ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
471) ಹಾಡು : Am i that easy to forget
ನನ್ನ ಅನುವಾದ:
ಜನ ಹೇಳುವರು ನಿನಗೆ
ಬೇರೆ ಯಾರೋ ಸಿಕ್ಕಿಹರು
ಆದರೆ ನಾನು
ನಿನ್ನಯ ಪ್ರೀತಿ ಬಿಡಲಾರೆ
ನಿನ್ನನು ನಾನು ಸುಮ್ಮನೆ ಬಿಡಲಾರೆ
ನನ್ನಲ್ಲಿರುವ ನಿನ್ನ ಪ್ರೇಮ
ಮರೆಯಲು ಆಗೋಲ್ಲ
ನಿಜ ನಾನು ಇನ್ನೊಬ್ಬಳನು
ಹುಡುಕಿಕೋಬಹುದು
ಆದರೆ ನನಗೆ ನೀನೆ ಬೇಕಿದೆ
ನೀನು ಅದು ಹೇಗೆ ಸುಮ್ಮನೆ
ಹೋಗಬಹುದು
ನಾನು ಮರೆಯಲು ನಿನಗೆ ಅಷ್ಟು ಸುಲಭವೆ?
ಹೋಗುವ ಮುನ್ನ ಖಾತರಿಪಡಿಸಿಕೊ
ಅವನ ಪ್ರೀತಿ ನಿನಗೆ ಬೇಕು
ನನ್ನ ಪ್ರೀತಿಗಿಂತ ಅಂತೆ
ನಾನು ಹಿಂದೆ ಕಲೆತೇ ಇಲ್ಲ ಎನುವೆ
ನನ್ನ ನೀನು ಮರೆಯಬಲ್ಲೆ ಆದರೆ
472) ಹಾಡು : ಮೇರಿ ತರಾಹ ತುಂ ಭೀ ಕಭೀ
ನನ್ನ ಅನುವಾದ:
ನನ ಹಾಗೆ ನೀನೂನು ಪ್ರೀತಿ ಮಾಡಿ ನೋಡಲ್ಲ
473) ಹಾಡು : ಛತರೀ ನ ಖೋಲ
ನನ್ನ ಅನುವಾದ:
ಬಿಡಿಸಬೇಡ ಕೊಡೆಯನ್ನ ಮಳೆಗಾಲದಿ
ತೊಯ್ದು ಹೋಗೋಣ ಈ ಸುರಿವ ಮಳೆಯಲ್ಲಿ
474) ಹಾಡು : ಹಮನೆ ತುಮಕೋ ಯೇ ದಿಲ ದೇ ದಿಯಾ
ನನ್ನ ಅನುವಾದ:
ನಾನು ನಿನಗೆ ಹೃದಯ ಕೊಟ್ಟೆ
ಕೇಳಲೆ ಇಲ್ಲನೀ ಯಾರು ಅಂತ
475) ಹಾಡು : ರೋನೆ ನ ದೀಜಿಯೇಗಾ ಎಂದು ಶುರು ಆಗುವ ಹಾಡು
ನನ್ನ ಅನುವಾದ:
ನಿನ್ನಲ್ಲಿ ನನಗೆ ಎಷ್ಟು ಪ್ರೀತಿ
ಇದೆ ಅಂತ ನಾ ಹೇಗೆ ಹೇಳಲಿ
ಎದೆ ಸೀಳಿ ಅದನು ನಾ ತೋರಲೆ
ನಿನಗೀಗ ಅದನು ನಾ ತಿಳಿಸಲೆ
ನೀನಿಲ್ಲದೆ ನಾ ಬಾಳಲಾರೆನು
ನೀನಿಲ್ಲದೆ ನಾ ಸಾಯಲಾರೆನು
476) ಹಾಡು : ತುಜಕೋ ಭೂಲಾ ತೋ ಚಾಹಾ
ನನ್ನ ಅನುವಾದ:
ನಿನ ನಾನು ಮರೆಯಬಯಸಿದೆ
ಆದರೆ ಮರೆಯದಾದೆನು
ನಿನ ಎಷ್ಟು ಮರೆಯಬಯಸಿದೆ
ಅಷ್ಟೇನೆ ನೆನಪಾದೆ ನೀನು
477) ಹಾಡು : ತೂ ಮುಜೆ ಕಬೂಲ
ನನ್ನ ಅನುವಾದ:
ನಂಗೆ ನೀನು ಒಪ್ಪಿಗೆ
ನಿಂಗೆ ನಾನು ಒಪ್ಪಿಗೆ
ಈ ಮಾತಿಗೆ ಸಾಕ್ಷಿ ದೇವನೇ
ದೇವನೇ ಸಾಕ್ಷಿಯು
ದೇವನೇ ಸಾಕ್ಷಿಯು
ದೇವನೇ ಸಾಕ್ಷಿಯು
478) ಹಾಡು : ರಕೀಬೋಸೆ ಹಬೀಬೋಸೇ
ನನ್ನ ಅನುವಾದ:
ಸಾಧು ಸಂತರನು
ದೀನ ದುರ್ಬಲರನು
ಭೇಟಿ ಆಗುತ ಇರು ನೀನು
ಮರೆಯದೇ ಇರು
ನೀ ನನ್ನ ಭೇಟಿ
ಪುರುಸೊತ್ತು ಆದಾಗ
