ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.


245) ಮೂಲ ಹಾಡು:- ಜೋ ವಾದಾ ಕಿಯಾ


ನನ್ನ ಅನುವಾದ :

ಮಾತು ಕೊಟ್ಟ ಮೇಲೆ

ಉಳಿಸಿಕೊಳ್ಳಬೇಕು

ಲೋಕ ಬೇಡೆಂದರೂ

ಆ ದೇವ್ರೆ ಬೇಡೆಂದರೂ

ನೀನು ಬರಲೇಬೇಕು


246) ಮೂಲ ಹಾಡು:- ಕಸಮೆ ವಾದೇಂ ಪ್ಯಾರ ವಫಾ


ನನ್ನ ಅನುವಾದ : 

ಪ್ರೇಮ ಪ್ರೀತಿ ಆಣೆ ವಚನ

ಎಲ್ಲ ಬರಿಯ ಶಬ್ದಗಳು

ಯಾರಿಗೆ ಯಾರೂ ಸಂಬಂಧ ಇಲ್ಲ

ಎಲ್ಲ ಬರಿಯ ಶಬ್ದಗಳು


247) ಮೂಲ ಹಾಡು : ತುಝೆ ದೇಖಾ ತೋ ಏ ಜಾನಾ


ನನ್ನ ಅನುವಾದ : 

ನಿನ್ನ ಕಂಡಾಗ ನನಗನಿಸಿತು

ಪ್ರೀತಿ ತಾ ಒಂದು ಮರುಳಾಟ ಅಂತ

248) ಮೂಲ ಹಾಡು :  ಹಮ್  ಪ್ಯಾರ ಕರನೇ ವಾಲೇ


ನನ್ನ ಅನುವಾದ : 

ನಾವು ಪ್ರೀತಿ ಮಾಡುವವರು

ಲೋಕಕ್ಕೆ ಹೆದರದೋರು

ಹೊಟ್ಟೆ ಉರಿಸಿಕೊಳ್ಳುವ ಜನರ

ಹೊಟ್ಟೆ ಉರಿಸೋರು

ಪ್ರೀತಿಯಲ್ಲಿ ಬದುಕೋರು ನಾವು

ಪ್ರೀತಿಯಲ್ಲಿ ಸಾಯೋರು


249) ಮೂಲ ಹಾಡು :  ಸಾರೀ ಸಾರೀ ರಾತ ತೇರಿ ಯಾದ್ ಸತಾಯೆ

ನನ್ನ ಅನುವಾದ : 

ಇಡೀ ರಾತ್ರಿಯೆಲ್ಲ ನಿನ್ನ ನೆನಪೆನ್ನ ಕಾಡಿದೆ

ಪ್ರೀತಿಯ ಕಾರಣ ಬರಲಿಲ್ಲ ನಿದಿರೆ

ಬರಲಿಲ್ಲ ನಿದಿರೆ


250) ಮೂಲ ಹಾಡು :  ಬೇಕರಾರ ಕರಕೆ ಯೂ ನ ಜಾಯಿಯೆ


ನನ್ನ ಅನುವಾದ : 

ಮರುಳು ಮಾಡಿ ನನ್ನನು

ಹೀಗೆ ಹೋಗಬೇಡವೇ

ನನ್ನ ಮೇಲೆ ಆಣೆ ಇಹುದು

ಮರಳಿ ಬಾರೆ ನೀ


251) ಮೂಲ ಹಾಡು :  ತಾರೀಫ ಕರೂಂ ಕ್ಯಾ ಉಸಕೀ


ನನ್ನ ಅನುವಾದ : 

ನಾ ಹೊಗಳಲಿ  ಹೇಗೆ ಅವನ

ನಿನ್ನನ್ನು ಸೃಷ್ಟಿಸಿದವನ


252) ಮೂಲ ಹಾಡು :  ತುಮ್ಹಾರೇ ದಿಲ್ ಹಮಾರೇ ಪಾಸ್ ಹೈ


ನನ್ನ ಅನುವಾದ : 

ನಿನ್ನ ಹೃದಯ ನನ್ನಲ್ಲಿದೆ

ನನ್ನ ಹೃದಯ ನಿನ್ನಲ್ಲಿದೆ


253) ಮೂಲ ಹಾಡು :  ಆಫರೀ ಆಫರೀ


ನನ್ನ ಅನುವಾದ :  ಅವಳ ಸೌಂದರ್ಯ ಹೊಗಳುವುದು ಸಾಧ್ಯ ಇಲ್ಲ

ಅದು ದೈವಿಕ , ಅದು ದೈವಿಕ


254) ಮೂಲ ಹಾಡು :  ತೂ ಮಿಲೆ ದಿಲ ಖಿಲೆ


ನನ್ನ ಅನುವಾದ : 

ನೀನೊಲಿದೆ

ಬಾಳು ಬಂಗಾರವೇ

ಬದುಕೋಕೆ

ಬೇಕು ಇನ್ನೇನು ,