295) ಮೂಲ ಹಾಡು : ಪಾಯೋಜಿ ಮೈನೆ ರಾಮ ರತನ ಧನ ಪಾಯೋ
ನನ್ನ ಅನುವಾದ :
ಸಿಕ್ಕಿತು ಎನಗೆ ರಾಮನಾಮ ಎಂಬ ರತುನ
ವಸ್ತು ಅಮೂಲ್ಯವ ಕೊಟ್ಟನು ಗುರುವು
ಬಲು ಕೃಪೆ ಎನ್ನಲಿ ಮಾಡುತಲಿ
ಜನುಮ ಜನುಮದ ನಿಧಿಯು ಸಿಕ್ಕಿತು
ಉಳಿದವು ಎಲ್ಲ ಕಳೆದರೆ ಏನು?
ಆಗದು ಖರ್ಚು , ಕದಿಯನು ಕಳ್ಳ
ವೃದ್ಧಿಯ ಪಡೆವುದು ನೋಡಿ
ಸತ್ಯದ ನಾವೆ , ಗುರುವೇ ನಾವಿಕ
ಭವಸಾಗರವ ದಾಟಿಸುವ
ಮೀರೆಯ ಪ್ರಭು ಆ ಗಿರಿಧರನು
ಅವನನು ಹೊಗಳಿ ಹಾಡುವೆ ದಿನವೂ
296) ಮೂಲ ಹಾಡು : ಹಮ್ ನೆ ರಖ ತೋ ಲೀ
ನನ್ನ ಅನುವಾದ:
ನಾನು ಇಟ್ಕೊಂಡೆ
ನಿನ್ನ ಚಿತ್ರವನು
ಆದರೆ ಅದು ಬದ
- ಲಾಗದೆ ಇರಲಿ
ಬಣ್ಣ ಬದಲಿಸೋ
ಚಿತ್ರಗಳನು
ನಾನು ನೋಡಿರುವೆ
297) ಮೂಲ ಹಾಡು : ಜಾನಮ್ ಜಾನಮ್ ತೇರಾ ಮೇರಾ ಪ್ಯಾರ
ನನ್ನ ಅನುವಾದ:
ನಲ್ಲೇ ನಲ್ಲೇ
ನಿನ್ನ ನನ್ನ
ಪ್ರೇಮ ಹೊಸತು
ಹಾಡು ಹಳತು
ಧಾಟಿ ಹೊಸತು ನಲ್ಲೇ
298) ಮೂಲ ಹಾಡು : ದೀವಾನೇ ಕಾ ನಾಮ್ ತೋ ಪೂಛೋ
ನನ್ನ ಅನುವಾದ:
ಈ ಮರುಳನ ಹೆಸರು
ಕೇಳಿಕೊ ನೀನು
ವಿಳಾಸ ಕೇಳು
ಉದ್ಯೋಗ ಕೇಳು
299) ಮೂಲ ಹಾಡು : ಯಶೋಮತಿ ಮೈಯಾ ಸೇ
ನನ್ನ ಅನುವಾದ:
ತಾಯಿ ಯಶೋದೆಗೆ
ಕೇಳಿದ ಕೃಷ್ಣ
ರಾಧೇ ಏಕೆ ಬೆಳ್ಳಗೆ?
ನಾನೇಕೆ ಕಪ್ಪು?
ನಸುನಕ್ಕ ಯಶೋದೆ
ಹೇಳಿದಳಿಂತು
ನೀನು ಜನ್ಮವ ತಳೆದೆ
ಕಡುಗತ್ತಲಲ್ಲಿ
ಅದಕೆಂದೆ ಕಪ್ಪು
300) ಮೂಲ ಹಾಡು : ತುಮ್ ಆ ಗಯೇ ತೋ ನೂರ್ ಆ ಗಯಾ
ನನ್ನ ಅನುವಾದ:
ನೀ ಬಂದೆ ಬಾಳಲಿ
ಬಾಳು ಬೆಳಕಾಯಿತು
ಆರಿ ಹಣತೆಯು
ಎಲ್ಲೆಡೆ ಕತ್ತಲಾಗುತಾ ಇತ್ತು
ಬಾಳೋಕೆ ನಂಗೆ ಕಾರಣವು ಸಿಕ್ಕಿತು
ನನ್ನ ಬಾಳಿಗೆ ಇರಲಿಲ್ಲ ಏನೊಂದು ಕಾರಣ
ಹೊರಟೆ ನಾ ಎಲ್ಲಿಗೆ
ಹೊರಟೆ ನಾ ಎಲ್ಲಿಂದ
ಎಂಬ ಅರಿವು ನನಗೆ ಇರಲಿಲ್ಲವೇ
ನಾ ಎಲ್ಲೇ ಹೋಗಲಿ
ಎಲ್ಲೇ ನಾನು ನಿಲ್ಲಲಿ
ಅಲ್ಲೇ ಇದ್ದೆ ನೀನು
ಒಲವ ಹೂಗಳ ಕಾಣಿಕೆಯೊಂದಿಗೆ
301) ಮೂಲ ಹಾಡು : ರೈನಾ ಬೀತ ಜಾಯೆ
ನನ್ನ ಅನುವಾದ:
ರಾತ್ರಿ ಕಳೆದು ಹೋಗುತಿದೆ
ಬರಲಿಲ್ಲ ಶ್ಯಾಮ,
ಒಲಿಯಲಿಲ್ಲ ನಿದಿರೆ
ಒಲಿಯಲಿಲ್ಲ ನಿದಿರೆ
302) ಮೂಲ ಹಾಡು : ಇಶ್ಕ್ ಬಿನಾ ಕ್ಯಾ ಮರನಾ ಯಾರೋ
ನನ್ನ ಅನುವಾದ:
ಪ್ರೀತಿಯು ಇಲ್ಲದೆ ಸಾಯುವುದೇನು?
ಪ್ರೀತಿಯು ಇಲ್ಲದೆ ಬದುಕುವುದೇನು?
ಪ್ರೀತಿಯ ಹೆಸರು ನೀವು ಕೇಳಿಬಲ್ಲಿರಿ
ಪ್ರೀತಿಯ ನಾನು ಮಾಡಿರುವೆ
303) ಮೂಲ ಹಾಡು : ಆಪ್ ಜಿನಕೆ ಕರೀಬ ಹೋತೇ ಹೈ
ನನ್ನ ಅನುವಾದ:
ಯಾರಿಗೆ ನೀನು ತುಂಬ ಸನಿಹ ಆಗಿರುವಿ
ಆತ ನಿಜಕೂ ಬಲು ಭಾಗ್ಯವಂತ
304) ಮೂಲ ಹಾಡು : ನಾ ನಾ ಕರತೇ ಪ್ಯಾರ್ ತುಮ್ಹೀಸೆ ಕರಬೈಠೆ
ನನ್ನ ಅನುವಾದ:
ಒಲ್ಲೆ ಒಲ್ಲೆ ಅನ್ತಾ
ಪ್ರೀತಿ ಮಾಡತೊಡಗಿದೆನು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!