479) ಹಾಡು : ಜಿಸಕೇ ಲಿಯೇ ಸಬಕೋ ಛೋಡಾ
ನನ್ನ ಅನುವಾದ:
ಯಾರಿಗಾಗಿ ಎಲ್ಲ ಬಿಟ್ಟೆ
ಅವಳೆ ಬಿಟ್ಳು ನನ್ನ ಕೈಯ
ಆ ಮೋಸಗಾತಿ ಬೇರೆಯವನ
ಸಂಗಾತಿ ಆಗೇಬಿಟ್ಟಳು
480) ಹಾಡು : ಮೇರಾ ದಿಲ ಕಹನೇ ಲಗಾ
ನನ್ನ ಅನುವಾದ:
ಹೇಳುತಿದೆ ನನ್ನ ಹೃದಯ
ಇಲ್ಲಿ ಯಾರೋ ಇದ್ದಾರೆ
ಹಗಲಿರುಳು ಕಾಡಿದೆ ನೆನಪು
481) ಹಾಡು : ಇಶ್ಕ ನಚಾಯೇ ಜಿಸಕೋ ಯಾರ್
ನನ್ನ ಅನುವಾದ:
ಪ್ರೀತಿಯು ಕುಣಿಸಿದೆ ಅವನನು ನೋಡಿ
ಕುಣಿಯುತ ಇರುವ ಸಂತೆಯ ನಡುವೆ
482) ಹಾಡು : ಜಹಾಂ ಡಾಲ ಡಾಲ ಪರ
ನನ್ನ ಅನುವಾದ:
ಎಲ್ಲಿ ಕೊಂಬೆ ಕೊಂಬೆ ಮೇಲೆ
ಇರುತಾವೆ ಚಿನ್ನದ ಹಕ್ಕಿ
ಆ ಭಾರತ ದೇಶ ನಂದು
ಎಲ್ಲಿ ಸತ್ಯ ಧರ್ಮ ಅಹಿಂಸೆ
ಇರುತಾವೆ ಅಡಿಗಡಿಗೆ
ಆ ಭಾರತ ದೇಶ ನಂದು
ಜೈ ಭಾರತಿ ಜೈ ಭಾರತಿ ಜೈ ಭಾರತಿ
ಎಲ್ಲಿ ರುಷಿ ಮುನಿ ಜನ
ತನ್ಮಯರು ದೇವರ ಜಪದಲ್ಲಿ
ಎಲ್ಲಿ ಪ್ರತಿ ಹುಡುಗ ತಾ ಮೋಹನನು
ಎಲ್ಲಿ ಪ್ರತಿ ಹುಡುಗಿಯು ರಾಧೆ
ಎಲ್ಲಿ ಸೂರ್ಯನು ಮೊದಲಿಗೆ ಬಂದು
ಚೆಲ್ಲುವ ತನ್ನ ಕಿರಣಗಳನ್ನು
ಆ ಭಾರತ ದೇಶ ನಂದು
ಎಲ್ಲಿ ಗಂಗೆ ಯಮುನೆ
ಕೃಷ್ಣೆ ಕಾವೇರಿಯರು
ನಾಲ್ಕು ದಿಕ್ಕಿಗೆ ಹರಿದು
ಅಮೃತ ತಾವು ಕುಡಿಸುವರು
ಎಲ್ಲಿ ಹೂವು ಹಣ್ಣನು ಬೆಳೆಸಿ ತಾವು
ಕಂಪನು ಹರಡುವರೋ
ಆ ಭಾರತ ದೇಶ ನಂದು
483) ಹಾಡು : ನ ಜಾನೆ ಮೇರೆ ದಿಲ ಕೋ
ನನ್ನ ಅನುವಾದ:
ಅರಿಯೆನು ನಾ ನನ ಹೃದಯಕ್ಕೆ ಏನಾಗಿದೆ
ಇಲ್ಲೇ ಇದ್ದಿತು ಇದೋ ಕಳೆದು ಹೋಯಿತು
ಆಗಿ ಹೋಗಿದೆ ನಿಂಗೆ ಪ್ರೀತಿ ಓ ಗೆಳೆಯಾ
ಇಲ್ಲ ಎಂದು ಎಷ್ಟೇ ನೀನು ಹೇಳಿದರೂ
ನನ ಗೆಳೆಯ ಇದೇ ಪ್ರೀತಿ ಕಣೋ
ಆಗಿ ಹೋಗಿದೆ ನಿಂಗೆ ಪ್ರೀತಿ ಓ ಗೆಳತಿ
ಇಲ್ಲ ಎಂದು ಎಷ್ಟೇ ನೀನು ಹೇಳಿದರೂ
ನನ ಗೆಳತಿ ಇದೇ ಪ್ರೀತಿ ಕಣೇ
484) ಹಾಡು : ಅಗರ ದಿಲ ಕಹೇ
ನನ್ನ ಅನುವಾದ:
ಒಂದು ವೇಳೆ
ಹೃದಯ ಹೇಳಿದರೆ
ನಂಗೆ ನಿನ್ನಲ್ಲಿ ಪ್ರೀತಿ ಅಂತ
ಆಗ ನೀನೇನು ಮಾಡುವಿ
485) ಹಾಡು : ನ ಜೀ ಭರ ಕೇ ದೇಖಾ
ನನ್ನ ಅನುವಾದ:
ಮನಸಾರೆ ನೋಡಿಲ್ಲ
ಮಾತನ್ನು ಆಡಿಲ್ಲ
ಮನ ಬಯಸುತಾ ಇಹುದು
ಅವಳ ಭೇಟಿಯಾ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!