು ಗೆಳೆಯರ ಗುಂಪದು ಸಂತಸದಿ ಊರಿನ ನಡುವಿನ ಬಯಲಿಗೆ ಬಂದರು ತೊಡಗಿದರಾಟಕೆ ಖುಷಿಯಲ್ಲಿ ಬಾನಿನ ಸೂರ್ಯ...

ಓದಿ
ಎಷ್ಟು ಗಳಿಸಿದರೇನು?
ಆಗಸ್ಟ್ ೨೬

ಎಷ್ಟು ಗಳಿಸಿದರೇನು?

ಇವನು ಭೃಷ್ಟ ಎನುವನಾತ ಅವನು ಭೃಷ್ಟ ಎನುವನೀತ ಯಾರ ಮಾತು ಸತ್ಯವೆಂದು ಅರಿಯದಾಗಿದೆ ಇಬ್ಬರಲ್ಲು ಹುಳುಕು ಇದ್ದು ಹೊಡೆದುದೆಲ್ಲ ಜನರ ದುಡ್ಡು ಯಾರು ಎಷ್ಟು ಹೊಡೆದರೆಂದು ಅರಿಯಬೇಕಿದೆ ಮುಷ್ಟಿಯೊಳಗೆ ಗುಟ್ಟನಿಟ್ಟು ವೈರಿಕಡೆಗೆ ನೋಟ ನೆಟ್ಟು ತನ್ನ ಹೊಲ...

ನೀನುಳಿದೆ ಬದಲದೇ...
ಆಗಸ್ಟ್ ೨೪

ನೀನುಳಿದೆ ಬದಲದೇ...

ಕಪ್ಪು ಬಿಳುಪಿನ ಕಾಲ ಸಂದಿದೆ ಈಗ ಬಣ್ಣದ ಜಗವಿದು ನೀನು ಏತಕೆ ರೂಪ ಬದಲದೆ ಹಿಂದಿನಂತೆಯೆ ಉಳಿದುದು ಹೊಸತು ಕಂಡರೆ ಹಳತು ಮೂಲೆಗೆ ಸರಿಸಿ ಬಿಡುವರು ಈ ಜನ ಸೊಗಸಿನೆಲ್ಲವು ತನ್ನದೆನ್ನುತ ಬಳಸಿ ಎಸೆಯುವ ದುರ್ಗುಣ ನಿನ್ನ ಸ್ವಂತಿಕೆ ಉಳಿಸಿಕೊಂಡಿಹೆ ಅದು...

ಒಂದಿಷ್ಟು ಹನಿಗಳು...
ಆಗಸ್ಟ್ ೨೩

ಒಂದಿಷ್ಟು ಹನಿಗಳು...

ಅಧೋಗತಿ ಆದಿ ಶಂಕರ ಉವಾಚ- ತೇನಾ ವಿನಾ ತೃಣಮಪಿ ನಚಲತಿ... ಹಣದ ಹಪಾಹಪಿ- ಪ್ರಜಾಪ್ರಭುತ್ವ ತಲುಪಿ ಬಿಟ್ಟಿದೆ ಅಧೋಗತಿ! *** ದೋಸ್ತಿಯಲಿ ತಂಟೆ! ಒಲಂಪಿಕ್ಸ್ ನಲಿ- ಚೀನಾ ಅಮೇರಿಕಾ ಫ್ರಾನ್ಸ್ ಗಳ ಚಿನ್ನದ ಬೇಟೆಯಂತೆ.... ನಮ್ಮಲ್ಲಿ- ಬೆಂಗಳೂರಿನಿಂದ...

ಕೆ ನಟರಾಜ್ · ೬೮ ವೀಕ್ಷಣೆಗಳು
ದಡದಿ ನಿಂತಳೇತಕೆ?
ಆಗಸ್ಟ್ ೨೨

ದಡದಿ ನಿಂತಳೇತಕೆ?

ನಸುಕಿನಲ್ಲಿ ಮುಸುಕನೆಳೆದು ಖುಷಿಯ ನಿದ್ರೆ ಮಾಡದೆ ಬಿಸಿಲು ತರುವ ಬಿಸಿಗೆ ಬೆದರಿ ನಿಶೆಯಲೆದ್ದು ಬಂದಳೆ ಕೊಡವನೊಂದು ನಡುವಲಿಟ್ಟು ನಡೆದಳಾಕೆ ನೀರಿಗೆ ಕುಡಿವ ಜಲವ ಕೊಡದಿ ತುಂಬಿ ದಡದಿ ನಿಂತಳೇತಕೆ ಕೊಳದಲಿಳಿದು ಜಳಕ ಗೈದು ಬಳುಕುತಿರುವ ಬಾಲೆಗೆ ಗೆಳ...

