ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.


126) ಮೂಲ ಹಾಡು -  ಮೈ ಶಾಯರ್ ತೋ ನಹೀಂ


ನನ್ನ ಅನುವಾದ:

ನಾನೇನೂ ಕವಿ ಅಲ್ಲ

ಆದರೆ ಅವಳ ಕಂಡ ಗಳಿಗೆ

ನನಗೆ

ಕವಿತ್ವ ಒಲಿಯಿತು

127) ಮೂಲ ಹಾಡು -  ಗೀತ ಗಾತಾ ಹೂಂ ಮೈ


ನನ್ನ ಅನುವಾದ:


ಹಾಡ ನಾ ಹಾಡುವೆ

ಮುಗುಳು ನಗೆ ಬೀರುವೆ

ನಗುತಿರುವೆ ನಾ ಎಂದು

ಕೊಟ್ಟಿದ್ದೆ ಭಾಷೆ

ಅದಕೆಂದೆ ನಾನು

ನಗುತಾನೇ ಇರುವೆ.


128 ) ಮೂಲ ಹಾಡು - ನ ಯಹ್ ಚಾಂದ್ ಹೋಗಾ


ನನ್ನ ಅನುವಾದ:

ಈ ಚಂದ್ರ ಇಲ್ಲದಾಗಲೂ

ಈ ತಾರೆ ಇಲ್ಲದಾಗಲೂ

ನಾನಿರುವೆ ನಿನ್ನ ಸಂಗಾತಿಯಾಗಿ


129) ಮೂಲ ಹಾಡು - ತುಮ್ಹೆ ಗೀತೋ ಮೇ ಡಾಲೂಂಗಾ

ನನ್ನ ಅನುವಾದ:

ಹಾಡುಗಳ ಮಳೆ ಸುರಿಸೇನು

ಬರಲಿ ಶ್ರಾವಣ

ಬರಲಿ ಶ್ರಾವಣ

ಬರಲಿ ಶ್ರಾವಣ


130) ಮೂಲ ಹಾಡು - (ಜಯದೇವ ಕವಿಯ ಸಂಸ್ಕೃತ ಗೀತ ಗೋವಿಂದದಲ್ಲಿ - ಇದು 'ಹಂಸಗೀತೆ' ಸಿನಿಮಾದಲ್ಲಿ ಇದೆ)

ಪತತಿ ಪತತ್ರೆ ವಿಚಲತಿ ಪತ್ರೆ


ನನ್ನ ಅನುವಾದ:

ಎಲೆಗಳು ಅಲುಗಲು ಎಲೆಗಳು ಬೀಳಲು

ನಿನ್ನ ಬರುವಿನ ಶಂಕೆ

ನಿನ್ನ ಹೆಸರನು ಸೂಚಿಸುವಂತೆ

ಊದುವ ತನ್ನ ಕೊಳಲನ್ನ


131)  ಮೂಲ ಹಾಡು - ಕ್ಯಾ ಹುವಾ ತೇರಾ ವಾದಾ


ನನ್ನ ಅನುವಾದ:

ಏನಾಯ್ತು ನಿನ್ನ ಭಾಷೆ

ನಿನ್ನ ಆಣೆ, ಆ ಪ್ರಮಾಣ

ನನ್ನ ನೀನು ಮರೆಯೋ ದಿನವೇ

ನನ್ನ ಪಾಲಿಗೆ ಕೊನೆ ದಿನ ಆದೀತು


132 ) ಮೂಲ ಹಾಡು - (ಜಯದೇವ ಕವಿಯ ಸಂಸ್ಕೃತ ಗೀತ ಗೋವಿಂದದಲ್ಲಿ - ಇದು 'ಹಂಸಗೀತೆ' ಸಿನಿಮಾದಲ್ಲಿ ಇದೆ) ಯಾಹಿ ಮಾಧವ, ಯಾಹಿ ಕೇಶವ


ನನ್ನ ಅನುವಾದ:

ಹೋಗು ಮಾಧವ,  ಹೋಗು ಕೇಶವ

ಹೇಳದಿರು ಕಟ್ಟುಕಥೆಯ

ಹೋಗವಳಾ ಬಳಿ ಬಿದ್ದುಕೊಳ್ಳಲು

ಯಾವಳು ಕಳೆವಳು ನಿನ್ನ ಬೇಸರವ


133 ) ಮೂಲ ಹಾಡು - ರಾಹ ಮೆ ಉನಸೆ ಮುಲಾಕಾತ ಹೋಗಯೀ


ನನ್ನ ಅನುವಾದ:

ಗಂ - ದಾರಿಲಿ ಒಮ್ಮೆ ಸಿಕ್ಕಳು ಅವಳು

ಹೆದರುತಿದ್ದ ಸಂಗತಿ ಘಟಿಸಿತು ಆಗ

ಹೆಂ - ದಾರಿಲಿ ಒಮ್ಮೆ ಸಿಕ್ಕನು ಅವನು

ಹೆದರುತಿದ್ದ ಸಂಗತಿ ಆಯಿತು ನೋಡಿ


134) ಮೂಲ ಹಾಡು -  ಜಾನೆ ವೋ ಕೈಸೆ ಲೋಗ ಥೆ


ನನ್ನ ಅನುವಾದ: 

ಅರಿಯೆನು ಯಾರು

ಪಡೆದರು ಪ್ರೀತಿ

ಪ್ರೀತಿಗೆ ಪ್ರತಿಯಾಗಿ


ನಾನೋ ಬಯಸಿದೆ ಹೂವುಗಳ

ದೊರೆಯಿತು ಮುಳ್ಳಿನ ರಾಶಿ


135)  ಮೂಲ ಹಾಡು -  ಆಜ ಸೆ ಪೆಹಲೆ ಆಜ ಸೆ ಜ್ಯಾದಾ


ನನ್ನ ಅನುವಾದ:  ಇಂದಿಗೂ ಮೊದಲು, ಇಂದಿಗೂ ಮಿಗಿಲು

ಆನಂದವು ಆಗಿರಲಿಲ್ಲ

ಇಷ್ಟು ಸುಂದರ ಇಷ್ಟು ಮಧುರ

ಕ್ಷಣ ಎಂದಿಗೂ ಬಂದಿರಲಿಲ್ಲ