ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.


235) ಮೂಲ ಹಾಡು:- ಜಿಂದಗೀ ಕೇ ಸಫರ್ ಮೆ ಗುಜರ್ ಜಾತೇ ಹೈ


ನನ್ನ ಅನುವಾದ : 

ಬಾಳಿನ ಪಯಣದಿ ಸಿಗುವಂಥ ಮಜಲುಗಳು

ಅವು ಮತ್ತೆ ಸಿಗುವುದಿಲ್ಲ

ಓ ಅವು ಮತ್ತೆ ಸಿಗುವುದಿಲ್ಲ


236) ಮೂಲ ಹಾಡು:- ಪೆಹಲೀ ಪೆಹಲೀ ಬಾರ್ ಮುಹಬ್ಬತ್ ಕೀ ಹೈ


ನನ್ನ ಅನುವಾದ : 

ಮೊದಲನೇ ಬಾರಿ ಪ್ರೀತಿ ನಾನು ಮಾಡಿರುವೆ

ಮಾಡಲಿ ಏನು ತೋಚದ ಹಾಗೆ ಆಗಿದೆ


237) ಮೂಲ ಹಾಡು:- ಘರ್ ಸೇ ನಿಕಲತೇ ಹೀ


ನನ್ನ ಅನುವಾದ : 

ಮನೆಯಿಂದ ಹೊರ ಬಿದ್ದು

ಸ್ವಲ್ಪೇ ದೂರ ಹೋದರೆ ಸಾಕು

ದಾರೀಲೇ  ಇಹುದು ಅವಳ ಮನೆ


238) ಮೂಲ ಹಾಡು:- ಮೈ ದುನಿಯಾ ಭುಲಾ ದೂಂಗಾ


ನನ್ನ ಅನುವಾದ : 

ಜಗವನ್ನೆ ಮರೆಯುವೆನು

ನಾ ನಿನ್ನ  ಬಯಸುತಲಿ


239) ಮೂಲ ಹಾಡು:- ಮೇರಿ ಜಿಂದಗೀ ಮ ಅಜನಬೀ ಸೇ


ನನ್ನ ಅನುವಾದ : 

ನನ್ನ ಬಾಳಲಿ ಇದೆ ಅವಳ ನಿರೀಕ್ಷೆಯು

ನಾ ಮಾಡಲೇನು ಅವಳಲ್ಲಿ ನಂಗೆ ಪ್ರೀತಿಯು


240) ಮೂಲ ಹಾಡು:- ಜೋ ತುಂ ಕೋ ಹೋ ಪಸಂದ್


ನನ್ನ ಅನುವಾದ :

ನಿನ್ನಿಷ್ಟ ಹೇಗೆ ಹಾಗೆಯೇ

ನಾ ಮಾತನಾಡುವೆ

ಹಗಲೀಗೆ ನೀ ರಾತ್ರಿ ಎನಲು

ನಾನೂನು ರಾತ್ರಿ ಎನುವೆ


241) ಮೂಲ ಹಾಡು:  ಜಿನ್ಹೆ ನಾಜ ಹೈ ಹಿಂದ್ ಪರ  ಕಹಾಂ ಹೈ


ನನ್ನ ಅನುವಾದ : 

ಭಾರತದ ಬಗ್ಗೆ ಹೆಮ್ಮೆ ಪಡೋರು

ಎಲ್ಲಿದ್ದಾರೆ ಎಲ್ಲಿದ್ದಾರೆ ಎಲ್ಲಿದ್ದಾರೆ


242) ಮೂಲ ಹಾಡು:-  ಲೋಗ ಕಹತೇ ಹೈ


ನನ್ನ ಅನುವಾದ : 

ಜನರು ಹೇಳ್ತಾರೆ ನಾ ಕುಡುಕ ಅಂತ

ಬಹುಶಃ ನೀ ಕೂಡ ಹಾಗೆಯೇ ತಿಳಿದೆ


243) ಮೂಲ ಹಾಡು:- ಓ ಸಾಧಿಕೇತೇರೆ ಬಿನಾ ಭೀ ಕ್ಯಾ ಜೀನಾ


ನನ್ನ ಅನುವಾದ : 

ಸಂಗಾತಿಯೇ

ನೀನಿಲ್ಲದೆ ಬಾಳು ಎಂಥಾ


244) ಮೂಲ ಹಾಡು:- ಕೈಸೆ ದಿನ ಜೀವನ ಮೇ ಆಯೆ


ನನ್ನ ಅನುವಾದ :

ಎಂಥಾ ದಿನ ಬಾಳಲ್ಲಿ ಬಂದವು

ನಮ್ಮ ಜನರೇ ಪರಕೀಯರಾದರು

ಮುಚ್ಚಿ ಬಾಗಿಲು

ಮನೆಯ ಅಂಗಳ

ನಾವು ಕಾಲಿಡದಾದೆವು