ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
391) ಹಾಡು : (ಮೋಹಬ್ಬತ್ ಇನಾಯತ್ ಅಂತ ಶುರು ಆಗುವ ಹಾಡು) ನಜರ್ ಏ ಹಮಾರಿ ನ ಲಗ ಜಾಯೆ ತುಂ ಕೋ
ನನ್ನ ಅನುವಾದ:
ನನ ಕಣ್ಣೇ ನಿನಗೆ ತಾಕೀತು ಅಂತ
ನಿನ್ನನ್ನ ನಾನು ನೋಡುವುದು ಕಡಿಮೆ
ನೋಡುವುದೇ ಇದ್ದರೆ ಮನ ಸಾರೆ ನೋಡು
ಹೇಳಬೇಡ ಎಂದೂ ನೋಡುವೆನು ಕಡಿಮೆ
392) ಹಾಡು : ಯಹ್ ದೋಸತೀ ಹಂ ನಹಿ ಛೋಡೇಂಗೆ
ನನ್ನ ಅನುವಾದ:
ಈ ಗೆಳೆತನ, ನಾನೆಂದೂ ಮರೆಯೋದಿಲ್ಲ
ಉಸಿರಿರೋ ತನಕವೂ ನಿನ ಸಂಗವ ತೊರೆಯೋದಿಲ್ಲ
ನನ್ನ ಗೆಲುವು ನಿನ್ನದು
ನಿನ್ನ ಸೋಲು ನನ್ನದು
ಕೇಳೋ ಗೆಳೆಯನೇ
ನಿನ್ನ ದುಃಖ ನನ್ನದು
ನನ್ನ ಪ್ರಾಣ ನಿನ್ನದು
ಹೀಗೆ ನಮ್ಮ ಪ್ರೀತಿಯು
ಜೀವ ಪಣಕ್ಕೆ ಇಡುತೀವಿ
ನಿನಗಾಗಿ ಸಹಿಸೇನು
ಇಡೀ ಲೋಕದ ದ್ವೇಷವ
393) ಹಾಡು : ಚುರಾಕೇ ದಿಲ್ ಮೇರಾ
ನನ್ನ ಅನುವಾದ:
ಕದ್ದು ಹೃದಯ
ಎಲ್ಲಿ ಹೋದೆ
ನಿದ್ದೆಯ ಕೆಡಿಸಿ
ಎಲ್ಲಿ ಹೋದೆ
ಹುಚ್ಚಾದೆನು
ಮರುಳಾದೆನು
ಏನಿದು
ಹುಚ್ಚಾಟವು
ಕದ್ದು ಹೃದಯ
ನಾ ಹೋದೆನು
ಎಲ್ಲಿ ಹೋದೆ
ನಾನರಿಯೆನು
ತಲುಪಿದೆನು ನಾ
ನಿನ ಜಾಗವ
ನಾ ಬಂದೆನು
ನಿನ ಓಣಿಗೆ
394) ಹಾಡು : ತೂ ಜೋ ಚಲೆ ಗಯೆ ತೋ
ನನ್ನ ಅನುವಾದ:
ನೀ ಹೊರಟು ಬಿಟ್ಟರೆ
ಆಗುವುದು ಬಹಳ ಕೇಡು
ನಿನ ಕೂಡಿ ಹಾಕಿ ಎದೆಯಲಿ
ಎಸೆವೆ ಬೀಗದ ಕೈಯನು
395) ಹಾಡು : ತುಜ ಸಂಗ ಪ್ರೀತ ಲಗಾಕೆ
ನನ್ನ ಅನುವಾದ:
ನಿನ್ನನ್ನು ಪ್ರೀತಿ ಮಾಡಿದೆ ಗೆಳೆಯಾ ಓ ಗೆಳೆಯಾ
396) ಹಾಡು : ಏಕ ಅಜನಬಿ ಹಸೀನಾ ಸೇ
ನನ್ನ ಅನುವಾದ:
ಒಬ್ಬ ಅಪರಿಚಿತ ಸುಂದರಿ ಜೊತೆ
ಭೇಟಿ ಹೀಗೆ ಆಯಿತು
ಮುಂದೇನಾಯ್ತು ಕೇಳಲೇಬೇಡಿ
ಸ್ವಲ್ಪ ಅಂಥಾ ಸಂಗತಿ ಆಯಿತು
397) ಹಾಡು : ಯಹ್ ಧಡಕನ್ ಮೇರೆ ದಿಲ ಕೀ
ನನ್ನ ಅನುವಾದ:
ನನ್ನೆದೆಯ ಈ ಮಿಡಿತ
ಹೇಳುತಿದೆ ನನ್ನೊಂದಿಗೆ
ಪ್ರೇಮದ ಮೊದಲ ಅನುಭವ ನೋಡಿ
ಸೊಲ್ಪ ಸಿಹಿ ಸೊಲ್ಪ ಕಹಿ
ಆದ್ರೆ ತಾ ಮಾದಕ
398) ಹಾಡು : ತೂ ನಹೀ ತೋ ಜಿಂದಗೀ ಮೆ
ನನ್ನ ಅನುವಾದ:
ಇಲ್ಲದಿರಲು ನೀ ಬಾಳಲ್ಲಿ
ಏನು ಉಳಿಯುವುದು
ಒಂಟಿತನವು ಬಹುಕಾಲವು
ಕಾಡುವುದು ನನ್ನನು
399) ಹಾಡು : ಕಭೀ ತನಹಾಯಿಯೋ ಮೆ
ನನ್ನ ಅನುವಾದ:
ನೀ ಒಬ್ಬಂಟಿ ಇದ್ದಾಗ
ನನ ನೆನಪು ಬಂದೀತು
ಕತ್ತಲೆ ಆವರಿಸುತ ಇರಲು
ಮಿಂಚು ತಾ ಹೊಳೆದೀತು
400) ಹಾಡು : ಜೋ ಹಮನೆ ದಾಸ್ತಾನ್ ಸುನಾಯೀ
ನನ್ನ ಅನುವಾದ:
ನನ್ನ ಕತೆಯ ನಾ ಹೇಳೆ
ಕಂಬನಿ ಏಕೆ ನಿಮ್ಮಲ್ಲಿ
ವಿಪತ್ತು ನಂಗೆ ಒದಗಿರಲು
ಕಂಬನಿ ಏಕೆ ನಿಮ್ಮಲ್ಲಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!