ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.


175)  ಮೂಲ ಹಾಡು -  ಪ್ಯಾರ ಮೇ ಹೋತಾ ಹೈ ಕ್ಯಾ  ಜಾದೂ


ನನ್ನ ಅನುವಾದ: 

ಪ್ರೀತಿಲಿ ಎಂತಹ ಮಾಯಕ ಇಹುದು

ಬಲ್ಲೆ ನೀನು ಬಲ್ಲೆ ನಾನು

ಇರುವುದೇ ಇಲ್ಲ ಮನದ ನಿಯಂತ್ರಣ

ಬಲ್ಲೆ ನೀನು ಬಲ್ಲೆ ನಾನು


ಗುನುಗುನು ಎಂದು ಅಲೆವುದು ಏಕೆ

ದುಂಬಿಯು ತಾ ತೋಟದಲಿ

ತಿಂಗಳ ರಾತ್ರಿ ಏಕೆ ಚಕೋರ

ಹುಚ್ಚಾಗುವುದು ಹೇಳು ನೀನು

ಚೈತ್ರದಿ ಏಕೆ ಕೋಗಿಲೆ ಕೂಗು

ಬಲ್ಲೆ ನೀನು ಬಲ್ಲೆ ನಾನು


ಚೈತ್ರ ಮತ್ತು ಚಿಗುರಿನ ಹಾಗೆ

ಶ್ರಾವಣ ಮತ್ತು ಮಳೆಯ ಹಾಗೆ

ನಾನೂ ನೀನೂ ನೀನೂ ನಾನೂ

ಬಲ್ಲೆ ನೀನು ಬಲ್ಲೆ ನಾನು


176)  ಮೂಲ ಹಾಡು: - ಸೌ ಸಾಲ್ ಪೆಹಲೆ


ನನ್ನ ಅನುವಾದ : 

ನೂರು ವರುಷದಾ ಹಿಂದೂ

ನಿನ್ನಲ್ಲಿ ಪ್ರೇಮ ಇತ್ತು

ಇಂದೂ ಇದೆ, ಅದು

ಇರುವುದು ಮುಂದಕೂ



177)  ಮೂಲ ಹಾಡು: -  ತೂ ಜಹಾಂ ಮೈ ವಹಾಂ


ನನ್ನ ಅನುವಾದ :

ಎಲ್ಲಿ ನೀ ಅಲ್ಲೆ ನಾ

ಜತೆ ಜತೆಗೇ ಬರುವೆನು ನಾ

ಆಗಸದ ಹಾಗೇ


178)  ಮೂಲ ಹಾಡು: - ಹಂ ತೇರೆ ಶಹರ್ ಮೇ ಆಯೇ ಹೈ


ನನ್ನ ಅನುವಾದ : 

ನಾನು ಬಂದಿರುವೆ ನಿನ್ನ ಊರಿಗೆ

ಪ್ರವಾಸಿಯ ತರಹ

ಕೇವಲ ಒಂದು ಸಲ

ಭೇಟಿಯ ಅವಕಾಶ ಕೊಡು


179)  ಮೂಲ ಹಾಡು: -  ಮೈ ಕಭಿ ಕವೀ ನ ಬನ ಜಾವೂ


ನನ್ನ ಅನುವಾದ :

ನಾನೆಂದೂ ಕವಿ ಆಗಲೊಲ್ಲೆ

ನಿನ ಪ್ರೀತಿಯಲ್ಲೆ ಕವಿತೆ ಇದೆ


180)  ಮೂಲ ಹಾಡು: - ಹಮೆ  ತುಮ್ ಸೆ ಪ್ಯಾರ್ ಕಿತನಾ


ನನ್ನ ಅನುವಾದ :

ನಿನ್ನಲ್ಲಿ ನನಗೆ  ಎಷ್ಟೊಂದು ಪ್ರೀತಿ

ನಾ ಅರಿಯೆ ನಿಜವಾಗಲೂ

ಆದರೆ ನಾ ಬಾಳಲಾರೆ ನೀನಿಲ್ಲದೆ


181)  ಮೂಲ ಹಾಡು: -  ಪ್ಯಾರ್ ಕೆ ಲಿಯೆ ಚಾರ್ ಪಲ್


ನನ್ನ ಅನುವಾದ : 

ಪ್ರೀತಿ ಮಾಡಲು ಸಾಕು ನಾಲ್ಕೇ ಗಳಿಗೆ

ಒಮ್ಮೆ ಇರಲಿಲ್ಲ ನೀನು

ಒಮ್ಮೆ ಇರಲಿಲ್ಲ ನಾನು


182)  ಮೂಲ ಹಾಡು: - ಕಿಸೀ ರಾಹ್ ಮೇ ಕಿಸೀ ಮೋಡ್ ಪರ್

ನನ್ನ ಅನುವಾದ :

ಯಾವ ದಾರಿಯಲ್ಲೂ

ಯಾವ ತಿರುವಲೂ

ಬಿಟ್ಟು ಹೋಗಬೇಡ ನೀ

ನನ್ನನು

ಜತೆಗಾರನೇ ನನ್ನ ಜತೆಗಾರನೇ


183)  ಮೂಲ ಹಾಡು: - ದಿನ್ ಢಲ್ ಜಾಯೆ, ರಾತ್ ನ ಜಾಯ


ನನ್ನ ಅನುವಾದ :

ಸರಿಯಿತು ಹೇಗೋ ಹಗಲು

ಸರಿಯದು ಇರುಳು

ಬರಲಿಲ್ಲ ನೀನು, ನಿನ್ನ

ನೆನಪೊಂದೆ ಬಂದಿತು


184)  ಮೂಲ ಹಾಡು: - ಜೋತ್ ಸೆ ಜೋತ್


ನನ್ನ ಅನುವಾದ :

ದೀಪದೆ ದೀಪವ ಹೊತ್ತಿಸಿರಿ

ಪ್ರೇಮದ ಗಂಗೆಯ ಹರಿಸುತಿರಿ

ಎದುರಿಗೆ ಬರುವ ದೀನರಿಗೆ

ನೆರವಿನ ಹಸ್ತವ ಚಾಚುತಿರಿ