185)  ಮೂಲ ಹಾಡು -  ಜಿಂದಗೀ ಇಕ ಸಫರ ಹೈ ಸುಹಾನಾ 

ನನ್ನ ಅನುವಾದ: 

ಬಾಳಿದು ಸುಂದರ ಪಯಣ

ನಾಳೆ ಏನೆಂದು ಯಾರಿಗ್ಗೊತ್ತು?

186)  ಮೂಲ ಹಾಡು -  ಮೈ ಪಲ ದೋ ಪಲ ಕಾ ಶಾಯರ ಹೂಂ

ನನ್ನ ಅನುವಾದ: 

ಒಂದೆರಡೇ ಗಳಿಗೆಯ ಕವಿ ನಾನು

ಒಂದೆರಡೇ ಗಳಿಗೆ ನನ್ನ ಕವಿತೆ

ಒಂದೆರಡೇ ಗಳಿಗೆ ನನ್ನ ಯೌವನ



187)  ಮೂಲ ಹಾಡು -  ಅಕೇಲೆ ಅಕೇಲೆ ಕಹಾಂ ಜಾ ರಹೇ ಹೋ

ನನ್ನ ಅನುವಾದ: 

ಒಬ್ಬಾಕೆ ಒಬ್ಬಾಕೆ ಎಲ್ಲಿಗ್ಹೋಗುತಿರುವೆ

ನನ್ನ ಕರೆದುಕೊಂಡು ಹೋಗು ಎಲ್ಲಿ ನೀನು ಹೋಗುವೆ

188)  ಮೂಲ ಹಾಡು -  ಜಗ ಘೂಮೆಯಾ  ತೇರಾ ಜೈಸಾ ನ ಕೋಯಿ  

ನನ್ನ ಅನುವಾದ: 

ಜಗ ಸುತ್ತಿದೆ, ನಿನ್ನ ಹಾಗೆ ಯಾರಿಲ್ಲ.

189)  ಮೂಲ ಹಾಡು -  ಇಕ ಮೋಡ್ ಪೆ  ಆತೆ ಹೈಂ

ನನ್ನ ಅನುವಾದ: 

ಒಂದು ತಿರುವಲಿ ಇರುತಾವೆ

ಕೆಲ ಒಳ್ಳೆಯ ದಾರಿಗಳು

ಕೆಲ ಸಾಧಾರಣ ದಾರಿಗಳು

ಯಾವುದು ನನ ದಾರಿ ?

ನಿನ ತಲುಪುವುದೇ ನಂದು

190)  ಮೂಲ ಹಾಡು -  ಮುಜೆ ನೀಂದ್ ನ ಆಯೆ

ನನ್ನ ಅನುವಾದ:  

ನಂಗೆ ಬರಲಿಲ್ಲ ನಿದ್ದೆ

ನಂಗೆ ಸಿಗಲಿಲ್ಲ ಸುಖ



191)  ಮೂಲ ಹಾಡು -  by the rivers of Babilone By Boney M

ನನ್ನ ಅನುವಾದ: 

ಬ್ಯಾಬಿಲೋನ್ ದಂಡೇಲಿ

ನಾವು ಕುಳಿತ ವೇಳೆಲಿ

ನಮ್ಮೂರ ನೆನಪು 

ಅಳುವಂತೆ ಮಾಡಿತು

ಆ ದುಷ್ಟ ಮಂದಿ

ನಮ್ಮನ್ನು ಬಂಧಿಸಿ

ಹಾಡೆಂದರು ಒಂದನು

ನಮ್ಮ ದೇವರ ಹಾಡನು

ಹಾಡುವುದು ಹೇಗೆ

ನಮ್ಮ ದೇವರ ಹಾಡನು

ಪರಕೀಯ ನಾಡಲಿ

192)  ಮೂಲ ಹಾಡು -  ಅಜಹುನ ಆಯೆ ಬಾಲಮಾ

ನನ್ನ ಅನುವಾದ: 

ಬರಲಿಲ್ಲ ಇಂದೂ ರಾಯಾ

ಶ್ರಾವಣ ಕಳೆಯುತಿದೆ

ಅಯ್ಯೋ ಶ್ರಾವಣ ಕಳೆಯುತಿದೆ

193)  ಮೂಲ ಹಾಡು -  ಮೈನು ಇಶ್ಕ ದಾ ಲಗ್ಯಾ ರೋಗ

ನನ್ನ ಅನುವಾದ: 

ನಂಗೆ ಬಂದಿದೆ ಪ್ರೀತಿಯ ರೋಗಾ

ನಾ ಉಳಿಯುವ ಆಸೆ ಇಲ್ಲವೇ

ನಂಗೆ ಹೇಳುವರು ಜನರೆಲ್ಲಾ

ನಾ ಬದುಕುವ ಆಸೆ ಇಲ್ಲವೇ

194)  ಮೂಲ ಹಾಡು -  ಆಜಕಲ ಯಾದ ಕುಛ  ರಹತಾ ನಹೀ

ನನ್ನ ಅನುವಾದ: 

ನಂಗೀಗ ಏನೊಂದು ನೆನಪಲ್ಲಿ ಉಳಿಯಲ್ಲವೇ

ನಿನ್ನ ನೆನಪೊಮ್ಮೆ ನನಗೆ ಬಂದಾದ ಮೇಲೆ

ನೆನಪಾಗೋ ಮೊದಲೇನೇ ನೀ ಬಂದು ಬಿಟ್ಟು

ಮತ್ತೆ ಹೋಗು ನೀ , ನನ ಜೀವ ಹೋದಾದ ಮೇಲೆ