ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ  ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ  ಸಿಕ್ಕರೆ ನೀವೂ ಜತೆಗೆ ಹಾಡಬಹುದು.


461) ಹಾಡು : ತುಮಕೋ ಸಿರ್ಫ ತುಮಕೋ

ನನ್ನ ಅನುವಾದ:

ನಿನ್ನ

ಕೇವಲ ನಿನ್ನ

ಬಯಸಿದೆ ನಾನು

ಬಯಕೆಯ ಆಣೆ

ಇಲ್ಲದೆ ನೀ

ಬದುಕುವದಾದರೆ

ಹೋಗುವೆ ನಾನು ಸತ್ತೇ

ಈ ಹೃದಯ ನಿನ್ನದು

ಅದರ ಬಡಿತ ನಿನ್ನದು

ಹೇಳುವುದು ನಾ ಇಷ್ಟೇ

ಜತೆಗೆ ಇರು ನೀನು


462) ಹಾಡು : ತುಮ್ ಕಿತನೀ ಖೂಬಸೂರತ್ ಹೋ

ನನ್ನ ಅನುವಾದ:

ನೀನೆಷ್ಟು ಚಂದ ಇದ್ದೀಯ

ಇದ ಕೇಳು ನನ್ನ ಎದೆಗೆ

ನೀ ಕೇಳು ಇದರ ಮಿಡಿತವನು

ಅದು ಏಕೆ ನಿನಗೆ ಮರುಳು


463) ಹಾಡು :  ಯೆ ಆಂಖೇ ದೇಖಕರ ಹಂ

ನನ್ನ ಅನುವಾದ:

ಈ ಕಣ್ಣ ನೋಡಿ ನಾನು

ಮರೆಯುವೆ ಇಡೀ ಜಗವನ್ನೇ

ಇವ ಪಡೆಯುವ ಸಲುವಾಗಿ

......


464) ಹಾಡು : ಮೇರಿ ಜಾನ್ ತುಮಸೆ ಮೊಹಬ್ಬತ್

ನನ್ನ ಅನುವಾದ:

ನನ್ನ ನಲ್ಲೇ

ನಿನ್ನಲ್ಲೇ ನಂಗೆ ಪ್ರೀತಿ

ಹೇಳಲಿ ನಾ ಹೇಗೆ

ಇದು ಇಹುದು ವಾಸ್ತವವು

ಹೇಳಲಿ ನಾ ಹೇಗೆ


465) ಹಾಡು : ತೇರೆ ನಾಮ ಸೆ ಮುಜಕೋ

ನನ್ನ ಅನುವಾದ:

ನಿನ್ನ ಹೆಸರಲೆ ಜನರು ನೋಡು ನನ್ನ ತಿಳಿಯುವರು

ನಿನ್ನ ರೂಪವ ನೋಡಿ ಜನರು ನನ್ನ ಗುರುತು ಹಿಡಿಯುವರು

ನಾ ಆಗುವೆ ನಿನ ಗುರುತು

ನೀನು ನನ್ನ ಗುರುತು


466) ಹಾಡು : ಸಾಂಸೋ ಕೆ ಗೀತ ತುಮ ಹೋ

ನನ್ನ ಅನುವಾದ:

ಉಸಿರಿನ ಹಾಡು ನೀನು

ಜೀವನದ ಪ್ರೀತಿ ನೀನು

ಮನವು ಕರೆವುದು ಸದಾ ನಿನ್ನನೇ

ನಿನ್ನ ಹೊರತು ನಾ ಏನೂ ಅಲ್ಲ,

ಜೊತೆಯಾಗಿ ಇರುವ ಪ್ರತಿಜನುಮ


467) ಹಾಡು : ಲಿಖ ದೀ ಹೈ ತೇರೆ ನಾಮ್  ಪ್ಯಾರ ಭರೀ

ನನ್ನ ಅನುವಾದ:

ಬರೆದಿರುವೆ ನಿಂಗೆ ನಾನು

ಪ್ರೇಮ ಭರಿತ ಅರ್ಜಿ ,  ಹೋ

ದುಖ್ಖಾ ಕೊಡು ಸುಖಾ ಕೊಡು

ಎಲ್ಲ ನಿನ್ನ ಮರ್ಜಿ


468) ಹಾಡು : ಔರ ನಹೀ ಕುಛ ತುಮಸೆ ಕೆಹನಾ

ನನ್ನ ಅನುವಾದ:

ನಿನ್ನೊಡನೆ ಇನ್ನೇನು

ಹೇಳುವುದು ಇಲ್ಲ

ಜೊತೆಗಾತಿ

ಜೊತೆಯಲ್ಲಿ ಇರು ನೀ


469) ಹಾಡು : ದಿಲ್ ಜಬ್ ಸೆ ಟೂಟ್ ಗಯಾ

ನನ್ನ ಅನುವಾದ:

ಹೃದಯ ತಾನು

ಒಡೆದಂದಿನಿಂದ

ಹೇಗೆ ಬದುಕೀವಿ

ನಿನಗೆ ಗೊತ್ತೇನು

ಒಮ್ಮೆ ಹೆಚ್ಚು

ಒಮ್ಮೆ ಕಡಿಮೆ

ಕುಡಿತೀವಿ!


470) ಹಾಡು : ಓ ಯಾರಾ ಕೈಸಿ ಹೈ ತೇರಿ ಬೇವಫಾಯಿ ಎಂದು ಶುರು ಆಗುವ ಹಾಡು

ನನ್ನ ಅನುವಾದ:

ಓ ನಲ್ಲೆ

ಬದುಕೋಕೆ ಬಿಡುವುದಿಲ್ಲ

ಈ ಅಗಲಿಕೆ