ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.


195)  ಮೂಲ ಹಾಡು - ಧೀರೆ ಧೀರೆ ಪ್ಯಾರ್ ಕೋ ಬಢಾನಾ ಹೈ


ನನ್ನ ಅನುವಾದ:

ಮೆಲ್ಲ ಮೆಲ್ಲ ಪ್ರೀತಿಯನ್ನು ಹೆಚ್ಚಿಸುವ

ಎಲ್ಲ ಎಲ್ಲೆ ಮೀರಿ ಹೋಗುವ

ನನಗೆ ನಿನ್ನ ಪ್ರೀತಿ ಮಾಡಲಿದೆ

ಎಲ್ಲ ಎಲ್ಲೆ ಮೀರಿ ಹೋಗಲಿದೆ.


ಬದುಕು ಹೀಗೆ ಆಗಲಿದೆ

ಖುಷಿ ಇರಲಿದೆ ಎಲ್ಲೆಡೆಗೆ

ಅಷ್ಟು ಪ್ರೀತಿ ಕೊಡುವೆ ನಾನು

ಕೇಳು ನಲ್ಲೆಯೇ


ಇನ್ನು ದುಃಖ ಇರೋದಿಲ್ಲ.

ಪ್ರೀತಿ ಕಡಿಮೆ ಆಗೋಲ್ಲ

ನಲ್ಲ ಕೇಳು

ಇದುವೇ ನನ್ನ ಆಣೆಯು


196)  ಮೂಲ ಹಾಡು - ಸಾಂಸ್ ಮೇ ತೇರಿ ಸಾಂಸ್ ಮಿಲೇ ತೋ


ನನ್ನ ಅನುವಾದ:

ಉಸಿರಲ್ಲಿ ನಿನ್ನ

ಉಸಿರು ಬೆರೆಯೇ

ಉಸಿರು ಬಂದಿತು ನನಗೆ




197)  ಮೂಲ ಹಾಡು - ಕರೋಗೆ ಯಾವ ತೋ


ನನ್ನ ಅನುವಾದ:

ಒಮ್ಮೆ ನೆನಪಾದರೆ ಎಲ್ಲ ನೆನಪಾಗುವುದು

ಸರಿವ ಸಮಯ ತಾ ನಿಂತೇ ಬಿಡುವುದು


198)  ಮೂಲ ಹಾಡು - ಇಕ ಪರದೇಸಿ ಮೇರಾ ದಿಲ್ ಲೇ ಗಯಾ


ನನ್ನ ಅನುವಾದ:

ಹೆ - ಬೇರೆ ಊರವನು ನನ್ನ ಹೃದಯ ಕದ್ದನು

ಹೋಗುವಾಗ ಸಿಹಿ ನೋವ ಕೊಟ್ಟನು

ಗಂ- ಯಾವ ಊರವನು ನಿನ್ನ ಹೃದಯ ಕದ್ದನು

ನಿನ್ನ ಕಂಗಳಲ್ಲಿ ಕಣ್ಣೀರ ತಂದನು


199)  ಮೂಲ ಹಾಡು - ಮಾಂಗ ಕೆ ಸಾಥ್ ತುಮ್ಹಾರಾ


ನನ್ನ ಅನುವಾದ:

ಬೇಡಿದೆ ನಿನ್ನ ಜೊತೆಯನ್ನೇ

ನಾ ಪಡೆದೆನು ಇಡೀ ಜಗವನ್ನೇ


200)  ಮೂಲ ಹಾಡು - ಜನಮ್ ಜನಮ್ ಕಾ ಸಾಥ್ ಹೈ ನಿಭಾನೇ ಕೋ


ನನ್ನ ಅನುವಾದ:

ಜನುಮ ಜನುಮದ ಸಾಂಗತ್ಯ ನಮ್ಮದು

ನಿಭಾಯಿಸಲು ನೂರು ಸಲ ಜನ್ಮ ಎತ್ತಿದೆವು


201)  ಮೂಲ ಹಾಡು - ಜನಮ್ ಜನಮ್ ಕಾ ಸಾಥ್ ಹೈ ಹಮಾರಾ ತುಮಾರಾ


ನನ್ನ ಅನುವಾದ:

ಜನುಮ ಜನುಮದ ಸಾಂಗತ್ಯವು

ನನ್ನದು ನಿನ್ನದು 2

ಸೇರದೆ ಇರಲು ಈ ಬಾಳಲ್ಲಿ

ಮತ್ತೆ ಜನ್ಮ ಎತ್ತುವೆವು



202)  ಮೂಲ ಹಾಡು - ಅನೇ ಸೇ ಉಸಕೆ ಆಯೀ ಬಹಾರ


ನನ್ನ ಅನುವಾದ:

ಬಂದಾಗ ಆಕೆ ಚೈತ್ರದ ಆಗಮನ

ಹೋದಾಗ ಆಕೆ ಅದರ ನಿರ್ಗಮನ

ಇದ್ದಾಳ ಹೀಗೆ ನನ್ನ ನಲ್ಲೆಯು

ನನ ಬದುಕೇ ಅವಳು ನನ್ನ ನಲ್ಲೆಯು


203)  ಮೂಲ ಹಾಡು - ತುಮ್ ದಿಲಕೀ ಧಡಕನ ಮೇ


ನನ್ನ ಅನುವಾದ:

ನನ್ನೆದೆಯ ಮಿಡಿತದಲಿ

ನೀನಿರುವಿ

ನೀನಿರುವಿ


204)  ಮೂಲ ಹಾಡು - ಕ್ಯಾ ಖೂಬ ಲಗತೀ ಹೋ


ನನ್ನ ಅನುವಾದ:

ಏನು ಚಂದ ಕಾಣ್ತಿಯೇ

ಭಾಳ ಚಂದ ಕಾಣ್ತಿಯೇ

ಹೇಳು ಮತ್ತೆ

ಹೇಳ್ತಾ ಇರು

ಇಷ್ಟ ಕೇಳೋಕೆ

ಜೀವನದ ಪ್ರತಿ ಕನಸು

ಈಗ ನನಸು ಅನಿಸುತಿದೆ


ಹೊಗಳುತ ಇರುವೆ ಎಲ್ಲಿ ತನಕ

ಹೇಳು ಎಲ್ಲಿ ತನಕ

ನನ ಎದೆಯಲ್ಲೀ

ಉಸಿರು ಇರುವಾ ತನಕ

ಇರುವೆನು ಇಲ್ಲಿಯ ತನಕ ನಿನ್ನ ಮನದಿ

ನಾನು ನಿನ್ನ ಮನದಿ

ಸೂರ್ಯನು ಇರುವ ತನಕ

ಆಗಸದಿ, ನೀಲಿ ಆಗಸದಿ

ಹೇಳು ಮತ್ತೆ

ಹೇಳ್ತಾ ಇರು

ಇಷ್ಟ ಕೇಳೋಕೆ

ಜೀವನದ ಪ್ರತಿ ಕನಸು

ಈಗ ನನಸು ಅನಿಸುತಿದೆ

ನಂಗೆ ಪ್ರೀತಿ ನಿನ್ನಲ್ಲಿ

ನೀನೇ ಪ್ರಾಣ ನನಗೆಂದೂ


ಖುಷಿ ಆಯಿತೆ ನಿನಗೆ ನನ್ನ ಪಡೆದು

ನೀ ನನ್ನ ಪಡೆದು