ಧನಿಕರಿಗೆ ಸೀಮಿತವೇ ?
ಆಗಸ್ಟ್ ೨೨

ಧನಿಕರಿಗೆ ಸೀಮಿತವೇ ?

ನಗುವೆಂಬ ಸಿರಿಯೊಂದು ಮೊಗದಲ್ಲಿ ಮೂಡಿಹುದು ಸೊಗಸಾದ ನೋಟವಿದು ಕಣ್ಣಮುಂದೆ ಹಗಲಲ್ಲಿ ದುಡಿಮೆಯಲಿ ಮಗುವ ಮುದ್ದಿಸೆ ಬಿಡನು ಬಿಗುಮಾನದೆಜಮಾನ ಬೆನ್ನ ಹಿಂದೆ ಹಸಿವನ್ನು ನೀಗಿಸಲು ಬಿಸಿಲಲ್ಲಿ ದುಡಿವವಳು ವಸುಧೆಯಂತೆಯೆ ನಾರಿ ಶಾಂತ ಮೂರ್ತಿ ಬಸವಳಿದ ದೇಹ...

ಅವಳು ನೂರು ಗ್ರಾಮಿನ ಹುಡುಗಿ...
ಆಗಸ್ಟ್ ೨೧

ಅವಳು ನೂರು ಗ್ರಾಮಿನ ಹುಡುಗಿ...

ಅದೆಷ್ಟು ಭಾರವಿರಬಹುದು...? ಚಿವುಟಿದಾಗಲೆಲ್ಲ ಚಿಗುರುವ ಹೂವಿನಷ್ಟೆ ಹೂವಿನ ಎಸಳಿನಷ್ಟೆ ಇಲ್ಲಾ.... ಅವಳು ಬೀರುತ್ತಿರುವ ಪರಿಮಳದಷ್ಟೆ...! ಅವಳು ನೂರು ಗ್ರಾಮಿನ ಹುಡುಗಿ… ಇವರಿಗೋ ಪದಗಳ ಲೆಕ್ಕದಲ್ಲಿ ಎಲ್ಲಿ ಜಾರಿಬಿಡುತ್ತಾಳೋ ಎಂಬ ಭಯ... ರಣ ಚಂ...

ಬರಹಗಾರರ ಬಳಗ · ೪೯ ವೀಕ್ಷಣೆಗಳು
ಹುಟ್ಟಿದ ಹಬ್ಬಕೆ ಮಾತೆಯ ದರ್ಶನ
ಆಗಸ್ಟ್ ೨೦

ಹುಟ್ಟಿದ ಹಬ್ಬಕೆ ಮಾತೆಯ ದರ್ಶನ

ಹುಟ್ಟಿದ ಹಬ್ಬಕೆ ನೆಟ್ಟಗೆ ನಡೆದೆವು ಬೆಟ್ಟದ ತಾಯಿಯ ಸನ್ನಿಧಿಗೆ ಮೆಟ್ಟಿಲನೇರಲು ತಟ್ಟನೆ ಕಂಡಿತು ಕಟ್ಟಿದೆ ತೋರಣ ಬಾಗಿಲಿಗೆ ನಾದವ ಕೇಳುತ ಮೋದದಿ ನಡೆದೆವು ಹಾದಿಯಲೆಲ್ಲೆಡೆ ಜನರಿಹರು ಭೇದವ ಮರೆಯುತ ಕಾದಿಹರೆಲ್ಲರು ಈದಿನ ಶ್ರಾವಣ ತೊಡಗಿಹುದು ಅಲ್...

