ಕ್ಷಮಿಸಿ. ಈ ಕಂತನ್ನು  ಸುಮಾರು 3 ತಿಂಗಳ ನಂತರ ಮುಂದುವರೆಸುತ್ತಿರುವೆ . ನನ್ನ ಈ ತರಹ ಅನುವಾದಗಳ ಸಂಖ್ಯೆ 350 ನ್ನು , ಹೌದು 350 ನ್ನು ದಾಟಿದೆ.


115) ಮೂಲ ಹಾಡು - ಜೀವನ  ಸೆ ಭರೀ ತೇರಿ ಆಂಖೆ

ನನ್ನ ಅನುವಾದ -

ಬಾಳಿ ಬದುಕಲು ಪ್ರೇರಣೆ ನನಗೆ

ನಿನ ಕಣ್ಣಲ್ಲಿ ಇರುವ ಜೀವಕಳೆ

ಸಾಗರದ ಜಲರಾಶಿಗೂ ಮಿಗಿಲು

ನಿನ ರೂಪ ಲಾವಣ್ಯದ ಜಲರಾಶಿ


ಬಿಡಿಸಿದರೇನು ನಿನ್ನಯ ಚಿತ್ರ

ಹಾಡಿದರೇನು ನಿನ್ನ ಕುರಿತು

ಹಿಡಿಸುವುದೇನು ನಿನ್ನಯ ಚೆಲುವು

ಬಣ್ಣಗಳಲ್ಲಿ ಮತ್ತು ಪದಗಳಲ್ಲಿ

        ಹೃದಯಕೆ ನೀನೇ ಎದೆ ಬಡಿತ

        ಜೀವವೇ ಇರುವಿ ನಾ ಜೀವಿಸಲು


116) ಮೂಲ ಹಾಡು - ಮುಝೆ ತುಂ ಸೆ ಕುಛ ಭೀ ನ ಚಾಹಿಯೆ

ನನ್ನ ಅನುವಾದ -

ನಾ ನಿನ್ನ ಏನನ್ನು ಬೇಡೆನು

ನನ್ನ ಪಾಡಿಗೆ ನನ್ನ ಬಿಟ್ಬಿಡು

ನನ್ನ ಹೃದಯವನ್ನು ಹಿಂಜರಿಯದೆ

ಕಣ್ಣ ಮುಂದೆಯೇ ನೀ ಒಡೆದ್ಬಿಡು


117 ) ಮೂಲ ಹಾಡು - ದಿಲ್  ದಿಯಾ ಹೈ ಜಾನ್ ಭೀ ದೇಂಗೆ

ನನ್ನ ಅನುವಾದ -

ಹೃದಯ ಕೊಟ್ಟೆನು , ಪ್ರಾಣ ಕೊಡುವೆ

ದೇಶವೇ ನಿನಗಾಗಿ ನಾ

ಏನೇ ಕೆಲಸ ನಾ ಮಾಡಲಿ  ದೇಶವೇ ಅದು ನಿನಗಾಗಿಯೇ


118) ಮೂಲ ಹಾಡು - ಜಾನೇಜಾನ್ ಢೂಂಢತಾ ಫಿರ ರಹಾ

ನನ್ನ ಅನುವಾದ -

ಗಂ - ಗೆಳತಿಯೇ

ನಿನ್ನನೂ ಹುಡುಕುತ

ಅಲೆಯುತ ಇರುವೆನು 

ರಾತ್ರಿಹಗಲೆನ್ನದೆ

ಎಲ್ಲಿಹೇ ಓಗೊಡು

ಅಡಗಿಹೇ ಎಲ್ಲಿ ನೀ

ಎಲ್ಲಿ ನೀ


ಹೆ - ಇಲ್ಲೆ ನಾ


ಗಂ - ಸನಿಹವೇ ನಿಂತಿಹೇ ,

ಎದೆಯಲೇ ಅಡಗಿಹೇ

ನನಗಿದೂ ತಿಳಿಯದೇ ಹೋಯಿತು

ಎದೆಯಲೇ ಇಣುಕದೇ

ಲೋಕವ ಹುಡುಕಿದೇ

ಎಲ್ಲಿ ನೀ


ಹೆ -  ಇಲ್ಲೆ ನಾ


119) ಮೂಲ ಹಾಡು - ಮುಝೆ ತುಮಸೆ ಮುಹಬ್ಬತ್ ಹೈ


ನನ್ನ ಅನುವಾದ :

