ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.

401) ಹಾಡು : ಹೈ ಅಪನಾ ದಿಲ ತೋ ಆವಾರಾ

ನನ್ನ ಅನುವಾದ:

ನನ್ನ ಹೃದಯ ಒಂದು ರೀತಿ

ಅರಿಯೆ ಯಾರನ್ನು ಒಲಿಯುವುದು

402) ಹಾಡು : ಯೂ ತೋ ಹಮನೆ ಲಾಖ ಹಸೀನಾ

ನನ್ನ ಅನುವಾದ: 

ನೋಡಿಹೆ ನಾನು ಎಷ್ಟೋ ಜನರ

ನಿನ್ನ ಹಾಗೆ ಯಾರಿಲ್ಲ

403) ಹಾಡು : ಸೂರಜ ಹುವಾ ಮಧ್ಯಮ

ನನ್ನ ಅನುವಾದ:

ಸೂರ್ಯ ತಂಪಾದ

ಚಂದ್ರ ಸುಡತೊಡಗಿದ

ಆಗಸದಿ ಯಾಕೋ ಹನಿ ಒಡೆಯಿತು

ಎದೆ ಬಡಿತ ಏರಿತು

ಉಸಿರು ನಿಂತಾಯಿತು

ಓ ನಲ್ಲ ಇದು ನನ ಮೊದಲ ಪ್ರೀತಿಯೇ?

404) ಹಾಡು : ದಿಲ ಕಾ ರಿಶ್ತಾ

ನನ್ನ ಅನುವಾದ:

ಹೃದಯದ ಬಂಧ

ಅದು ಬಲು ಚೆಂದ

ಎಷ್ಟು ಅಮಾಯಕ

ಈ ನನ್ನ ಹೃದಯ

405) ಹಾಡು : ಕಹೋ ನಾ ಪ್ಯಾರ ಹೈ

ನನ್ನ ಅನುವಾದ:

ನನ್ನ ಹೃದಯ

ಈ ಮಾತನ್ನ

ಹೇಳೋಕೆ ಬಯಸಿದೆ

ಹೇಳಲ್ಲ ಪ್ರೀತಿ ಇದೆ

ನನ್ನಲ್ಲಿ ಪ್ರೀತಿ ಇದೆ

ಹಾಂ ನಿನ್ನಲ್ಲಿ ಪ್ರೀತಿ ಇದೆ

406) ಹಾಡು : ಪ್ಯಾರ್ ಕಾ ಕಾಗಜ್ ಪೆ

ನನ್ನ ಅನುವಾದ:

ಪ್ರೀತಿಯ ಕಾಗದದೆ

ಹೃದಯದ ಪೆನ್ನಿಂದ

ಮೊದಲಸಲ ವಂದಿಸುತ

ನಾನು ಅವನಿಗೆ ಪತ್ರ ಬರೆದೆ

407) ಹಾಡು : ಬನ ಕೇ ಕಿತಾಬ್ ತೇರಿ

ನನ್ನ ಅನುವಾದ:

ಪುಸ್ತಕವಾಗಿ ನಾನು

ನಿನ್ನ ಎದೆಗೆ ಒರಗುವೆ

ಹೃದಯಕೆ ಹತ್ತಿರವಾಗಿ

ಎದೆ ಬಡಿತ ಎಣಿಸುವೆ

408) ಹಾಡು : ಫಿರ್ ಅಜನಬಿ ಬನ್ ಜಾವೋ ತುಮ್

ನನ್ನ ಅನುವಾದ: 

ಮತ್ತೆ ಅಪರಿಚಿತೆ

ಆಗಿ ಬಿಡು ನೀ

ಮತ್ತೆ ಗೆಳೆತನ

ನಾ ಮಾಡುವೆ

ಆಗ ಈ ತಪ್ಪನು

ನಾ ಮಾಡೆನು

ಯಾವುದರ ಶಿಕ್ಷೆಯು

ಈ ದುಃಖವು

409) ಹಾಡು : ಗಂಗಾ ಮೇ ಡೂಬಾ

ನನ್ನ ಅನುವಾದ: 

ಗಂಗೆಯಲಿ ಮುಳುಗಿಲ್ಲ

ಜಮುನೆಯಲ್ಲಿ ಅಲ್ಲ

ಮುಳುಗಿ ಹೋಯ್ತು ಮನ

ನಿನ್ನ ಕಣ್ಣಲಿ 

410) ಹಾಡು : ಮುಝೆ ಠಂಡ್ ಲಗ್ ರಹೀ ಹೈ

ನನ್ನ ಅನುವಾದ: 

ನಂಗೆ ಚಳಿ ಆಗುತಿದೆ

ದೂರ ಹೋಗಬೇಡವೆ

ಹೋಗಬೇಡವೆ ಹೋಗಬೇಡ ಹೋಗಬೇಡ

ಎದೆಯಲ್ಲಿ ಬೆಂಕಿ ಹೊತ್ತಿದೆ ನೀ ಸನಿಹ ಬರಬೇಡ

ನೀ ಬರಬೇಡ ನೀ ಬರಬೇಡ