ಬಯಸಿದ ಕಾಟ
ಆಗಸ್ಟ್ ೧೯

ಬಯಸಿದ ಕಾಟ

ಇನಿಯನಿಂದು ಬೆಳಗಿನಲ್ಲೆ ಮನವ ಸೆಳೆದ ನುಡಿಯಲಿ ಕನಸು ನೂರು ಚಿಗುರಿಕೊಂಡು ತನುವು ಹಿಗ್ಗಿ ಖುಷಿಯಲಿ ಎದೆಯ ತುಂಬ ಒಲವ ಲಹರಿ ಮುದವ ಮನಕೆ ತರುತಿದೆ ಹೃದಯ ವೀಣೆ ಮಿಡಿಯತೊಡಗಿ ಮಧುರ ನಾದ ಹೊಮ್ಮಿದೆ ಕಣ್ಣಿನಲ್ಲೆ ಸನ್ನೆ ಮಾಡಿ ಬಣ್ಣ ಬಳಿದ ಕನಸಿಗೆ ಕೆನ...

ಕಾಣುವ ದೇವರು
ಆಗಸ್ಟ್ ೧೭

ಕಾಣುವ ದೇವರು

ತರಗತಿ ಮುಗಿಯಿತು ಶಾಲೆಯು ಬಿಟ್ಟಿತು ನಡೆಯುತ ಸೇರಿದೆ ಮನೆಯನ್ನು ಗುರುಗಳು ಕಲಿಸಿದ ಪಾಠವ ಓದಿದೆ ಬರೆಯುತ ಕಲಿತೆನು ಪಾಠವನು ಶಾಲೆ ಪರೀಕ್ಷೆಯ ಅಂಕವ ತೋರಲು ಅಮ್ಮನು ನೀಡಿದ ಸಿಹಿ ಮುತ್ತು ಮಮತೆಯ ತೋರುತ ಮಡಿಲಲಿ ಕೂರಿಸಿ ತಾಯಿಯು ಕೊಟ್ಟಳು ಕೈತುತ್ತ...

ಮಹಾಲಕ್ಷ್ಮಿ ಬಾರಮ್ಮ
ಆಗಸ್ಟ್ ೧೬

ಮಹಾಲಕ್ಷ್ಮಿ ಬಾರಮ್ಮ

ಭಾಗ್ಯದ ಲಕ್ಷ್ಮಿ ನೀನಮ್ಮ ಬಾರಮ್ಮ ಬಾರಮ್ಮ ಸೌಭಾಗ್ಯದ ಲಕ್ಷ್ಮಿ ನೀನಮ್ಮ ಬಾರಮ್ಮ ಬಾರಮ್ಮ ||ಪ|| ಮಹಾಲಕ್ಷ್ಮಿಯ ವೃತವನು ಮಾಡಿಹೆ ಮನೆಗೆ ಬಾರಮ್ಮ ಪೂಜಾ ಮಂದಿರ ಶುಚಿಯ ಮಾಡಿಹೆ ಮನೆಗೆ ಬಾರಮ್ಮ || ೧ || ಹೊಸ್ತಿಲ ಮುಂದೆ ರಂಗೋಲಿ ಬಿಡಿಸಿಹೆ ಮನೆಗೆ...

ಹಾ ಮ ಸತೀಶ ಬೆಂಗಳೂರು · ೪೭ ವೀಕ್ಷಣೆಗಳು
ಸ್ವಾತಂತ್ರ್ಯದ ಸಂಭ್ರಮ
ಆಗಸ್ಟ್ ೧೬

ಸ್ವಾತಂತ್ರ್ಯದ ಸಂಭ್ರಮ

ಬನ್ನಿ ಗೆಳೆಯರೆ ಓಡೋಡಿ ಬನ್ನಿ ಒಟ್ಟಾಗಿ ಸ್ವಚ್ಛತೆಯ ಮಾಡೋಣ ಬನ್ನಿ ಕಸಕಡ್ಡಿ ಹೆಕ್ಕುತಲಿ ನೆಲವನ್ನು ಗುಡಿಸುತಲಿ ಶಾಲಾ ಪರಿಸರದಿ ಸೇರೋಣ ಬನ್ನಿ ಧ್ವಜಕಟ್ಟೆಯನು ತೊಳೆಯೋಣವಿಂದು ಸತ್ಯಮೇವ ಜಯತೇ ಹೇಳೋಣವೆಂದು ವಿಧವಿಧ ಹೂಗಳ ಅಲಂಕಾರ ಮಾಡುತ ಕಟ್ಟೆಯನ...

ಬರಹಗಾರರ ಬಳಗ · ೪೮ ವೀಕ್ಷಣೆಗಳು