285) ಮೂಲ ಹಾಡು : ಏ ಆಯಿನಾ ಜೊ ತುಮ್ಹೆ ಕಮ್ ಪಸಂದ ಕರತೇ ಹೈ
ನನ್ನ ಅನುವಾದ :
ಈ ಕನ್ನಡಿ ನಿನ್ನನು
ಕಡಿಮೆ ಇಷ್ಟ ಪಡುತಾವೆ
ಇವಕೆ ಗೊತ್ತು
ನಾ ನಿನ್ನನು
ಇಷ್ಟಪಡುವೆ ಅಂತ
286) ಮೂಲ ಹಾಡು : ಸಂಡೇ ಕಿ ರಾತ ಧೀ
ನನ್ನ ಅನುವಾದ :
ರವಿವಾರ ರಾತ್ರಿ ಅವತ್ತು
ಮೊದಲನೇ ಭೇಟಿ ಇದ್ದಿತು
ಇದ್ದೆ ನಾನು, ಇದ್ದಳವಳು
ಕೊಂಚ ಮಳೆಯೂ ಇದ್ದಿತು
287) ಮೂಲ ಹಾಡು : ಹಂ ಅಪನೀ ತರಫ ಸೇ ತುಮ್ಹೆ ಚಾಹತೇ ಹೈ
ನನ್ನ ಅನುವಾದ : ನಾನೇನೋ ನಿನ್ನ ಬಯಸುವೆ ನಲ್ಲೆ
ನಿನ್ನದೇ ಏನೂ ಭರವಸೆ ಇಲ್ಲ
288) ಮೂಲ ಹಾಡು : ಅಗರ್ ಹಮ್ ಕಹೇ ಔರ್ ವೋ ಮುಸ್ಕುರಾಯೆ
ನನ್ನ ಅನುವಾದ :
ನಾ ಹೇಳಿದಾಗ
ಅವಳು ನಗುವುದಾದರೆ
ನನ ಬಾಳ ಕೈಯಾರೆ
ನಾ ಹಾಳುಗೈಯುವೆ
289) ಮೂಲ ಹಾಡು : ಇಕ ರಾಧಾ ಇಕ ಮೀರಾ
ನನ್ನ ಅನುವಾದ :
ಒಬ್ಬ ರಾಧೆ ಒಬ್ಬ ಮೀರೆ
ಇಬ್ಬರೂ ಕೃಷ್ಣನ ಬಯಸಿದರು
ಅಂತರವೇನು ಬಯಕೆಗಳಲ್ಲಿ
ಒಬ್ಬಳ ಬಯಕೆ ಪ್ರೇಮವಿರೆ
ಇನ್ನೊಬ್ಬಳದೋ ಅವನ ಕಣ್ನೋಟ
ರಾಧೆಯು ಹುಡುಕಲು ಮಧುಬನದಲ್ಲಿ
ಮೀರೆಯು ಪಡೆದಳು ತನ್ನ ಮನದಲ್ಲಿ
ರಾಧೆಯ ಮೀರಿ ಆತನು ಬೆಳೆದ
ಮೀರೆಯ ಕೈಯನೂ ಮೀರಿದನು
ಒಂದು ಕೊಳಲು ಒಂದು ಗೆಜ್ಜೆ
ಒಬ್ಬ ರಾಧೆ ಒಬ್ಬ ಮೀರೆ
ಅಂತರವೇನು ಬಯಕೆಗಳಲ್ಲಿ
ಒಬ್ಬಳ ಬಯಕೆ ಪ್ರೇಮವಿರೆ
ಇನ್ನೊಬ್ಬಳದೋ ಅವನ ಕಣ್ನೋಟ
ಮೀರೆಯ ಪ್ರಭುವೋ ಗಿರಿಧರನು
ರಾಧೆಗೋ ಮನಮೋಹನನು
ರಾಧೆಯು ಮಾಡಲು ನಿತ್ಯ ಸಿಂಗಾರ
ಮೀರೆಯು ಆದಳು ಜೋಗಿನಿಯೇ
ರಾಣಿ ಒಬ್ಬಳು ದಾಸಿ ಒಬ್ಬಳು
ಇಬ್ಬರ ಬಯಕೆ ಶ್ರೀ ಹರಿಯೇ
ಅಂತರವೇನು ಇಬ್ಬರ ನಡುವೆ
ಒಪ್ಪಳು ಗೆಲುವನು ಒಬ್ಬಳು
ಅರಿಯಳು ಸೋಲನು ಇನ್ನೊಬ್ಬಳು
290) ಮೂಲ ಹಾಡು : ಕೈಸೆ ಮೈ ಕಹೂಂ ತುಝಸೇ
ನನ್ನ ಅನುವಾದ :
ಹೇಳಲಿ ನಾ ಹೇಗೆ
ಇರಲಾರೆ ನಿನ್ನನು ಅಗಲಿ
291) ಮೂಲ ಹಾಡು : ಆಗೇ ಭೀ ಜಾನೇ ನ ತೂ
ನನ್ನ ಅನುವಾದ :
ಮುಂದಿನದೂ ಯೋಚಿಸಬೇಡ ನೀ
ಹಿಂದಿನದೂ ಯೋಚಿಸಬೇಡ ನೀನು
ಏನಿದೆಯೋ ಅದು ಈ ಗಳಿಗೆ ಮಾತ್ರವೇ
292) ಮೂಲ ಹಾಡು : ಹೋ ಐಸಾ ಲಗತಾ ಹೈ ಜೋ ನ ಹುವಾ ಹೋನೇ ಕೋ ಹೈ
ನನ್ನ ಅನುವಾದ :
ಹೋ ಅನಿಸುವುದು ಹೀಗೆ
ಈ ತನಕ ಆಗದ್ದು ಆಗಲಿದೆ
ಹೋ ಅನಿಸುವುದು ಹೀಗೆ
ನನ್ನೆದೆಯು ಈಗ
ಹೋಗಲಿದೆ ಕಳೆದು
ಇಲ್ದಿದ್ರೆ ಹೀಗೆ
ಎದೆ ಬಡಿತ ಏರಿ
ಉಸಿರೇಕೆ ನಿಂತು
ನಿದ್ದೆಯೇಕೆ
ದೂರ ಆಗಿದೆ
293) ಮೂಲ ಹಾಡು : ಪ್ಯಾರ್ ಮಾಂಗಾ ಹೈ ತುಮ್ಹೀಸೆ
ನನ್ನ ಅನುವಾದ :
ಪ್ರೇಮ ಬೇಡುವೆ ನಿನ್ನಲ್ಲಿ
ಇಲ್ಲ ಎನ್ನದಿರು
ಸನಿಹ ಬಂದು ಕುಳಿತು
ನನ್ನ ಪ್ರೀತಿಸು ನೀ
294) ಮೂಲ ಹಾಡು : ರಾಜಾ ಕೋ ರಾನೀ ಸೆ ಪ್ಯಾರ ಹೋ ಗಯಾ
ನನ್ನ ಅನುವಾದ :
ರಾಜಂಗೆ ರಾಣಿ ಮೇಲೆ ಪ್ರೀತಿ ಆಯಿತು
ಮೊದಲನೇ ನೋಟದಲ್ಲಿ ಪ್ರೀತಿ ಆಯಿತು
ಮನಸು ಹೃದಯ ಎರಡಕ್ಕೂ ಗಾಯ
ಕಣ್ಣ ಬಾಣ ಹೃದಯ ಸೀಳಿತು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!