ನಂಗೇ ನಿನ್ನಲ್ಲಿ ಉಂಟು ಪ್ರೀತಿ

ಹೇಳದೆ ನಾ ಇರಲಾರೆ

ಮಾಡಲಿ ಏನು ?

ಹೇಳದೆಯೂ ನಾ ಇರಲಾರೆ


120) ಮೂಲ ಹಾಡು -  ಕೈಸೆ  ಜಿಯೂಂಗಾ ಮೈ


ನನ್ನ ಅನುವಾದ :

ಬದುಕೇನು ನಾ ಹೇಗೆ

ನೀನು ಆಗದೆ ಸಂಗಾತಿ

ನನ ಸಂಗಾತಿ


121) ಮೂಲ ಹಾಡು - ಜಾತೀ ಹೂಂ ಮೈ


ನನ್ನ ಅನುವಾದ:

ಹೆ - ಹೋಗ್ತೀನಿ ನಾ

ಗಂ - ಏನವಸರ ?

ಹೆ - ಎದೆ ಬಡ್ಕೋತಿದೆ

ಗಂ - ಅದು ಯಾತಕೆ ?

ಹೆ - ಪುಕ ಪುಕ ಒಳಗಡೇ

ನಾ ಪ್ರೀತಿ ಮಾಡ್ತಾ ಇದ್ದೀನಿ

ಗಂ - ಇಷ್ಟೊಂದು ಹೆದರ್ತಿಯ ನೀನು

ಅದು ಹೇಗೆ ಮಾಡ್ತೀಯಾ ಪ್ರೀತಿ


122) ಮೂಲ ಹಾಡು - ಮಾಝೀ ರೆ ನಯ್ಯಾ ಢೂಂಢೇ ಕಿನಾರಾ


ನನ್ನ ಅನುವಾದ:

ಈ ದೋಣೀ ಹೇಗೆ ಹುಡುಕುತಿದೆ ತೀರ

ಒಂದಲ್ಲ ಒಂದು ಹುಡುಕಾಟದಲ್ಲಿ ಈ ಜಗವೆಲ್ಲ

123) ಮೂಲ ಹಾಡು - ಸುಹಾನೀ ಚಾಂದನೀ ರಾತೇ


ನನ್ನ ಅನುವಾದ:

ತಂಪಾದ ಹುಣ್ಣಿಮೆ ರಾತ್ರಿ

ನನ್ನನ್ನು ಮಲಗಲೂ ಬಿಡದು


124) ಮೂಲ ಹಾಡು -  ದಿಲ್ ಹೈ ಕೆ ಮಾನತಾ ನಹೀ


ನನ್ನ ಅನುವಾದ:

ಈ ಹೃದಯ ತಾ ಕೇಳದು

ಈ ಪ್ರೀತಿ ಪ್ರೇಮ

ಬೇಡ ಬೇಡ ನಿಂಗೆ

ಎಂದರೂ ಕೇಳದು


125) ಮೂಲ ಹಾಡು -  ಜಬ್  ಭೀ ಯಹ ದಿಲ್ ಉದಾಸ ಹೋತಾ ಹೈ


ನನ್ನ ಅನುವಾದ:

ಮನಸು ಉದಾಸೀನವಾಗಿರಲು

ಅರಿಯೆ ಯಾರು ಇದ್ದಾರೆ ನನ್ನ ಬಳಿ