ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
411) ಹಾಡು : ದಿಲ್ ಕೀ ತನಹಾಯೀ ಕೋ
ನನ್ನ ಅನುವಾದ:
ಹೃದಯದ ಏಕಾಕಿತನವ ದನಿಯಾಗಿಸುವೆವು
ನೋವು ಮಿತಿ ಮೀರಲು ನಾವು ಹಾಡಿ ಬಿಡುವೆವು
412) ಹಾಡು : ದಿಲ ಬೇಕರಾರ್ ಸಾ ಹೈ
ನನ್ನ ಅನುವಾದ:
ಹೃದಯಕ್ಕೆ ವಿಶ್ರಾಂತಿ ಇಲ್ಲ
ನಾ ಆಗಿಹೆ ಮರುಳು ನಿನಗೆ
ಕಂಡಂದಿನಿಂದ ನಿನ್ನನು
413) ಹಾಡು : ಜಾನ್ ಓ ಮೇರಿ ಜಾನ್ , ಮೇರಿ ಜಾನ್ , ತೇರೆ ಸೀನೆ ಮೇ
ನನ್ನ ಅನುವಾದ:
ನಲ್ಲ ಓ ನನ ನಲ್ಲ
ನನ ನಲ್ಲ
ನಿನ ಹೃದಯದಲಿ ಮಿಡಿತ ನನ್ನದು
ನನ ಹೃದಯದಲಿ ನಿನ್ನದು
ಬೇರೆ ಬೇರೆ ಇನ್ನು ಬದುಕು ಕಠಿಣ
ಸಾವೇ ಸುಲಭ , ಓ ನನ ನಲ್ಲ
414) ಹಾಡು : ಜಬ ಚಲೀ ಠಂಡೀ ಹವಾ
ನನ್ನ ಅನುವಾದ:
ಗಾಳಿ ತಂಪು ಬೀಸಲು
ಕಪ್ಪು ಮೋಡ ಮುಸುಕಲು
ನಂಗೆ ಓ ನನ್ನ ನಲ್ಲಾ
ನಿನ ನೆನಪು ಬಂದಿತು
415) ಹಾಡು : ಫಿರ್ ವಹೀ ಶಾಮ್
ನನ್ನ ಅನುವಾದ:
ಮತ್ತದೇ ಸಂಜೆ
ಅದೇ ದುಃಖ
ಅದೇ ಒಬ್ಬಂಟಿತನ
ಹೃದಯಕೆ ತಿಳಿ ಹೇಳಲು
ನಿನ ನೆನಪು ಬಂದಿತು
416) ಹಾಡು : ಮೇರಾ ದಿಲ್ ತೇರೆ ಪಾಸ್ (ದಿಲ ಕಾ ಆನಾ ಎಂದು ಶುರು ಆಗುವ ಹಾಡು)
ನನ್ನ ಅನುವಾದ:
ನನ್ನ ಹೃದಯ ಈಗ ನಿನ್ನ ಬಳಿ ಇಹುದು
ನಿನ್ನ ಹೃದಯ ನನ್ನ ಬಳಿ ಇಹುದು
417) ಹಾಡು : ಓ ಮೇರೆ ಸನಮ
ನನ್ನ ಅನುವಾದ:
ಓ ಇನಿಯ ನನ್ನ ಇನಿಯ
ದೇಹ ಎರಡು ಪ್ರಾಣ ಒಂದೇ ನಾವು
ಒಂದೇ ಹೃದಯದ ಎರಡು ಕನಸುಗಳು
418) ಹಾಡು : ಹರ ದಿಲ್ ಜೋ ಪ್ಯಾರ್ ಕರೇಗಾ
ನನ್ನ ಅನುವಾದ:
ಪ್ರೀತಿ ಮಾಡೋ ಪ್ರತಿ ಮನುಜ
ಹಾಡ ಹಾಡುವನು
ಮರುಳ ಮನುಜ
ಅವನು , ಎದ್ದು ಕಾಣುವನು
ಮರುಳ ಮನುಜ
419) ಹಾಡು : ತುಮ ಸೇ ಮಿಲನಾ ಬಾತೇ ಕರನಾ
ನನ್ನ ಅನುವಾದ:
ನಿನ್ನ ಭೇಟಿ
ನಿನ್ನೊಡೆ ಮಾತು
ಬಹಳ ಚಂದ ಅನಿಸ್ತದೆ
ಏನಿದು ಯಾಕಿದು ಯಾರು ತಾ ಬಲ್ಲರು
ಆದರೆ
ಬಹಳ ಚಂದ ಅನಿಸ್ತದೆ
420) ಹಾಡು : ಯಹ ಗಲಿಯಾ ಚೌಬಾರಾ
ನನ್ನ ಅನುವಾದ:
ಬರದಿರು ಈ ಓಣೀಗೆ
ಇನ್ನು ಮುಂದೆ ನೀನು
ನಾ ಹೊರಟೆ ಇಲ್ಲಿಂದ
ನಿನ್ನವರಾರು ಇಲ್ಲಿಲ್ಲ ಈಗ
ನಿನ್ನವರಾರು ಇಲ್ಲಿಲ್ಲ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!